ETV Bharat / city

ರೈಲ್ವೆ ಮುಂಗಡ ಟಿಕೆಟ್​​ ಬುಕ್ಕಿಂಗ್​ ಸೇವೆ ಆರಂಭ - ರೈಲು ಸಂಚಾರ ಸುದ್ದಿ

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪಿಆರ್​ಎಸ್ ಕೌಂಟರ್​ಗಳಾದ ಮೈಸೂರು, ದಾವಣಗೆರೆ, ಶಿವಮೊಗ್ಗ ಮತ್ತು ಹಾಸನ ಜಿಲ್ಲಾ ರೈಲು ನಿಲ್ದಾಣಗಳಲ್ಲಿ ಟಿಕೆಟ್​ ಕಾಯ್ದಿರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

advance-ticket-reservation-for-railways-started
ನೈರುತ್ಯ ರೈಲ್ವೆ ವಿಭಾಗ
author img

By

Published : May 23, 2020, 12:50 PM IST

ದಾವಣಗೆರೆ: ಜಿಲ್ಲೆ ಸೇರಿದಂತೆ ಮೈಸೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ರೈಲ್ವೆ ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್​ ಬುಕ್ಕಿಂಗ್​ ಸೇವೆ ಆರಂಭಿಸಲಾಗಿದೆ.

ಜೂನ್ 1ರಿಂದ ಆರಂಭವಾಗುವ 100 ರೈಲು ಸೇವೆಗಳಿಗೆ ಟಿಕೆಟ್​ ಕಾಯ್ದಿರಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪಿಆರ್​ಎಸ್ ಕೌಂಟರ್​ಗಳಾದ ಮೈಸೂರು, ದಾವಣಗೆರೆ, ಶಿವಮೊಗ್ಗ ಮತ್ತು ಹಾಸನ ನಿಲ್ದಾಣಗಳಲ್ಲಿ ಈಗಾಗಲೇ ಕಾರ್ಯ ಶುರು ಮಾಡಲಾಗಿದೆ. ಅಲ್ಲದೆ ಪ್ರಯಾಣಿಕರ ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್​ಗಳಲ್ಲಿ ಮೇ 25ರಿಂದ ಪಡೆಯಬಹುದು.

ರೈಲ್ವೆ ಮುಂಗಡ ಟಿಕೆಟ್​​ ಬುಕ್ಕಿಂಗ್​​ ಸೇವೆ ಪ್ರಾರಂಭ

ರಾಜ್ಯದೊಳಗೆ 2 ಜೋಡಿ ಅಂತರ್ ಜಿಲ್ಲಾ ರೈಲುಗಳು ವಾರದಲ್ಲಿ ಮೂರು ದಿನ ಬೆಂಗಳೂರಿನಿಂದ ಬೆಳಗಾವಿಗೆ ಮತ್ತು ಭಾನುವಾರ ಹೊರತುಪಡಿಸಿ ಬೆಂಗಳೂರಿನಿಂದ ಮೈಸೂರಿಗೆ ಎಕ್ಸ್​​ಪ್ರೆಸ್ ವಿಶೇಷ ರೈಲು ಈಗಾಗಲೇ ಪ್ರಾರಂಭಗೊಂಡಿದೆ.

ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬುಕ್ಕಿಂಗ್ ಕಚೇರಿಗಳು ಸೇರಿದಂತೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ರೈಲ್ವೆ ಇಲಾಖೆಗೆ ಪ್ರಯಾಣಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.