ETV Bharat / city

ಆಸ್ಪತ್ರೆ ನಡೆಸೋದು ಗುಟ್ಕಾ ಪ್ರಿಂಟ್ ಮಾಡಿ, ಅಂಗಡಿಗೆ ಹಂಚಿದ ಹಾಗಲ್ಲ: ಶಾಮನೂರು ಶಿವಶಂಕರಪ್ಪ

ಸರ್ಕಾರ ಜನರಿಗೆ ಆದಷ್ಟು ಬೇಗ ಕೋವಿಡ್ ಲಸಿಕೆ ನೀಡಬೇಕು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಲಸಿಕೆಗೆ ನೀಡಲು ನಾನು ಅರ್ಧ ಹಣ ಕೊಡಲು ಸಿದ್ಧ. ಇನ್ನರ್ಧ ಹಣವನ್ನು ಸರ್ಕಾರ ನೀಡುತ್ತಾ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.

Davangere
ಶಾಮನೂರು ಶಿವಶಂಕರಪ್ಪ
author img

By

Published : May 20, 2021, 9:46 AM IST

ದಾವಣಗೆರೆ: ಆಸ್ಪತ್ರೆ ನಡೆಸೋದು ಗುಟ್ಕಾ ಪ್ರಿಂಟ್ ಮಾಡಿ ಬೀಡಿ ಅಂಗಡಿ ಮತ್ತು ಬಟ್ಟೆ ಅಂಗಡಿಗೆ ಹಂಚಿದ ಹಾಗಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್​ಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಟಾಂಗ್ ನೀಡಿದರು.

ಆಸ್ಪತ್ರೆ ನಡೆಸೋದು ಗುಟ್ಕಾ ಪ್ರಿಂಟ್ ಮಾಡಿ, ಅಂಗಡಿಗೆ ಹಂಚಿದ ಹಾಗಲ್ಲ: ಶಾಮನೂರು ಶಿವಶಂಕರಪ್ಪ

ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸರ್ಕಾರ ಜನರಿಗೆ ಆದಷ್ಟು ಬೇಗ ಕೋವಿಡ್ ಲಸಿಕೆ ನೀಡಬೇಕು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಲಸಿಕೆಗೆ ನೀಡಲು ನಾನು ಅರ್ಧ ಹಣ ಕೊಡಲು ಸಿದ್ದ. ಇನ್ನರ್ಧ ಹಣವನ್ನು ಸರ್ಕಾರ ನೀಡುತ್ತಾ ಎಂದರು.

ಬಳಿಕ ಮಾತನಾಡಿದ ಮಾಜಿ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್, ಆಸ್ಪತ್ರೆಗಳನ್ನು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಗುಟ್ಕಾದಲ್ಲಿಯೇ ಸಿದ್ದೇಶ್ವರ್​ಗೆ ಒಂದು ಕೋಟಿ ಆದಾಯ ಇದೆ. ಸಂಸದರಾದ ಮೇಲೆ ಎಷ್ಟು ಆಸ್ತಿ ಮಾಡಿದ್ದಾರೆ. ಅದಕ್ಕೂ ಮೊದಲು ಎಷ್ಟಿತ್ತು? ಈ ಬಗ್ಗೆ ನನ್ನ ಜೊತೆ ಬಹಿರಂಗ ಚರ್ಚಗೆ ಬರಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಕಲಬುರಗಿಯಲ್ಲಿ 3 ದಿನದ ಲಾಕ್​ಡೌನ್: ಮೊದಲ ದಿನ ಉತ್ತಮ ಸ್ಪಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.