ETV Bharat / city

ಬೆಂಗಳೂರು ಉಸ್ತುವಾರಿ ಯಾರಿಗೆ ಕೊಟ್ರೆ ಏನು, ತಲೆ ಯಾಕೆ ಕೆಡಿಸಿಕೊಳ್ತೀರಾ?: ಸಚಿವ ಸೋಮಣ್ಣ - ದಾವಣಗೆರೆ

ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಮುಗಿದಿದೆ. ಎರಡು ಕ್ಷೇತ್ರಗಳಲ್ಲಿಯೂ ನಾವೇ ಗೆಲ್ಲುತ್ತೇವೆ. ನಿನ್ನೆ (ಶನಿವಾರ) ನಡೆದ ಉಪಚುನಾವಣೆಯಲ್ಲಿ ಹಾನಗಲ್​​ನಲ್ಲಿ ಶೇ.83ರಷ್ಟು ಹಾಗೂ ಸಿಂದಿಗಿಯಲ್ಲಿ ಶೇ.69ರಷ್ಟು ಮತದಾನವಾಗಿದೆ. ಸಿಂದಿಗಿಯಲ್ಲಿ 18 ರಿಂದ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಹಾಗೂ ಹಾನಗಲ್​​ನಲ್ಲಿ ಕೂಡ ಗೆಲ್ಲುತ್ತೇವೆ..

Minister V. Somanna
ಸಚಿವ ವಿ. ಸೋಮಣ್ಣ
author img

By

Published : Oct 31, 2021, 3:51 PM IST

ದಾವಣಗೆರೆ : ಬೆಂಗಳೂರು ಉಸ್ತುವಾರಿ ಯಾರಿಗೆ ಕೊಟ್ರೆ ಏನು, ತಲೆ ಯಾಕೆ ಕೆಡಿಸಿಕೊಳ್ತೀರಾ? ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.

ಬೆಂಗಳೂರು ಉಸ್ತುವಾರಿ ಕುರಿತಂತೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿರುವುದು..

‌ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. 2023ರ ಚುನಾವಣೆ ಗೆದ್ದು ಅಧಿಕಾರಕ್ಕೆ ಬರಬೇಕಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಅನುಭವ, ಸಲಹೆಯನ್ನು ಹೇಳುತ್ತೇವೆ.

ಸಿಎಂ ಹೇಗೆ ಸ್ವೀಕಾರ ಮಾಡ್ತಾರೋ ಅವರಿಗೆ ಬಿಟ್ಟ ವಿಚಾರ ಎಂದರು. ಇನ್ನು ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಮುಂದಿನ ಚುನಾವಣೆಯ ಎಂದರೆ ಅವರೇ ಸಿಎಂ ಎಂದು ಅರ್ಥ ಎಂದು ಇದೇ ವೇಳೆ ಸಚಿವ ವಿ. ಸೋಮಣ್ಣ ಬಹಿರಂಗ ಪಡಿಸಿದರು.

ಎರಡೂ ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ: ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಮುಗಿದಿದೆ. ಎರಡು ಕ್ಷೇತ್ರಗಳಲ್ಲಿಯೂ ನಾವೇ ಗೆಲ್ಲುತ್ತೇವೆ. ನಿನ್ನೆ (ಶನಿವಾರ) ನಡೆದ ಉಪಚುನಾವಣೆಯಲ್ಲಿ ಹಾನಗಲ್​​ನಲ್ಲಿ ಶೇ.83ರಷ್ಟು ಹಾಗೂ ಸಿಂದಿಗಿಯಲ್ಲಿ ಶೇ.69ರಷ್ಟು ಮತದಾನವಾಗಿದೆ. ಸಿಂದಿಗಿಯಲ್ಲಿ 18 ರಿಂದ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಹಾಗೂ ಹಾನಗಲ್​​ನಲ್ಲಿ ಕೂಡ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುನೀತ್ ನಿಧನಕ್ಕೆ ಇಡೀ ರಾಜ್ಯ ಕಂಬನಿ: ಅಸಂಖ್ಯಾತ ಅಭಿಮಾನಿಗಳನ್ನು ಬಿಟ್ಟು ಪುನೀತ್ ರಾಜ್ ಕುಮಾರ್ ಅಗಲಿರುವುದರಿಂದ ಇಡೀ ರಾಜ್ಯ ಕಂಬನಿ ಮಿಡಿದಿದೆ. ಅವರ ಇಡೀ ಕುಟುಂಬ ದುಃಖದಲ್ಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರನ್ನು ಕಳುಹಿಸಿ ಕೊಡಲಾಗಿದೆ ಎಂದರು‌.

ಇದನ್ನೂ ಓದಿ: ಬಿಬಿಎಂಪಿ 243 ವಾರ್ಡ್​​ಗಳಿಗೆ ಪುನರ್ ವಿಂಗಡಣೆ ವಿಳಂಬ: ಸಮಿತಿಯ ಅವಧಿ ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.