ETV Bharat / city

ರೇಣುಕಾಚಾರ್ಯ ಕಾಲು ಹಿಡಿದು ಕಣ್ಣೀರು ಹಾಕಿದ ಕೋವಿಡ್‌ನಿಂದ ಗುಣಮುಖನಾದ ವ್ಯಕ್ತಿ - ಹೊನ್ನಾಳಿ ತಾಲೂಕಿನ ಅರಬಗಟ್ಟೆ

ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್​ ಸೆಂಟರ್​ನಲ್ಲಿ ಕೊರೊನಾದಿಂದ ಗುಣಮುಖನಾದ ವ್ಯಕ್ತಿಯೊಬ್ಬರು ಶಾಸಕ ರೇಣುಕಾಚಾರ್ಯ ಅವರ ಕಾರ್ಯವೈಖರಿ ಮೆಚ್ಚಿ ಕಾಲು ಹಿಡಿದು ಕಣ್ಣೀರು ಹಾಕಿದರು.

Davanagere
ರೇಣುಕಾಚಾರ್ಯ ಕಾಲು ಹಿಡಿದು ಕಣ್ಣೀರು ಹಾಕಿದ ವ್ಯಕ್ತಿ
author img

By

Published : Jun 22, 2021, 7:32 AM IST

ದಾವಣಗೆರೆ: ಕೋವಿಡ್​ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯೋರ್ವ ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಲು ಹಿಡಿದು ಕಣ್ಣೀರು ಹಾಕಿದ್ದಾರೆ. ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್​ ಸೆಂಟರ್​ನಲ್ಲಿ ನಡೆದ ಕೊರೊನಾದಿಂದ ಚೇತರಿಸಿಕೊಂಡ 47 ಮಂದಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಘಟನೆ ನಡೆಯಿತು.

ರೇಣುಕಾಚಾರ್ಯ ಕಾಲು ಹಿಡಿದು ಕಣ್ಣೀರು

ಕೋವಿಡ್ ಕೇರ್ ಸೆಂಟರ್​ನಲ್ಲಿಯೇ ವಾಸ್ತವ್ಯ ಹೂಡಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿರುವ ರೇಣುಕಾಚಾರ್ಯ ಅವರ ಕಾರ್ಯವೈಖರಿ ಹಾಗೂ ನೀಡುತ್ತಿದ್ದ ಸೌಲಭ್ಯಗಳನ್ನು ನೆನೆದು ವ್ಯಕ್ತಿಯೋರ್ವ ಕಾಲು ಹಿಡಿದರು. ಬಳಿಕ ಕಣ್ಣೀರು ಹಾಕಿ ಶಾಸಕರ ಕಾರ್ಯವನ್ನು ಕೊಂಡಾಡಿದರು.

ಈ ವೇಳೆ ರೇಣುಕಾಚಾರ್ಯ ಕೂಡ ಭಾವುಕರಾಗಿ, ಸೋಂಕಿನಿಂದ ಗುಣಮುಖರಾದವರಿಗೆ ಹೂಮಳೆ ಸುರಿಸಿ ಬೀಳ್ಕೊಟ್ಟರು.

ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರಿಬ್ಬರ ವಾಗ್ವಾದ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.