ದಾವಣಗೆರೆ: ಲಾಕ್ಡೌನ್ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಬಟನ್ ರೋಸ್ ಜಮೀನಿನಲ್ಲೇ ಬಾಡಿ ಹೋಗಿದೆ. ಮದುವೆ ಹಾಗೂ ಇತರ ಧಾರ್ಮಿಕ ಸಮಾರಂಭಗಳಿಗೆ ಅತ್ಯವಶ್ಯಕವಾಗಿರುವ ಬಟನ್ ರೋಸ್ (ಗುಲಾಬಿ) ಗೆ ಮಾರುಕಟ್ಟೆಯಲ್ಲಿ ಕಿಮ್ಮತ್ತಿಲ್ಲ ಎಂಬಂತಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಈ ಬಟನ್ ರೋಸ್ ದರ ಪಾತಾಳಕ್ಕಿಳಿದಿದ್ದು, ಬೆಳೆ ಬೆಳೆದ ರೈತ ಹೈರಾಣಾಗಿದ್ದಾನೆ.
ಓದಿ: ಸಿಎಂ ಯಾರಾಗ್ಬೇಕೆಂಬ ವಿಚಾರ.. ದಿಲ್ಲಿಯಲ್ಲಿ ಡಿಕೆಶಿಗೆ ರಾಹುಲ್ ಗಾಂಧಿ ಹೇಳಿದಿಷ್ಟು..
ಲಾಕ್ಡೌನ್ ಸಂದರ್ಭದಲ್ಲಿ ಬಟನ್ ರೋಸ್ ಹೂವು ಬೆಳೆದು ಲಾಭವಿಲ್ಲದೇ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರವ ಗ್ರಾಮದ ರೈತ ರಾಮ್ ಭಟ್ ಕಂಗಾಲಾಗಿದ್ದಾರೆ.
‘ತನ್ನ ಎರಡು ಎಕರೆ ಹೊಲದಲ್ಲಿ ಬಟನ್ ರೋಸ್ ಬೆಳೆದಿದ್ದು, ಸರಿಯಾದ ಬೆಲೆ ಇಲ್ಲದೇ ಹೂ ಮಾರಾಟವಾಗದ ಹಿನ್ನೆಲೆ ರೈತ ನಷ್ಟ ಅನುಭವಿಸಿದ್ದಾನೆ. ಇನ್ನು ಗಿಡದಲ್ಲಿ ಬೆಳೆದ ಹೂವು ಹಾಗೇ ಇದ್ದರೆ ಬೆಳೆಗೆ ಹಾನಿಯಾಗುತ್ತದೆ ಎಂದು ರೈತ ತನ್ನ ಕೈಯಿಂದ ಕೂಲಿ ಕೊಟ್ಟು ಹೂವುಗಳನ್ನು ಕಟಾವು ಮಾಡಿಸಿ ನೆಲಕ್ಕೆ ಎಸೆಯುತ್ತಿದ್ದಾನೆ.
ಇನ್ನು ಲಾಕ್ಡೌನ್ ನಿಂದ ಯಾವುದೇ ಮದುವೆ ಹಾಗೂ ಇನ್ನಿತರ ಸಮಾರಂಭಗಳು ಇಲ್ಲದಿರುವುದು ಹೂವು ಮಾರಾಟವಾಗದೇ ಹಾಳಾಗಲು ಕಾರಣವಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಬಟನ್ ರೋಸ್ 80 ರೂಪಾಯಿಗೆ ಮಾರಾಟವಾಗುತ್ತಿತ್ತು.
ಆದರೆ, ಈಗ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ಪರಿಹಾರ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಆ ಪರಿಹಾರವು ಇದುವರೆಗೂ ರೈತರ ಕೈ ಸೇರಿಲ್ಲ. ಕೂಡಲೇ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.