ETV Bharat / city

'ಕೊರೊನಾ ವಾರಿಯರ್ಸ್​'​ಗಾಗಿ ಜಾಗಟೆ ಬಾರಿಸಿ, ಚಪ್ಪಾಳೆ ತಟ್ಟಿದ ದಾವಣಗೆರೆ ಡಿಸಿ - ಕೊರೊನಾ ವೈರಸ್​

ಕೊರೊನಾ ವೈರಸ್​ ತಡೆಗೆ ಪ್ರಧಾನಿಯವರು ಕರೆ ಕೊಟ್ಟಿರುವ ಜನತಾ ಕರ್ಪ್ಯೂ ಭಾಗವಾಗಿ ಸಂಜೆ 5ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿಗಳು ಮತ್ತು ನಗರ ನಿವಾಸಿಗಳು ಜಾಗಟೆ, ಚಪ್ಪಾಳೆ ಮತ್ತು ಸೈರನ್​ ಬಾರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸಿದರು.

davanagere-dc-clapped-for-corona-virus-warriors
ಜನತಾ ಕರ್ಪ್ಯೂ
author img

By

Published : Mar 22, 2020, 7:07 PM IST

ದಾವಣಗೆರೆ : ದೇಶದಲ್ಲಿ ಭೀತಿ ಸೃಷ್ಟಿಸಿರುವ ಕೊರೊನಾ ಸೋಂಕು ತಡೆಗೆ ದಿನವಿಡೀ ಹೋರಾಟ ನಡೆಸುತ್ತಿರುವವರಿಗೆ ಪ್ರಧಾನಿಯವರ ಕರೆ ಮೇರೆಗೆ ಜಿಲ್ಲಾಧಿಕಾರಿ ಮಹಾಂತೇಶ್​ ಆರ್​. ಬೀಳಗಿ ಜಾಗಟೆ ಬಾರಿಸುವ ಮೂಲಕ ಧನ್ಯವಾದ ಅರ್ಪಿಸಿದರು.

'ಕೊರೊನಾ ವಾರಿಯರ್ಸ್​'​ಗೆ ದಾವಣಗೆರೆ ಡಿಸಿ ಧನ್ಯವಾದ ತಿಳಿಸಿದ ರೀತಿ..

ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಸಂಪೂರ್ಣ ಸಾಥ್‌ ನೀಡಿದ್ದಾರೆ. ಸಂಜೆ 5 ಗಂಟೆಗೆ ತಮ್ಮ ನಿವಾಸದಲ್ಲಿ ಜಾಗಟೆ ಬಾರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಮತ್ತು ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾಡಳಿತದ ವತಿಯಿಂದ ಅಗ್ನಿಶಾಮಕದಳ ವಾಹನದ ಸೈರನ್‌​ ಕೂಗಿಸುವ ಮೂಲಕ ಗೌರವ ಸಲ್ಲಿಸಿದರು.

ಕೆಟಿಜಿನಗರ, ಕೆಇಬಿ ರಸ್ತೆ ಸೇರಿದಂತೆ ನಗರದ ಹಲವೆಡೆ ಜನರು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಅರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.