ETV Bharat / city

ಸೈಕಲ್ ಖರೀದಿಗೆ ಕೂಡಿಟ್ಟ ಹಣದಿಂದ ಸ್ಯಾನಿಟೈಸರ್ ಖರೀದಿ... ಪೌರಕಾರ್ಮಿಕರಿಗೆ ವಿತರಿಸಿದ ಬಾಲಕ! - ಮಾಸ್ಕ್ ,ಹ್ಯಾಂಡ್ ಗ್ಲೌಸ್, ಹಾಗೂ ಸ್ಯಾನಿಟೈಸರ್ ವಿತರಣೆ

ಕೊರೊನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅನೇಕ ಸಹೃದಯಿಗಳನ್ನು ಕಂಡಿದ್ದೇವೆ. ಅಂತವರ ಸಾಲಿಗೆ ಈ ಪುಟ್ಟ ಪೋರ ನಿಲ್ಲುತ್ತಾನೆ. ತನ್ನ ಹುಟ್ಟುಹಬ್ಬ ಆಚರಿಸಕೊಳ್ಳಬೇಕಾದ ಬಾಲಕ ಪೌರಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಆಚರಣೆ ಮಾಡಿದ್ದಾನೆ.

Hubli little boy
Hubli little boy
author img

By

Published : May 23, 2021, 2:31 PM IST

ಹುಬ್ಬಳ್ಳಿ: ಕಿಲ್ಲರ್ ಕೊರೊನಾದಿಂದ ಜನಸಾಮಾನ್ಯರಿಗೆ ಅದೆಷ್ಟೋ ಸಮಸ್ಯೆ ಎದುರಾಗಿದೆ.‌ ಅಲ್ಲದೆ ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿ ವಹಿಸಿರೋ ಫ್ರಂಟ್ ಲೈನ್ ವಾರಿಯರ್ಸ್ ಪೌರಕಾರ್ಮಿಕರು ದಿನನಿತ್ಯ ಅನುಭವಿಸುತ್ತಿರೋ ಸಮಸ್ಯೆಗೆ ಇಲ್ಲೊಬ್ಬ ಕರುಣಾಮಯಿ ಬಾಲಕ ತಾನು ಕೂಡಿಟ್ಟ ಹಣದಿಂದ ಸಹಾಯಹಸ್ತ ಚಾಚಿದ್ದಾನೆ.

ಪೌರಕಾರ್ಮಿಕರಿಗಾಗಿ ಮಿಡಿದ ಬಾಲಕ

ಈತನ ಹೆಸರು ಲಕ್ಷ್ಯ್​, ಏಳು ವರ್ಷದ ಪೋರ. ಇಂದು ಆತನ ಜನ್ಮದಿನ. ಈ ಹಿನ್ನೆಲೆ ತಾನೇ ಕೂಡಿಟ್ಟ ಹಣದಿಂದ ಸೈಕಲ್ ಖರೀದಿಸಬೇಕೆಂಬ ಆಸೆ ಹೊತ್ತಿದ್ದ. ಆದರೆ ಕುಡಿಕೆಯಲ್ಲಿ ಕೂಡಿಟ್ಟ ಹಣವನ್ನ ಇದೀಗ ಪೌರಕಾರ್ಮಿಕರ ಸಹಾಯಕ್ಕಾಗಿ ನೀಡಿದ್ದಾನೆ. ಪ್ರತಿ ದಿನ‌ ಬೆಳಗ್ಗೆ ನಗರ ಪ್ರದೇಶವನ್ನ ಸ್ವಚ್ಛಗೊಳಿಸೋ ಪೌರಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿರುವ ಈ ಬಾಲಕ ಪೌರಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿದ್ದಾನೆ.

ಕಳೆದ ಕೆಲವು ದಿನಗಳ ಹಿಂದೆ ಪೌರಕಾರ್ಮಿಕರು ಕೈಯಲ್ಲಿ ಹ್ಯಾಂಡ್ ಗ್ಲೌಸ್ ಇಲ್ಲದೆ, ಸರಿಯಾದ ಮಾಸ್ಕ್ ಧರಿಸದೆ ನಗರ ಸ್ವಚ್ಛತೆಯಲ್ಲಿ ಮುಂದಾಗಿರೋ ದೃಶ್ಯವನ್ನ ಮಾಧ್ಯಮದಲ್ಲಿ ವೀಕ್ಷಿಸಿರೋ ಈ ಬಾಲಕ, ಪೌರಕಾರ್ಮಿಕರಿಗೆ ತಾನು ಕೂಡಿಟ್ಟ ಹಣದಿಂದ ಮಾಸ್ಕ್, ಹ್ಯಾಂಡ್ ಗ್ಲೌಸ್, ಹಾಗೂ ಸ್ಯಾನಿಟೈಸರ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ.

ಇದನ್ನೂ ಓದಿ: ಸಮಾಜದ ಗಣ್ಯರು ಸಿನಿಮಾ ಕಲಾವಿದರ ಸಹಾಯಕ್ಕೆ ಬರಬೇಕು: ಡಿಸಿಎಂ ಅಶ್ವತ್ಥ್ ನಾರಾಯಣ

ಪರರಿಗೆ 10 ರೂಪಾಯಿ ಖರ್ಚು ಮಾಡೋಕು ಹಿಂದು ಮುಂದು ನೋಡೋ ಇಂತಹ ದಿನಗಳಲ್ಲಿ, ತಾನು ಆಸೆಪಟ್ಟಂತೆ ಸೈಕಲ್ ಖರೀದಿಸಲು ಕೂಡಿಟ್ಟ ಹಣದಿಂದ ಪೌರಕಾರ್ಮಿಕರಿಗಾಗಿ ಸಹಾಯ ಮಾಡಲು ಮುಂದಾಗಿರುವ ಈ ಬಾಲಕನ‌ ಹೃದಯವಂತಿಕೆ‌ ನಿಜಕ್ಕೂ ಮೆಚ್ಚುವಂತದ್ದು. ಕೇವಲ ಏಳು ವರ್ಷದವನಾಗಿರೋ ಈತ ಮಾಧ್ಯಮಗಳಲ್ಲಿ ಪೌರಕಾರ್ಮಿಕರ ಸಮಸ್ಯೆ ಕುರಿತು ವೀಕ್ಷಿಸಿ ಪೌರಕಾರ್ಮಿಕರಿಗೆ ನೆರವಾಗಿದ್ದಾನೆ.

ತಾನು ಕೂಡಿಟ್ಟ ಹಣದಿಂದ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುವುದಾಗಿ ತನ್ನ ತಂದೆಗೆ ತಿಳಿಸಿದ್ದಾನೆ.‌ ಅದರಂತೆಯೇ ಈತನ ತಂದೆ ಬಾಲಕನ ಜೊತೆಗೂಡಿ, ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಮಗನ ಸೈಕಲ್ ಆಸೆಯ ಬದಲಾಗಿ ಸಾಮಾಜಿಕ‌ ಕಳಕಳಿಗೆ ಸ್ಪಂದಿಸಿದ್ದಾರೆ.

ಇದನ್ನೂ ಓದಿ: ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ವಿನಯ್ ಗುರೂಜಿ ಸೂಚನೆ: ಆಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.