ಹುಬ್ಬಳ್ಳಿ: ಕಳ್ಳತನ ಮಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ,ಆರೋಪಿಯನ್ನ ಬಂಧಿಸುವಲ್ಲಿ ಅಶೋಕನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆರೂರ ಮೂಲದ ಪ್ರಶಾಂತ ಮುತ್ತಣ್ಣ ಬೋರಣ್ಣವರ (21) ಬಂಧಿತ ಆರೋಪಿ. ಈತ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಘಟಕದಲ್ಲಿನ ಅಶೋಕ ನಗರ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಈತನ ಬಂಧನಕ್ಕೆ ಪೊಲೀಸ್ ಕಮೀಷನರ್ ಆರ್.ದಿಲೀಪ್ ತಂಡವೊಂದನ್ನು ರಚಿಸಿ,ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 1,17,000 ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವೊಂದನ್ನ ವಶಕ್ಕೆ ಪಡೆದಿದ್ದಾರೆ.