ದಾವಣಗೆರೆ: ಆಪರೇಷನ್ ಕಿಡ್ನಾಪ್ ಮಾಡಿದ ಕಾಂಗ್ರೆಸ್ನವರ ಬಳಿ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ, ನೂರಕ್ಕೆ ನೂರರಷ್ಟು ಭರವಸೆ ಇದೆ. ನಾವೇ ಪಾಲಿಕೆ ಚುಕ್ಕಾಣಿ ಹಿಡಿಯುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಆಡಳಿತ ವಿರೋಧಿಸಿ ಜನ ತೀರ್ಪು ನೀಡಿದ್ದಾರೆ. ಈ ಹಿನ್ನೆಲೆ ಬಿಜೆಪಿ ಆಡಳಿತ ನಡೆಸಲಿ ಎಂಬುದು ಜನರ ಬಯಕೆಯಾಗಿದೆ. ಆದರೆ ಸಂಖ್ಯೆ ಕಡಿಮೆ ಇದ್ದು, ವಿವಿಧ ರೀತಿಯಲ್ಲಿ ಚರ್ಚೆ ನಡೆಸಿ ಪಕ್ಷೇತರ ಸದಸ್ಯ, ಜೆಡಿಎಸ್ ಸದಸ್ಯರ ಮನವೊಲಿಸುತ್ತೇವೆ ಎಂದರು. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಆಪರೇಷನ್ ಕಿಡ್ನಾಪ್ ನಡೆದಿತ್ತು. ಇಂತಹ ಕಿಡ್ನಾಪರ್ಸ್ ಹತ್ತಿರ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾವ ರೀತಿಯಲ್ಲಿ ಪಾಲಿಕೆ ಅಧಿಕಾರ ಹಿಡಿಯಬೇಕು ಎಂಬುದನ್ನು ಚರ್ಚಿಸುತ್ತಿದ್ದೇವೆ. ನೂರಕ್ಕೆ ನೂರರಷ್ಟು ಅಧಿಕಾರ ಹಿಡಿಯುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.