ETV Bharat / city

ದಾವಣಗೆರೆ ಕಾಲೇಜಿನಲ್ಲಿ ಭುಗಿಲೆದ್ದ ಹಿಜಾಬ್ ವಿವಾದ: ಅಶ್ರುವಾಯು, ಲಘು ಲಾಠಿ ಪ್ರಹಾರ

ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಆಗಮಿಸಿದ ವಿದ್ಯಾರ್ಥಿಗಳ ನಡುವೆ ಪರಸ್ಪರ ವಾಗ್ವಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿದರು.

police lathi charge on protester in Davanagere degree college
ದಾವಣಗೆರೆ ಕಾಲೇಜಿನಲ್ಲಿ ಭುಗಿಲೆದ್ದ ಹಿಜಾಬ್ ವಿವಾದ
author img

By

Published : Feb 8, 2022, 3:59 PM IST

ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಿಜಾಬ್ - ಕೇಸರಿ ಶಾಲು ವಿವಾದ ಉದ್ವಿಗ್ನಕ್ಕೆ ಕಾರಣ ಆಗಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದು, ಪರಿಸ್ಥಿತಿ ನಿಭಾಯಿಸಲು ಮುಂದಾದ ಪೊಲೀಸರಿಗೆ ತಲೆಬಿಸಿಯಾಗಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಹೊರಗಡೆಯಿಂದ ಕೆಲ ಯುವಕರು ಭಾಗಿಯಾಗಿ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲ ಪೊಲೀಸರನ್ನು ತಳ್ಳಿದ ಒಂದು ಕೋಮಿಗೆ ಸೇರಿದವರ‌ ಮೇಲೆ ಕಾಲೇಜು ಆವರಣದಲ್ಲಿ ಪೋಲಿಸರು ಲಘು ಲಾಠಿ ಜಾರ್ಜ್ ಮಾಡಿದ್ದಾರೆ. ಪರಿಸ್ಥಿತಿ ಬಿಗಾಡಿಯಿಸಿದ್ದರಿಂದ ಅಶ್ರುವಾಯು ಕೂಡ ಸಿಡಿಸಲಾಯಿತು.

ದಾವಣಗೆರೆ ಕಾಲೇಜಿನಲ್ಲಿ ಭುಗಿಲೆದ್ದ ಹಿಜಾಬ್ ವಿವಾದ

ಇದನ್ನೂ ಓದಿ: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ; ಕಾಲೇಜು ಆವರಣದೊಳಗಡೆ ಗೊಂದಲದ ವಾತಾವರಣ

ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಆಗಮಿಸಿದ ವಿದ್ಯಾರ್ಥಿಗಳ ನಡುವೆ ಪರಸ್ಪರ ವಾಗ್ವಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಲಘು ಲಾಠಿ ಪ್ರಹಾರ ಮಾಡಿದ್ದು, ಸ್ಥಳದಲ್ಲಿ ಎಸ್ಪಿ ಸಿಬಿ ರಿಷ್ಯಂತ್ ಮನವೊಲಿಸುವ ಪ್ರಯತ್ನ ವಿಫಲ ಆಗಿತು. ಕಾಲೇಜಿನ ಆವರಣಕ್ಕೆ ಹೊರ ಗಡೆಯಿಂದ ಬೇರೆ ಯವರು ಕೂಡ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದೇ ಉದ್ವಿಗ್ನ ನಿರ್ಮಾಣ ಆಗಲು ಪ್ರಮುಖ ಕಾರಣ ಆಗಿದೆ.

ಘಟನೆ ಬಳಿಕ ಹರಿಹರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಯಿತು. ಘಟನೆಯಲ್ಲಿ ಇಬ್ಬರು ಪೋಲಿಸರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಎಸ್ಪಿ ಸಿಬಿ ರಿಷ್ಯಂತ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇದಲ್ಲದೆ ಘಟನೆಯಲ್ಲಿ ಒಂದು ಕಾರು ಜಖಂ ಆಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.