ದಾವಣಗೆರೆ: ದಯವೇ ಧರ್ಮದ ಮೂಲವಯ್ಯ, ಧರ್ಮ ಮನುಷ್ಯನಿಗೆ ಇರಬೇಕು, ಧರ್ಮಕ್ಕಾಗಿ ಮನುಷ್ಯರಲ್ಲ, ಧರ್ಮ ಧರ್ಮದ ಮಧ್ಯೆ ಸಂಘರ್ಷ ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಜನರಿಗೆ ಕರೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಮಠದ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಭಾರತ ದೇಶ ಅನೇಕ ಧರ್ಮ ಜಾತಿ ಪಂಗಡಳಿಂದ ಕೂಡಿದ ದೇಶ. ಯಾವುದೇ ಒಂದು ವರ್ಗ, ಧರ್ಮೀಯರು ಈ ದೇಶದಲ್ಲಿ ಇರುವುದಲ್ಲ. ಬಹುತ್ವ ಇರುವ ರಾಷ್ಟ್ರದಲ್ಲಿ ನಾವು ಭಾರತೀಯರು, ನಾನು ಮೊದಲು ಭಾರತೀಯ ಆ ನಂತರ ನಮ್ಮ ಧರ್ಮ ಪಂಗಡ. ಕುವೆಂಪು ಅವರು ಹೇಳಿದ್ದು ಸರ್ವಜನಾಂಗದ ಶಾಂತಿಯ ತೋಟ, ಎಲ್ಲಾ ಜನರ ಶಾಂತಿಯ ತೋಟವೇ ಭಾರತೀಯ ದೇಶ. ಬಾಬಾ ಸಾಹೇಬ್ ಅಂಬೇಡ್ಕರ್ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ಪಂಚಮಸಾಲಿ ಸಮಾಜದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದವರಿದ್ದಾರೆ: ಪಂಚಮಸಾಲಿ ಸಮಾಜದ ಬೆಳವಡಿ ಮಲ್ಲಮ್ಮ ಮೂರು ಸಾವಿರ ಹೆಣ್ಣುಮಕ್ಕಳ ಸೇನೆ ಕಟ್ಟಿದ್ದರು. ಅವರ ಶೌರ್ಯ ಸಮರ ಕಲೆಯನ್ನು ನೋಡಿ ಶಿವಾಜಿ ಬೆರಗಾಗಿದ್ದರು. ಕೆಳದಿ ಚೆನ್ಮಮ್ಮ, ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಥ್ಯಾಕರೆಯನ್ನು ಕೊಂದಿದ್ದರು. ಸಂಗೊಳ್ಳಿ ರಾಯಣ್ಣ ಗೆರಿಲ್ಲಾ ವಾರ್ ಮಾಡಿ ಚೆನ್ನಮ್ಮನ ಬೆಂಬಲಕ್ಕೆ ನಿಂತಿದ್ದರು. ಕಂಬಳಿ ಸಿದ್ದಪ್ಪ, ಮೈಲಾರ ಮಹಾದೇವಪ್ಪ ರುದ್ರಗೌಡ, ಶಂಕರಗೌಡರನ್ನು ಸಮಾಜ ಸ್ಮರಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ದೇಶದ ಎಲ್ಲ ಮುಸಲ್ಮಾನರು ರಾಷ್ಟ್ರ ದ್ರೋಹಿಗಳಲ್ಲ: ಕೆ.ಎಸ್.ಈಶ್ವರಪ್ಪ