ದಾವಣಗೆರೆ: ಭಾರೀ ಮಳೆಯಿಂದ ಹಾನಿಗೀಡಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಬೇತೂರು, ಕಾಡಜ್ಜಿ, ಪುಟಗನಾಳು, ಚಿತ್ತನಹಳ್ಳಿ, ಬಿ.ಕಲ್ಪನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಹಿರೇಮೆಗಳಗೆರೆ, ಬಸಾಪುರ, ಚಿಕ್ಕಮೆಗಳಗೆರೆ, ವೊಡ್ಡಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಿದ್ದೇಶ್ವರ್ ರೈತರ ಸಂಕಷ್ಟ ಆಲಿಸಿದರು.
ಮಳೆ, ಬಿರುಗಾಳಿ ಆರ್ಭಟಕ್ಕೆ ಬಾಳೆ, ತೆಂಗು ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದು, ಆದಷ್ಟು ಬೇಗ ಪರಿಹಾರ ದೊರಕಿಸಿಕೊಡುವಂತೆ ರೈತರು ಮನವಿ ಮಾಡಿದರು.
ಇನ್ನು ರೈತರ ಮನವಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಸಿದ್ದೇಶ್ವರ್ ರೈತರಿಗೆ ಭರವಸೆ ನೀಡಿದರು.