ದಾವಣಗೆರೆ : ಬೊಮ್ಮಾಯಿ ಆರಿಸಿ ಬರುವ ಕ್ಷೇತ್ರದಲ್ಲಿ ನಮ್ಮ ಸಮಾಜದವರು 55 ಸಾವಿರ ಜನರಿದ್ದಾರೆ. ಇದರ ಮೇಲೆ ಲೆಕ್ಕ ಹಾಕಿ ರಾಜಕೀಯ ಮಾಡಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಹೇಳಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದ 'ಶರಣು ಶರಣಾರ್ಥಿ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೊಮ್ಮಯಿ ಸ್ವಾಮಿಗಳಿಗೆ ಒತ್ತಡ ಹಾಕಿದ್ದೇ ಹಾಕಿದ್ದು, ಸ್ವಾಮಿಗಳೇ ನಾವು ಮೀಸಲಾತಿಗಾಗಿ ಹೋರಾಟ ಮಾಡೇ ಮಾಡ್ತಿವಿ ಅಂತಾ.. ಅದಕ್ಕೆ ನಾನು ಸ್ವಾಮೀಜಿಗಳಿಗೆ ಇವರದೆಲ್ಲ ನಡೆಯಲ್ಲ ಅಂತಾ ಹೇಳಿದ್ದೆ ಎಂದು ಯತ್ನಾಳ್ ಬೊಮ್ಮಾಯಿ ಮೇಲೆ ಹರಿಹಾಯ್ದರು.
ಬೊಮ್ಮಾಯಿ ಕ್ಷೇತ್ರದಲ್ಲಿ 55 ಸಾವಿರ ಜನ ನಮ್ಮ ಸಮುದಾಯದವರಿದ್ದಾರೆ : ಬೊಮ್ಮಾಯಿ ಮತ ಕ್ಷೇತ್ರದಲ್ಲಿ ನಮ್ಮ ಸಮಾಜದವರು 55 ಸಾವಿರ ಜನರಿದ್ದಾರೆ. ಇದರ ಮೇಲೆ ಲೆಕ್ಕ ಹಾಕಿ ರಾಜಕೀಯ ಮಾಡಿ ಅಂತಾ ಹೇಳ್ದೇ.. ಸದನದಲ್ಲಿ ಮುಖ್ಯಮಂತ್ರಿಗಳು ಹೇಳೋವರೆಗೂ ಹೋರಾಟ ಬಿಟ್ಟು ಏಳಬೇಡಿ ಎಂದು ಸ್ವಾಮಿಗಳಿಗೂ ಹೇಳಿದ್ದೆ. ಆದ್ರೆ, ಬೊಮ್ಮಯಿ ಅದು ಇದು ಹೇಳಿ ಸಾರಿಸಿ ಇಟ್ಟಿದ್ದ, ಬಹಳ ಬುದ್ಧವಂತ್ರು ಎಂದು ಕಿಡಿಕಾರಿದರು.
ನನಗೆ ರೊಕ್ಕ ಹೆಂಗ ತರೋದು ಅಂತಾ ಗೊತ್ತಿದೆ : ಸದನದಲ್ಲಿ ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕು, ಮತ್ತೊಬ್ಬರ ಉತ್ತರ ಕೇಳೋಕೆ ನಾನು ತಯಾರಿಲ್ಲ. ಒಂದು ವರ್ಷ ಆಯ್ತು ಮುಖ್ಯಮಂತ್ರಿ ಕಚೇರಿಗೂ ಹೋಗಿಲ್ಲ, ಮನೆಗೂ ಹೋಗಿಲ್ಲ. ಯಾವ ವರ್ಗಾವಣೆಗೂ ಹೋಗಿಲ್ಲ, ಡೆವಲಪ್ಮೆಂಟ್‌ಗೂ ಹೋಗಿಲ್ಲ. ನನಗೆ ರೊಕ್ಕ ಹೆಂಗೆ ತರೋದು ಗೊತ್ತಿದೆ. ದಿನಾ ಭೂಮಿಪೂಜೆ ಮಾಡ್ತೀವಿ, ಜನ ಕೇಳ್ತಾರೆ ಏನ್ರಿ ದಿನ ಜಗಳ ಆಡ್ತೀರಾ, ರೊಕ್ಕ ಹೆಂಗೆ ತರ್ತೀರಾ ಅಂತಾ, ನನಗೆ ಕೊಡ್ದೆ ಯಾರಿಗೆ ಕೊಡ್ತಾರೆ ರೊಕ್ಕನಾ ಎಂದು ಹೇಳಿದೆ ಎಂದು ತಿಳಿಸಿದರು.
ಭ್ರಷ್ಟಚಾರ ಮಾಡಿ ಸಂಬಳ ಪಡೆದಿಲ್ಲ : ಕೊರೊನಾ ಟೈಂನಲ್ಲಿ ಒಂದು ತಿಂಗಳ ಸಂಬಳವನ್ನು ಶಾಸಕರು ನೀಡಿದರು ಅಂತe ಹೇಳಿದ್ರು, ಒಂದು ತಿಂಗಳ ಸಂಬಳ ₹25 ಸಾವಿರ ಇದೆ ಅಷ್ಟೇ.. ನಾನು ಮೂರು ತಿಂಗಳ ಸಂಬಳ ಕೊಟ್ಟೆ. ಜೊತೆಗೆ ಟಿಎ ಡಿಎ ಸೇರಿ ನಾಲ್ಕುವರೆ ಲಕ್ಷ ಕೊಟ್ಟೆ, ನಾನೇನು ಭ್ರಷ್ಟಚಾರ ಮಾಡಿ ಸಂಬಳ ಪಡೆದಿಲ್ಲ ಎಂದು ಸಿಎಂ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು.