ETV Bharat / city

ಧಾರವಾಡ: ಸರ್ಕಾರಿ ಕ್ವಾರಂಟೈನ್ ಮುಗಿಸಿ ಮನೆಗೆ ಹಿಂದಿರುಗಿದ 84 ಮಂದಿ - dharwad government quarantine news

ಹುಬ್ಬಳ್ಳಿ-ಧಾರವಾಡ ಅವಳಿ ನಗರದ 13 ಸ್ಥಳಗಳಲ್ಲಿ ಸರ್ಕಾರಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಿದ್ದು, 303 ಜನರ ಪೈಕಿ ಇಲ್ಲಿಯವರೆಗೆ 84 ಜನರು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹಿಂದಿರುಗಿದ್ದಾರೆ.

ಸರ್ಕಾರಿ ಕ್ವಾರಂಟೈನ್
ಸರ್ಕಾರಿ ಕ್ವಾರಂಟೈನ್
author img

By

Published : Apr 21, 2020, 7:32 PM IST

ಧಾರವಾಡ: ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿಡಲು ಜಿಲ್ಲಾಡಳಿತ ಹುಬ್ಬಳ್ಳಿ-ಧಾರವಾಡ ಅವಳಿ ನಗರದ 13 ಸ್ಥಳಗಳಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ವಾಸವಿದ್ದ 303 ಜನರ ಪೈಕಿ ಇಲ್ಲಿಯವರೆಗೆ 84 ಜನರು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹಿಂದಿರುಗಿದ್ದಾರೆ.

ಏಪ್ರಿಲ್ 2 ರಿಂದ 20 ರವರೆಗೆ ಒಟ್ಟು 303 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್‍ಗೆ ಒಳಪಡಿಸಿದೆ. ಅವರಲ್ಲಿ 84 ಜನರನ್ನು ಮನೆಗೆ ಕಳುಹಿಸಲಾಗಿದೆ. 14 ದಿನಗಳ ಪ್ರತ್ಯೇಕ ವಾಸದಲ್ಲಿದ್ದವರಿಗೆ 5 ನೇ ದಿನ ಮೊದಲ ಬಾರಿ ಗಂಟಲು ಮತ್ತು ಮೂಗಿನ ದ್ರವವನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗುತ್ತದೆ. 12 ನೇ ದಿನ ಎರಡನೇ ಬಾರಿ ತಪಾಸಣೆ ನಡೆಸಲಾಗುತ್ತದೆ. 2 ತಪಾಸಣಾ ವರದಿಗಳು ನೆಗೆಟಿವ್ ಬಂದ ನಂತರ ಅಂತಹ ವ್ಯಕ್ತಿಗಳನ್ನು ಕ್ವಾರಂಟೈನ್‍ನಿಂದ ಬಿಡುಗಡೆ ಮಾಡಲಾಗುತ್ತದೆ.

ಸರ್ಕಾರಿ ಕ್ವಾರಂಟೈನ್‍ನಿಂದ ಬಿಡುಗಡೆ ಆದ ನಂತರ ಅವರು ಮನೆಯಲ್ಲಿಯೇ 14 ದಿನ ಪ್ರತ್ಯೇಕವಾಗಿ ವಾಸಿಸಬೇಕು ಎಂದು ಸೂಚನೆ ನೀಡಿ, ಅವರ ಕೈ ಮೇಲೆ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿದ ಮೊಹರು ಹಾಕಿ ಕಳುಹಿಸಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಸರ್ಕಾರಿ ಕ್ವಾರಂಟೈನ್​ನಲ್ಲಿ 213 ಜನ ಉಳಿದಿದ್ದಾರೆ. ಅವರ ವರದಿಯೂ ನೆಗೆಟಿವ್ ಬಂದರೆ ಮನೆಗೆ ಕಳುಹಿಸಿ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.