ETV Bharat / city

ಮಳೆಗೆ ಧರೆಗುರುಳಿದ ಬಾಳೆ; ಮಡದಿಯ ತಾಳಿ ಒತ್ತೆಯಿಟ್ಟ ರೈತನ ಬವಣೆ

ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ರೈತ ಶಿವಮೂರ್ತಿಗೆ ಸೇರಿದ ಬಾಳೆ ತೋಟ ಮಳೆಯಿಂದ ನಾಶವಾಗಿದೆ.

Banana crop loss due to rain in Davanagere
ಮಳೆಯಿಂದ ನೆಲಕ್ಕುರುಳಿದ ಬಾಳೆ ಬೆಳೆ
author img

By

Published : Apr 26, 2022, 5:57 PM IST

ದಾವಣಗೆರೆ: ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯನ್ನು ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ‌ ತಾಲೂಕು ಎಂದು ಘೋಷಣೆ ಮಾಡಿದೆ. ಆದ್ರೂ ಛಲ ಬಿಡದ ರೈತ ಶಿವಮೂರ್ತಿ ತನ್ನ ನಾಲ್ಕು ಎಕರೆ ಜಮೀನಿನಲ್ಲಿ 2,500 ಬಾಳೆಗಿಡಗಳನ್ನು ನೆಟ್ಟು ಉತ್ತಮ ಬಾಳೆ ತೋಟ ಮಾಡಿದ್ದರು. ಅದ್ರೆ ಮುಂಗಾರು ಪೂರ್ವವಾಗಿ ಸುರಿದ ಗಾಳಿಸಹಿತ ಮಳೆಯಿಂದ ಬಾಳೆ ಗಿಡಗಳು ನೆಲಕಚ್ಚಿವೆ. 2,500 ಬಾಳೆಗಿಡಗಳಲ್ಲಿ 1,500ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕುರುಳಿದ್ದು ರೈತ ಕಂಗಾಲಾಗಿದ್ದಾನೆ.

ಇನ್ನೊಂದು ತಿಂಗಳು ಕಳೆದಿದ್ರೆ ಬಾಳೆ ಫಸಲು ಕೈಗೆ ಬರುತ್ತಿತ್ತು.‌ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಶಿವಮೂರ್ತಿಗೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ. ಪತ್ನಿಯ ತಾಳಿಸಹಿತ ಚಿನ್ನ ಅಡವಿಟ್ಟು ಸಾಲ ಮಾಡಿ ಬಾಳೆ ಬೆಳೆದಿದ್ದರೂ ಫಸಲು ಮಾತ್ರ ಕೈ ಸೇರಲಿಲ್ಲ. ನಾಲ್ಕು ಲಕ್ಷದಷ್ಟು ನಷ್ಟ ಅನುಭವಿಸಿದ್ದು, ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲವೆಂದು ತಮ್ಮ ಅಳಲು ತೋಡಿಕೊಂಡರು.

ಇನ್ನು ಕೆಲವೆಡೆ ಬೋರ್​ವೆಲ್‌ಗಳಲ್ಲಿ ನೀರು ಬಾರದೇ ರೈತರು ನಷ್ಟ ಅನುಭವಿಸಿದ್ದಾರೆ. ಕೇವಲ ಬಾಳೆ ಬೆಳೆ ಅಲ್ಲದೇ ದಾಳಿಂಬೆ, ಅಡಿಕೆ, ಕಲ್ಲಂಗಡಿ ಸೇರಿ ತೋಟಗಾರಿಕೆ ಬೆಳೆಗಳು ನಶಿಸುವ ಹಂತಕ್ಕೆ ತಲುಪಿದೆ. ಇದರಿಂದ ಆನಗೋಡು, ಮಾಯಕೊಂಡ ಹೋಬಳಿಯ ರೈತರು ತಲೆ ಮೇಲೆ ‌ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಸರ್ವೇ ರಿಪೋರ್ಟ್‌ ಬಳಿಕ ನನ್ನ ತಾಯಿಯ ಚುನಾವಣೆ ಸ್ಪರ್ಧೆ ನಿರ್ಧಾರ: ಪ್ರಜ್ವಲ್ ರೇವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.