ETV Bharat / city

ಅವರವರ ಮೂಗಿನ ನೇರಕ್ಕೆ ಮಾತಾಡ್ತಾರೆ, ಅದಲ್ಲೇನೂ ಹುರುಳಿಲ್ಲ: ಕೈ ನಾಯಕರಿಗೆ ಸಚಿವ ಮುನಿರತ್ನ ಟಾಂಗ್

ಸಿಎಂ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಜನರ ಒಲವು ಬಿಜೆಪಿ ಕಡೆಗೆ ಇದೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ಬೆಲೆ ಏರಿಕೆ ಪ್ರಸ್ತಾಪಿಸೋದು ಸಹಜ. ಎಲ್ಲ ಸರ್ಕಾರಗಳ ಅವಧಿಯಲ್ಲಿ ಬೆಲೆ ಏರಿಕೆ ಆಗಿದೆ. ಅವರವರ ಮೂಗಿನ ನೇರಕ್ಕೆ ಅವರು ಮಾತನಾಡುತ್ತಾರೆ ಎಂದು ಸಚಿವ ಮುನಿರತ್ನ ಟಾಂಗ್ ನೀಡಿದರು.

Minister Munirathna tang to Congress leaders
ಸಚಿವ ಮುನಿರತ್ನ
author img

By

Published : Oct 12, 2021, 5:06 PM IST

ದಾವಣಗೆರೆ: ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ಬೆಲೆ ಏರಿಕೆ ಪ್ರಸ್ತಾಪಿಸೋದು ಸಹಜ. ಎಲ್ಲ ಸರ್ಕಾರಗಳ ಅವಧಿಯಲ್ಲಿ ಬೆಲೆ ಏರಿಕೆ ಆಗಿದೆ. ಅವರವರ ಮೂಗಿನ ನೇರಕ್ಕೆ ಅವರು ಮಾತನಾಡುತ್ತಾರೆ. ಅದರಲ್ಲೇನು ಹುರುಳಿಲ್ಲ ಎಂದು ಕಾಂಗ್ರೆಸ್ ನಾಯಕರು ನೀಡುತ್ತಿರುವ ಬೆಲೆ ಏರಿಕೆ ಹೇಳಿಕೆಗೆ ಸಚಿವ ಮುನಿರತ್ನ ಟಾಂಗ್ ನೀಡಿದರು.

ನಗರದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಸಿಎಂ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಜನರ ಒಲವು ಬಿಜೆಪಿ ಕಡೆಗೆ ಇದೆ. ಚುನಾವಣೆ ಕಾರ್ಯ ಯೋಜನೆ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಮುನಿರತ್ನ

ಮಾಜಿ ಸಿಎಂ ಆಪ್ತನ ಮೇಲೆ ಐಟಿ ದಾಳಿ:

ಯಾರನ್ನೋ ನಿಯಂತ್ರಿಸಲು ಐಟಿ ದಾಳಿ ನಡೆದಿಲ್ಲ. ಈ ಹಿಂದೆ ಐಟಿ‌ ದಾಳಿಗಳು ಕೇಂದ್ರ ಸರ್ಕಾರ ಪ್ರಾಯೋಜಿತ ಎಂಬ ಆರೋಪಗಳಿದ್ದವು. ಈಗ ಕಾಂಗ್ರೆಸ್‌ನವರು ಏಕೆ ಮಾತನಾಡುತ್ತಿಲ್ಲ. ಪ್ರತಿಯೊಂದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಕುಟುಕಿದರು.

ಬೆಂಗಳೂರು ಜಿಲ್ಲೆ ಉಸ್ತುವಾರಿ ಸಿಎಂ ಬಳಿ ಇದೆ:

ಬೆಂಗಳೂರಿನಲ್ಲಿ 3ನೇ ಹಂತದ ಮೆಟ್ರೋ ಕಾಮಗಾರಿಗೆ ಚಾಲನೆ ದೊರೆತಿದ್ದು, ಸಿಎಂ ಬೊಮ್ಮಾಯಿ ಅವರ ಉಸ್ತುವಾರಿಯಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳು ಆಗುತ್ತಿವೆ. ಬೆಂಗಳೂರು ಉಸ್ತುವಾರಿ ಸಿಎಂ ಕೈಯಲ್ಲಿರುವಾಗ ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಬೆಂಗಳೂರು ನಗರದ ಎಲ್ಲ ಶಾಸಕರು ಸಿಎಂ ಅಡಿ ಕೆಲಸ ಮಾಡುತ್ತಿದ್ದೇವೆ. ಸಿಎಂ ಬಳಿ ಉಸ್ತುವಾರಿ ಇದ್ದರೂ ನಮಗೆ ಅಭ್ಯಂತರವಿಲ್ಲ ಎಂದರು.

ಓದಿ: ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ FIR: ಬರೋಬ್ಬರಿ 2.84 ಕೋಟಿ ರೂ. ವಂಚನೆ ಆರೋಪ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.