ETV Bharat / city

ಬಿಎಸ್​​ವೈ ಅವರದ್ದು ಹಿರಿಯ ಜೀವ, ಈ ಬೆಳವಣಿಗೆ ನೋಡಿ ಮನ ನೊಂದಿದ್ದಾರೆ: ಶಾಸಕ ವಿರೂಪಾಕ್ಷಪ್ಪ - ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್

ರಾಜ್ಯ ರಾಜಕೀಯದಲ್ಲಿ ಬಿಜೆಪಿ ಪಕ್ಷದ ನಾಯಕತ್ವ ಬದಲಾವಣೆ ವಿಚಾರವಾಗಿ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.

state-politics-issue
ಶಾಸಕ ಮಾಡಾಳು ವಿರುಪಾಕ್ಷಪ್ಪ
author img

By

Published : Jun 8, 2021, 8:42 PM IST

ದಾವಣಗೆರೆ: ಯಡಿಯೂರಪ್ಪ ಹೆಸರು ಘೋಷಣೆ ಮಾಡದೇ ಇದ್ದರೆ 104 ಸೀಟು ಬರುತ್ತಿರಲಿಲ್ಲ. ಬಿಎಸ್​​ವೈ ಅವರದ್ದು ಹಿರಿಯ ಜೀವ, ವಾತಾವರಣ ನೋಡಿ ಮನ ನೊಂದಿದ್ದಾರೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಶಾಸಕ ಮಾಡಾಳು ವಿರೂಪಾಕ್ಷಪ್ಪ

ಓದಿ: ಪರಸ್ಪರ ಗುಂಡು ಹಾರಿಸಿಕೊಂಡ ಯೋಧರು..ಇಬ್ಬರೂ ಸ್ಥಳದಲ್ಲೇ ಸಾವು

ದಾವಣಗೆರೆಯಲ್ಲಿ ಮಾತನಾಡಿದ ಅವರು, ಪದೇ ಪದೇ ತೊಂದರೆ ಕೊಟ್ಟರೆ ಆಡಳಿತ ವ್ಯವಸ್ಥೆಗೆ ಹಾಗು ಪಕ್ಷಕ್ಕೆ ಕೆಟ್ಟ ಹೆಸರು ಹೋಗುತ್ತೆ. ಬೀದಿ ಬೀದಿಯಲ್ಲಿ ಮರ್ಯಾದೇ ಕೊಡದೇ ಜನ ಕ್ಯಾಕರಿಸಿ ಹುಗಿದು ಮನೆಗೆ ಕಳುಹಿಸುತ್ತಾರೆ. ಇದರ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ದೇಶನ ಕೊಡಬೇಕು. ಬೇರೆ ರಾಜ್ಯಗಳಲ್ಲಿ‌ ಸಿಎಂ ಬದಲಾವಣೆ ಇಲ್ಲದ ಚರ್ಚೆ ಇಲ್ಲಿ‌ ಯಾಕೆ, ಸಿಎಂ ಆಗಿ ಬಿಎಸ್​​ವೈ ಸಂಪೂರ್ಣ ಅವಧಿ ಮುಗಿಸಲು ಅನುಕೂಲ‌ ಮಾಡಿಕೊಡಬೇಕು. ಅವರ ಬದಲಾವಣೆ ದುಸ್ಸಾಹಸ ಮಾಡಬಾರದು ಎಂದು ಮಾಡಾಳು ವಾಗ್ದಾಳಿ ನಡೆಸಿದರು.

ಸಿಎಂ ರಾಜೀನಾಮೆ ಕೊಡ್ತೀನಿ ಅಂತ ಹೇಳಿಲ್ಲ: ಸಂಸದ ಸಿದ್ದೇಶ್ವರ್

ಬಿಎಸ್​​​ವೈ ನೇತೃತ್ವದಲ್ಲೇ ಎಲ್ಲರು ಗೆದ್ದಿದ್ದಾರೆ, ಹೀಗಾಗಿ 120 ಜನ ಶಾಸಕರು ಬಿಎಸ್​​ವೈ ಪರವಾಗಿದ್ದಾರೆ. ಸಿಎಂ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ರಾಜೀನಾಮೆ ನೀಡಿ ಎಂದಾಗ ಪ್ರಶ್ನೆಗಳು ಎದುರಾಗುತ್ತವೆ. ಅದು ಸ್ವಾಭಾವಿಕ, ಗೊಂದಲ ಬೇಡ ಎಂದರು.

ಇನ್ನು ಹೈಕಮಾಂಡ್ ರಾಜೀನಾಮೆ ಕೇಳಲ್ಲ, ಇವರು ರಾಜೀನಾಮೆ ಕೊಡಲ್ಲ. ಯಾರು ಸಹಿ ಮಾಡಿಲ್ಲ, ಏನೂ ಗೊಂದಲ್ಲ ಇಲ್ಲ, ನಮ್ಮ ನಾಯಕ ಬಿಎಸ್​​ವೈ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ, ಯಾವುದೇ ಬದಲಾವಣೆ ಇಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.