ETV Bharat / city

ಏಕಲವ್ಯನ ವರಸೆ: ಪಾಂಡೋಮಟ್ಟಿ ಶ್ರೀಗಳಿಗೆ ಕಿಡ್ನಿ ದಾನ ಮಾಡಿದ ಭಕ್ತೆ - Davanagere

ಕಳೆದ 2 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಗುರುಬಸವೇಶ್ವರ ಸ್ವಾಮೀಜಿ ಬದುಕುವ ಆಸೆ ಕಮರಿತ್ತು. ಎರಡೂ ಕಿಡ್ನಿ ವೈಫಲ್ಯಕ್ಕೊಳಗಾಗಿ ಡಯಾಲಿಸಿಸ್ ಮೇಲೆ ಬದುಕು ಸವೆಸುತ್ತಿದ್ದರು. ಅಂತಹ ಸಂದರ್ಭದಲ್ಲಿ 32 ವರ್ಷದ ಆಶಾ ಎಂಬ ಮಹಿಳೆ ಒಂದು ಕಿಡ್ನಿ ದಾನ ಮಾಡಿದ್ದು, ಸ್ವಾಮೀಜಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

Pandomatti Swamiji
ಪಾಂಡೋಮಟ್ಟಿ ಶ್ರೀ
author img

By

Published : Oct 21, 2021, 6:58 PM IST

ದಾವಣಗೆರೆ: ಏಕಲವ್ಯ ತನ್ನ ಹೆಬ್ಬರಳನ್ನೇ ಗುರುದಕ್ಷಿಣೆಯಾಗಿ ನೀಡಿರುವ ಸಂಗತಿ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದರೆ, ದಾವಣಗೆರೆ ಜಿಲ್ಲೆಯ ಇಲ್ಲೊಬ್ಬ ಭಕ್ತೆ ತನ್ನ ಗುರುಗಳಿಗಾಗಿ ಕೇಳದೆಯೇ ಗುರು ದಕ್ಷಿಣೆ ನೀಡಿದ್ದಾಳೆ.

ಹೌದು, ಏಕಲವ್ಯನ ಕತೆಗೆ ದಾವಣಗೆರೆಯ ಅಡಕೆ ನಾಡು ಚನ್ನಗಿರಿ ಸಾಕ್ಷಿಯಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಪಾರ ಭಕ್ತರನ್ನು‌ ಹೊಂದಿರುವ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದ ಸ್ವಾಮೀಜಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದಾರೆ‌.

ಪಾಂಡೋಮಟ್ಟಿ ಗುರುಬಸವೇಶ್ವರ ಸ್ವಾಮೀಜಿ

ಕಳೆದ 2 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಗುರುಬಸವೇಶ್ವರ ಸ್ವಾಮೀಜಿ ಬದುಕುವ ಆಸೆ ಕಮರಿತ್ತು. ಎರಡು ಕಿಡ್ನಿ ವೈಫಲ್ಯಕ್ಕೊಳಗಾಗಿ ಡಯಾಲಿಸಿಸ್ ಮೇಲೆ ಬದುಕು ಸವೆಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಸ್ವಾಮೀಜಿಯನ್ನು ಹೇಗಾದರೂ ಮಾಡಿ ಬದುಕಿಸಲೇಬೇಕೆಂದು ತೀರ್ಮಾನಿಸಿದ ಭಕ್ತರ ವೃಂದ ಕಿಡ್ನಿ ಕಸಿ ಮಾಡಿಸಲು ಯೋಚಿಸಿತು. ಒಟ್ಟು 18 ಜನ ಭಕ್ತರು ಉಚಿತ ಕಿಡ್ನಿ ದಾನಕ್ಕೆ ಮುಂದಾಗಿದ್ದರು.

ಕೋವಿಡ್ ಸಂದರ್ಭದಲ್ಲಿ ಕಿಡ್ನಿ ಬದಲಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. 18 ಜನ ಕಿಡ್ನಿ ದಾನಕ್ಕೆ ಮುಂದಾಗಿದ್ದರೂ, ಸ್ವಾಮೀಜಿ ಅವರ ದೇಹ ಪ್ರಕೃತಿಗೆ ಸರಿ ಹೊಂದಲಿಲ್ಲ. ಆ ಸಂದರ್ಭದಲ್ಲಿ ಚನ್ನಗಿರಿ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯೊಬ್ಬರು ಕಿಡ್ನಿ ದಾನ ಮಾಡಲು ಮುಂದಾದರು. 32 ವರ್ಷದ ಆಶಾ ಎಂಬ ಮಹಿಳೆ ಒಂದು ಕಿಡ್ನಿ ದಾನ ಮಾಡಿದ್ದು, ಸ್ವಾಮೀಜಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಒಂದು ವರ್ಷ 2 ತಿಂಗಳ‌ ನಂತರ ಸ್ವಾಮೀಜಿ ಪಾಂಡೋಮಟ್ಟಿಯ ವಿರಕ್ತ ಮಠಕ್ಕೆ ವಾಪಸ್​​ ಆಗಿದ್ದಾರೆ. ಸ್ವಾಮೀಜಿ ಮೊದಲ ಬಾರಿಗೆ ಮಠಕ್ಕೆ ಆಗಮಿಸಿದ ನಂತರ ಇಡೀ ಗ್ರಾಮದಲ್ಲಿ‌ ಹಬ್ಬ ಆಚರಿಸಿ ಅದ್ದೂರಿ ಸ್ವಾಗತ ನೀಡಿದ್ದಾರೆ. ಸ್ವಾಮೀಜಿ‌ಗೆ ಮರು ಜೀವ ನೀಡಿದ ಆ ಮಹಿಳೆಯನ್ನು ಸ್ವತಃ‌ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದ್ದಾರೆ.

ಇಡೀ ಗ್ರಾಮವೇ ಆ ಮಹಿಳೆಗೆ ಅಬಾರಿಯಾಗಿದ್ದು, ಮಹಿಳೆಯ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಸ್ವಾಮೀಜಿ ಅವರಿಗೆ ಕಿಡ್ನಿ ಕಸಿ ಮಾಡಲು ಚಿಕಿತ್ಸಾ ವೆಚ್ಚ 84 ಲಕ್ಷ ರೂ. ಆಗಿದೆ. ಅಲ್ಲದೇ ಸ್ವಾಮೀಜಿ ಮತ್ತೆ ಮಠಕ್ಕೆ ಆಗಮಿಸಿರುವುದು ಒಂದು ರೀತಿಯ ಪವಾಡ ಎನ್ನುತ್ತಾರೆ ಭಕ್ತರು.

ಯಾವುದೇ ರೀತಿಯ ಪ್ರತಿಫಲ ಆಪೇಕ್ಷೆ ಇಲ್ಲದ ಸ್ವಯಂ ಸ್ಪೂರ್ತಿಯಿಂದ ಕಿಡ್ನಿ ದಾನ ಮಾಡಿದ ಆಶಾ ಅವರ ಸೇವೆಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ಅವರ ಈ ತ್ಯಾಗ, ಸೇವಾ ಮನೋಭಾವ ಇತರರಿಗೆ ಸ್ಪೂರ್ತಿಯಾಗಲಿ ಎಂಬುವುದು ನಮ್ಮ ಆಶಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.