ETV Bharat / city

ಉಕ್ರೇನ್‌ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆಂದು ಗೊತ್ತಿಲ್ಲ, ಮಾಹಿತಿ ಕೊಡಿ ಕರೆಸುತ್ತೇನೆ - ಸಂಸದ ಜಿಎಂ ಸಿದ್ದೇಶ್ವರ್ - do not know how many students stuck in Ukraine says mp gm siddeshwar

ಉಕ್ರೇನ್‌ನಲ್ಲಿ ನಮ್ಮ ಜಿಲ್ಲೆಯ ಮೂರು ಜನ ಇಲ್ಲವೇ, ನಾಲ್ಕು ಜನ, ಇಲ್ಲ ಆರು ಜನರೂ ಇರಬಹುದು ಈ ಬಗ್ಗೆ ವರದಿ ನೀಡಿದರೆ ಅವರೆನ್ನೆಲ್ಲಾ ಕರೆಸುತ್ತೇ‌ನೆ ಎಂದು ಸಂಸದ ಜಿಎಂ ಸಿದ್ದೇಶ್ವರ್‌ ಹೇಳಿದ್ದಾರೆ.

don't know how many students stuck in Ukraine - mp gm siddeshwar
ಉಕ್ರೇನ್‌ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆಂದು ಗೊತ್ತಿಲ್ಲ, ಮಾಹಿತಿ ಕೊಡಿ ಕರೆಸುತ್ತೇನೆ - ಸಂಸದ ಜಿಎಂ ಸಿದ್ದೇಶ್ವರ್
author img

By

Published : Feb 25, 2022, 5:03 PM IST

ದಾವಣಗೆರೆ: ಜಿಲ್ಲೆಯ ಎಷ್ಟು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆಂಬುದು ಗೊತ್ತಿಲ್ಲ. ಅವರ ಬಗ್ಗೆ ಮಾಹಿತಿ ಕೊಡಿ ಭಾರತಕ್ಕೆ ಕರೆಸುತ್ತೇನೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಮಾಹಿತಿ ಇಲ್ಲದವರಂತೆ ವರ್ತಿಸಿದ್ದಾರೆ.

ಉಕ್ರೇನ್‌ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆಂದು ಗೊತ್ತಿಲ್ಲ, ಮಾಹಿತಿ ಕೊಡಿ ಕರೆಸುತ್ತೇನೆ - ಸಂಸದ ಜಿಎಂ ಸಿದ್ದೇಶ್ವರ್

ದಾವಣಗೆರೆಯಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಮಾತನಾಡಿದ ಜಿಎಂ ಸಿದ್ದೇಶ್ವರ್‌, ನಮ್ಮ ಸರ್ಕಾರ ಯುದ್ಧ ಆರಂಭಕ್ಕೂ ಮುನ್ನ ನಾಲ್ಕು ದಿನಗಳಿಂದ ಉಕ್ರೇನ್‌ನಲ್ಲಿ ಸಿಲುಕಿದವರನ್ನು ಭಾರತಕ್ಕೆ ಕರೆತರಲು ಎರಡ್ಮೂರು ವಿಮಾನಗಳನ್ನು ಕಳಿಸಿ ಸಾಕಷ್ಟು ಜನರನ್ನು ಕರೆತಂದಿದೆ. ನಮ್ಮ ಜಿಲ್ಲೆಯ ಮೂರು ಜನ ಅಲ್ಲ ನಾಲ್ಕು ಇಲ್ಲ ಆರು ಸಹ ಇರಬಹುದು ಅದರ ಸಂಬಂಧ ವರದಿ ನೀಡಿದರೆ ಕರೆಸುತ್ತೇ‌ನೆ ಎಂದಿದ್ದಾರೆ.

ಈಗಾಗಲೇ ದಾವಣಗೆರೆ ಜಿಲ್ಲೆಯ ಆರು ಜನ ಮೆಡಿಕಲ್ ವಿದ್ಯಾರ್ಥಿಗಳು ಸಿಲುಕಿದ್ದಾರೆಂದು ಕೆಲವರು ಕರೆ ಮಾಡಿ ಕೇಳಿದ್ರು, ಆಗ ನಾನು ಕೂಡ ನಮ್ಮ ಪಿಎಗೆ ಕೇಳಿದೆ ಅವರು ಕೂಡ ಯಾವುದೇ ಮಾಹಿತಿ ಇಲ್ಲ ಸರ್ ಎಂದು ತಿಳಿಸಿದ್ರು. ಇನ್ನೂ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಕರೆ ಮಾಡಿದಾಗ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಕೂಡ ತಿಳಿಸಿದ್ರು.

ಬಳಿಕ ಮಾಹಿತಿ ತೆಗೆದುಕೊಳ್ಳಿ ಎಂದು ಹೇಳಿದಾಗ ಎಸ್ಪಿ ಸಿಬಿ ರಿಷ್ಯಂತ್ ಅವರು ಉಕ್ರೇನ್‌ನಲ್ಲಿ ಸಿಲುಕಿದವರ ಬಗ್ಗೆ ಮಾಹಿತಿ ನೀಡಿದ್ರು, ವಿದೇಶಾಂಗ ಇಲಾಖೆಗೆ ಮಾಹಿತಿ ರವಾನೆ‌ ಮಾಡಿದ್ದೇನೆ ಏನಾಗಿದೆ ಎಂದು ವಿಚಾರಿಸಿ ಅವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ದಾವಣಗೆರೆ ಜಿಲ್ಲೆಯ 12 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ: ಎಂಬಿಬಿಎಸ್ ಮಾಡಲು ಉಕ್ರೇನ್​ಗೆ ತೆರಳಿದ ಮಗ.. ದಾರಿ ಕಾಯುತ್ತಿರುವ ಪೋಷಕರು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.