ETV Bharat / city

ಕರ್ನಾಟಕ ಸೀನಿಯರ್ ಮಹಿಳಾ ಕ್ರಿಕೆಟ್ ತಂಡಕ್ಕೆ ಧಾರವಾಡದ ಅಶ್ಮೀರಾಬಾನು ಕಣಕಿ ಆಯ್ಕೆ - darawada Ashmeerabanu news

ಧಾರವಾಡದ ಅಶ್ಮೀರಾಬಾನು ಕಣಕಿ ಬಿಸಿಸಿಐ ಆಯೋಜಿಸಿರುವ ಟೂರ್ನಿಯಲ್ಲಿ ಆಡಲು ಕರ್ನಾಟಕ ಸೀನಿಯರ್ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

Ashmeerabanu selected for Karnataka senior women's cricket team
ಕರ್ನಾಟಕ ಸೀನಿಯರ್ ಮಹಿಳಾ ಕ್ರಿಕೆಟ್ ತಂಡಕ್ಕೆ ಧಾರವಾಡದ ಅಶ್ಮೀರಾಬಾನು ಕಣಕಿ ಆಯ್ಕೆ
author img

By

Published : Oct 24, 2021, 1:24 PM IST

ಧಾರವಾಡ: ಧಾರವಾಡದ ರಫೀಕ್​​ ಕಣಕಿ ಹಾಗೂ ನಸೀಮಾ ಬಾನು ದಂಪತಿ ಪುತ್ರಿ ಅಶ್ಮೀರಾ ಬಾನು ಕಣಕಿ ಕರ್ನಾಟಕ ಸೀನಿಯರ್ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಅಂಜುಮನ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಅಶ್ಮೀರಾಬಾನು ಬಲಗೈ ಬೌಲರ್ ಹಾಗೂ ಉತ್ತಮ ಕ್ಷೇತ್ರ ರಕ್ಷಣೆ ಕೂಡ ಮಾಡುತ್ತಾರೆ. ಧಾರವಾಡ ಮುರುಡೇಶ್ವರ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಸತತ 4 ವರ್ಷಗಳಿಂದ ಕ್ರಿಕೆಟ್ ತರಬೇತಿ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲಿಯೂ ತರಬೇತಿ ಪಡೆದಿದ್ದಾರೆ.

ಅಶ್ಮೀರಾಬಾನು ಸಾಧನೆ ಕುರಿತು ತಂದೆ ರಫೀಕ್ ಕಣಕಿ ಪ್ರತಿಕ್ರಿಯೆ

1996ರಲ್ಲಿ ಧಾರವಾಡದ ಆನಂದ ಕಟ್ಟಿ ಎನ್ನುವವರು ರಣಜಿಗೆ ಆಯ್ಕೆಯಾಗಿದ್ದು ಬಿಟ್ಟರೆ ಇವರು ಎರಡನೇಯವರು. ಮಗಳು ಮುಂದೆ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲಿ ಎನ್ನುವುದು ತಂದೆಯ ಆಶಯ. ಅಶ್ಮೀರಾಬಾನು ಸಹೋದರರು ಕ್ರಿಕೆಟ್ ಆಡುವುದನ್ನು ನೋಡಿದ ಮೇಲೆ ಆಸಕ್ತಿ ಹೊಂದಿ ತರಬೇತಿ ಪಡೆದುಕೊಂಡು ಇದೀಗ ಮಹಿಳಾ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ನವರು ಡಿಕ್ಷನರಿಯಲ್ಲಿ ಇಲ್ಲದಿರುವ ಪದ ಬಳಸಿ ಮೋದಿಯನ್ನು ಅವಮಾನಿಸುತ್ತಿದ್ದಾರೆ: ಈಶ್ವರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.