ETV Bharat / city

ದಾವಣಗೆರೆ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ! - murder in davanagere

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಂಗನರಸಿ‌ ಗ್ರಾಮದ ಯುವಕ ಹೆಚ್.‌ ಗಿರೀಶ್ (25)ರ ಕೊಲೆಯಾಗಿದೆ.

murder in davanagere
ದಾವಣಗೆರೆಯಲ್ಲಿ ಯುವಕನ ಕೊಲೆ
author img

By

Published : Mar 16, 2022, 1:31 PM IST

ದಾವಣಗೆರೆ: ರಕ್ತದ ಮಡುವಿನಲ್ಲಿ ಯುವಕನ ಶವ ಪತ್ತೆಯಾಗಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ನಗರದ ಮಹಾತ್ಮಾ ಗಾಂಧಿ ಕಾಂಪ್ಲೆಕ್ಸ್‌ನ ಮಳಿಗೆ ಎದುರಿನ ಓಸಿಯನ್ ಕಮ್ಯೂನಿಕೇಷನ್ ಅಂಗಡಿ ಬಾಗಿಲ ಬಳಿ‌ ಮೃತದೇಹ ಪತ್ತೆಯಾಗಿದೆ.

ದಾವಣಗೆರೆಯಲ್ಲಿ ಯುವಕನ ಕೊಲೆ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಂಗನರಸಿ‌ ಗ್ರಾಮದ ಹೆಚ್.‌ ಗಿರೀಶ್ (25) ಕೊಲೆಯಾದ ಯುವಕ. ವ್ಯವಸಾಯ ಮಾಡಿಕೊಂಡಿದ್ದ ಗಿರೀಶ್​ನ ಶವದ ಬಳಿ ಕಲ್ಲು ಬಿದ್ದಿದ್ದು, ತಲೆ‌ ಮೇಲೆ ಕಲ್ಲು ಎತ್ತಿ ಹಾಕಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಜನ ಸಾಮಾನ್ಯರು ಹಾಗೂ ಅಂಗಡಿ ಮಾಲೀಕರು ಅಂಗಡಿ ಬಳಿ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪ್ರೀತಿಯ ಬಲೆಗೆ ಬಿದ್ದು ಮನೆ ತೊರೆಯುತ್ತಿರುವ ನಾರಿಯರು.. ತುಮಕೂರಿನಲ್ಲಿ ಹೆಚ್ಚುತ್ತಿವೆ ನಾಪತ್ತೆ ಪ್ರಕರಣಗಳು!

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ, ಸಿಪಿಐ ಸತೀಶ್, ಪಿಎಸೈ ಸುನಿಲ್ ತೇಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರ ತಂಡದಿಂದ ಪರಿಶೀಲನೆ‌ ಕಾರ್ಯ ಸಾಗಿದ್ದು, ಸಂಪೂರ್ಣ ತನಿಖೆ ಬಳಿಕವೇ ಸತ್ಯ ಹೊರ ಬರಲಿದೆ. ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.