ETV Bharat / city

ಹಳೆಯ ವೈಷಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ: ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಸಾವು

author img

By

Published : Jul 13, 2021, 2:18 PM IST

ಹುಬ್ಬಳ್ಳಿಯ ಬೆಂಗೇರಿ ಚಿಕ್ಕು ತೋಟದಲ್ಲಿ ಜುಲೈ 9ರಂದು ಹಳೆಯ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿತ್ತು. ದುರಾದೃಷ್ಟವಶಾತ್ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಕಿಮ್ಸ್​ನಲ್ಲಿ ಸಾವನ್ನಪ್ಪಿದ್ದಾರೆ.

Hubli
ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಸಾವು

ಹುಬ್ಬಳ್ಳಿ: ಹಳೆಯ ವೈಷಮ್ಯದ ಹಿನ್ನೆಲೆ, ತಾಯಿಯ ಹೆಸರಿನಲ್ಲಿನ ಆಸ್ತಿಯನ್ನು ಬರೆಸಿಕೊಂಡು ಮಗನ ಕೊಲೆ ಮಾಡಲು ಮುಂದಾಗಿದ್ದ ಆರೋಪಿಗಳನ್ನು 24 ಗಂಟೆಗಳಲ್ಲಿಯೇ ಹೆಡೆಮುರಿ ಕಟ್ಟುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದರು. ಆದರೆ, ದುರಾದೃಷ್ಟವಶಾತ್ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಕಿಮ್ಸ್​ನಲ್ಲಿ ಸಾವನ್ನಪ್ಪಿದ್ದಾರೆ.

Hubli
ಬಂಧಿತ ಆರೋಪಿಗಳು

ಹುಬ್ಬಳ್ಳಿಯ ಗೋಪನಕೊಪ್ಪ ಸ್ವಾಗತ ಕಾಲನಿ ನಿವಾಸಿಯಾಗಿದ್ದ ವೀರೇಶ ಶಶಿಧರ ಹೆಗಡಾಳ ಎಂಬುವವರ ಮೇಲೆ ತಲ್ವಾರ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಮುಂದಾಗಿದ್ದ ಐವರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಉಸಿರು ಚೆಲ್ಲಿದ್ದಾನೆ.

ಬಂಧಿತರನ್ನು ನಾಗಶೆಟ್ಟಿಕೊಪ್ಪ ಕೆರಿವಂಡಿಯ ಅಲ್ತಾಫ ಮಹ್ಮದಲಿ ಬೇಪಾರಿ, ಮುನ್ನಾ ಮಹ್ಮದಲಿ ಬೇಪಾರಿ, ಬಸವೇಶ್ವರ ಪಾರ್ಕಿನ ಶ್ರೀನಿವಾಸ ದಲಭಂಜನ, ಜಾವೇದ ತಾಳಿಕೋಟೆ, ಇಮ್ರಾನ್ ತಾಳಿಕೋಟೆ ಹಾಗೂ ಮಂಜುನಾಥ ಬಾನಪ್ಪನವರ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹಳೆಯ ವೈಷಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ : ವ್ಯಕ್ತಿಯ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.