ದಾವಣಗೆರೆ : ಜಿಲ್ಲಾಧಿಕಾರಿ ಇರಬಹುದು, ತಹಶೀಲ್ದಾರ್ ಇರಬಹುದು. ಹಗಲು ಹೊತ್ತು ಬಂದು ಹಿಂದೂವಿನ ಜೇನಿನ ಗೂಡಿಗೆ ಕೈ ಹಾಕಿ ನೋಡಿ. ದೇವಾಲಯ ತೆರವುಗೊಳಿಸುವ ಪ್ರವೃತ್ತಿ ಮುಂದುವರೆದರೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಡು ಬೀದಿಯಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಇಬ್ಬರ ಹೆಣವನ್ನು ಎತ್ತಲು ಕೂಡ ಹೇಸುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿನ್ನೆ ದಾವಣಗೆರೆ ಎಸಿ ಕಚೇರಿ ಮುಂಭಾಗ ಹಿಂದೂ ಜಾಗರಣಾ ವೇದಿಕೆ ನಡೆಸಿದ ಪ್ರತಿಭಟನೆಯಲ್ಲಿ ಈ ರೀತಿಯ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ದೇವಸ್ಥಾನ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈಗಾಗಲೇ ದಾವಣಗೆರೆಯಲ್ಲಿ ಒಟ್ಟು 24 ದೇವಸ್ಥಾನ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. 13 ದೇವಾಲಯಗಳನ್ನು ತೆರವು ಮಾಡಿದೆ. ಇನ್ನುಳಿದ 11 ದೇವಸ್ಥಾನ ತೆರವಿಗೆ ಸಿದ್ಧತೆ ಮಾಡಿರುವ ಜಿಲ್ಲಾಡಳಿತದ ವಿರುದ್ಧ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಓದಿ: ಮಂಗಳೂರು : ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೀನುಗಾರಿಕಾ ತೇಲುವ ಜಟ್ಟಿ ; 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ