ETV Bharat / city

ದಾವಣಗೆರೆ: ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತಾರಾಜ್ಯ ಕಳ್ಳರ ಬಂಧನ - ಅಟೆನ್ಷನ್ ಡೈವರ್ಷನ್ ಪ್ರಕರಣ

ಬಂಧಿತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಗರಿ ತಾಲೂಕಿನ ಕುಪ್ಪಂ ಗ್ರಾಮದವರು ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 2018 ರಿಂದ 21ರವರೆಗೆ 13 ಗಮನ ಬೇರೆಡೆ ಸೆಳೆದು ಹಣ ದೋಚಿದ ಪ್ರಕರಣಗಳು ದಾಖಲಾಗಿದ್ದವು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 26 ಪ್ರಕರಣಗಳಲ್ಲಿ ಲಕ್ಷಾಂತರ ಹಣ ದೋಚಿದ್ದ ಕಳ್ಳರನ್ನು ಕೊನೆಗೂ ಬೆಣ್ಣೆನಗರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

interstate-robbers-arrested-by-davanagere-police
ಅಂತರರಾಜ್ಯ ಕಳ್ಳರ ಬಂಧನ
author img

By

Published : Jul 19, 2021, 9:31 PM IST

Updated : Jul 20, 2021, 7:02 PM IST

ದಾವಣಗೆರೆ: ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ 11 ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 22 ಲಕ್ಷ ರೂ. ನಗದು ಹಾಗೂ 4 ಬೈಕ್​ ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ: ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತಾರಾಜ್ಯ ಕಳ್ಳರ ಬಂಧನ

ಮಹತ್ವದ ಕಾರ್ಯಾಚರಣೆ ನಡೆಸಿದ ದಾವಣಗೆರೆ ನಗರ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಗರಿ ತಾಲೂಕಿನ ಕುಪ್ಪಂ ಗ್ರಾಮದವರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ 2018 ರಿಂದ 21ರವರೆಗೆ 13 ಅಟೆನ್ಷನ್ ಡೈವರ್ಷನ್ ಪ್ರಕರಣ ದಾಖಲಾಗಿದ್ದವು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 26 ಪ್ರಕರಣಗಳಲ್ಲಿ ಲಕ್ಷಾಂತರ ಹಣ ದೋಚಿದ್ದ ಕಳ್ಳರನ್ನು ಕೊನೆಗೂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ತಾಲೂಕಿನ ಬಾತಿಗುಡ್ಡದಲ್ಲಿ ಕ್ಯಾಂಪ್ ಹಾಕಿ ಖದೀಮರು ಕಳ್ಳತನ ಮಾಡುತ್ತಿದ್ದ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಆರು ಮಾದರಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಕೊನೆಗೂ ಜೈಲು ಸೇರಿದೆ. ಬಂಧಿತರಿಂದ ನಗದು, ಬೈಕ್‌ಗಳು ಸೇರಿ 4 ಮೊಬೈಲ್, 20 ಬೇರಿಂಗ್ ಬಾಲ್ಸ್, ತುರಿಕೆ ಪೇಪರ್ ಪಾಕೆಟ್, ಕ್ಯಾಟರ್ ಬಿಲ್ಲೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್​​ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು.

Last Updated : Jul 20, 2021, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.