ETV Bharat / city

ಜಮೀನು ವಿವಾದ: ತಹಶೀಲ್ದಾರ್ ಕಚೇರಿ ಮುಂದೆಯೇ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಯತ್ನ

author img

By

Published : Jun 25, 2022, 5:31 PM IST

ಜಮೀನು ವ್ಯಾಜ್ಯ ಪ್ರಕರಣದಲ್ಲಿಂದು ‘ತಹಶೀಲ್ದಾರ್​ ಕೋರ್ಟ್​ನಲ್ಲಿ ತನ್ನ ಪರವಾಗಿ ತೀರ್ಪು ಬರಲಿಲ್ಲವೆಂದು ವ್ಯಕ್ತಿಯೋರ್ವ ತಹಶೀಲ್ದಾರ್​ ಕಚೇರಿ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Attempt to commit suicide by consuming poison in front of Tahsildar's office
ತಹಾಸೀಲ್ದಾರ್ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ದಾವಣಗೆರೆ : ‌ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತಹಶೀಲ್ದಾರ್ ಕಚೇರಿ ಮುಂಭಾಗವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಕಚೇರಿಯಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ನಾರಾಯಣಪುರ ಗ್ರಾಮದ ಪಂಚಾಯತ್​ ಸದಸ್ಯ ಲೋಕೇಶ್ ನಾಯ್ಕ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ನ್ಯಾಮತಿ ತಾಲೂಕಿನ ಲಕ್ಕಿನಕೊಪ್ಪ ಗ್ರಾಮದಲ್ಲಿರುವ 4 ಎಕರೆ ಜಮೀನು ವಿಚಾರವಾಗಿ ಲೋಕೇಶ್ ನಾಯ್ಕ್ ಹಾಗೂ ಸಹೋದರನ ಮಕ್ಕಳ ಮಧ್ಯೆ ವ್ಯಾಜ್ಯವಿತ್ತು. ಈ ವ್ಯಾಜ್ಯ ನ್ಯಾಮತಿ ತಹಶೀಲ್ದಾರ್ ಕೋರ್ಟ್​ನಲ್ಲಿರುವುದರಿಂದ ಇಂದು ತೀರ್ಪು ನೀಡಲಾಯಿತು. ತನ್ನ ಪರವಾಗಿ ತೀರ್ಪು ಬಂದಿಲ್ಲ ಎಂದು ಮನನೊಂದ ಲೋಕೇಶ್ ನ್ಯಾಮತಿ ತಹಶೀಲ್ದಾರ್ ಕಚೇರಿ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

ತಹಶೀಲ್ದಾರ್ ಕಚೇರಿ ಮುಂದೆಯೇ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ0 ಯತ್ನ

ಸ್ಥಳದಲ್ಲಿದ್ದ ಜನರು ಹಾಗೂ ಸಂಬಂಧಿಕರು ಆತ್ಮಹತ್ಯೆಗೆ ಯತ್ನಿಸಿದ ಲೋಕೆಶ್​ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ನ್ಯಾಮತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ದಾವಣಗೆರೆ: ಮನೆಯಲ್ಲಿ ಒಬ್ಬರೇ ಕಾಲ ಕಳೆಯುತ್ತಿದ್ದ ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕೊಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.