ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ನೀಡಿದ ಬೆಳ್ಳಿ ಗದೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಹರಿಹರದ ಶ್ರೀ ಆಂಜನೇಯ ದೇವರಿಗೆ ಕಾಣಿಕೆಯಾಗಿ ನೀಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ರಾಘವೇಂದ್ರ ಮಠದ ತುಂಗಭದ್ರಾ ತೀರದಲ್ಲಿ ಆರತಿ ಮಾಡುವ ಯೋಜನೆಯ ಯೋಗ ಮಂಟಪಗಳ ಶಿಲಾನ್ಯಾಸದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀಗಳು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬೆಳ್ಳಿಗದೆ ನೀಡಿ ಸನ್ಮಾಸಿದರು.
ಆಗ ಸಿಎಂ 'ನಾನು ಯಾವುದೇ ಕಾರ್ಯಕ್ರಮಗಳಲ್ಲಿ ನೀಡಿದ ಬೆಳ್ಳಿ ಗದೆ, ಬೆಳಿ ಕಿರೀಟ, ಬೆಳ್ಳಿ ಕಾಣಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಲ್ಲ. ಕಾರ್ಯಕ್ರಮ ನಡೆದ ಸ್ಥಳದಲ್ಲೇ ಆ ಕಾಣಿಕೆಗಳನ್ನು ದೇವಾಲಯಗಳಿಗೆ ಕಾಣಿಕೆಯಾಗಿ ನೀಡ್ತೇನೆ' ಎಂದು ಸ್ಥಳೀಯ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪನವರಿಗೆ ಗದೆ ಒಪ್ಪಿಸಿದರು.
ಇದೇ ವೇಳೆ, ಹರಿಹರದ ಆಂಜನೇಯ ಸ್ವಾಮೀಯ ದೇವಸ್ಥಾನಕ್ಕೆ ಈ ಗದೆಯನ್ನು ಕಾಣಿಕೆಯಾಗಿ ಕೊಡು ಎಂದು ಹರಿಹರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪನವರಿಗೆ ಸಿಎಂ ತಿಳಿಸಿದರು.
ಇದನ್ನೂ ಓದಿ: ಸಮಸ್ಯೆ ಚರ್ಚಿಸಲು ಅಧಿವೇಶನಕ್ಕೆ ಬನ್ನಿ: ಕೈ ಮುಗಿದು ಕೇಳಿಕೊಂಡ ಸಚಿವ ಈಶ್ವರಪ್ಪ