ದಾವಣಗೆರೆ: ಆಭರಣ ತಯಾರಿಸಿ ಕೊಡುವುದಾಗಿ ನಂಬಿಸಿ, ವಂಚನೆ ಮಾಡಿದ್ದ ಆರೋಪಿಯನ್ನು ಬಸವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗೌರ್ ಅದಕ್ ಅಲಿಯಾಸ್ ಸಮೂಲ್ (37) ಬಂಧಿತ ಆರೋಪಿ. ಮೂಲತಃ ಪಶ್ಚಿಮ ಬಂಗಾಳ ರಾಜ್ಯದ ಹೌರಾ ಜಿಲ್ಲೆಯ ಬರಾಂಪುರ್ ಗ್ರಾಮದವನಾದ ಈತ, ದಾವಣಗೆರೆಯಲ್ಲಿ ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದ.
ಕೆಲ ದಿನಗಳ ಹಿಂದೆ ಭರತ್ ಜ್ಯುವೆಲರಿ ಮಾಲೀಕ ವಿಜಯ್ಕುಮಾರ್, ಆಭರಣ ಮಾಡಿಕೊಡುವಂತೆ 450 ಗ್ರಾಂ ಬಂಗಾರವನ್ನು ಗೌರ್ ಅದಕ್ಗೆ ನೀಡಿದ್ದರು. ಆದರೆ ಆರೋಪಿ ಆ ಚಿನ್ನವನ್ನು ಎಗರಿಸಿ ಪರಾರಿಯಾಗಿದ್ದನು. ಈ ಕುರಿತು ಜ್ಯುವೆಲರಿ ಮಾಲೀಕ ವಿಜಯಕುಮಾರ್ ಬಸವನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಬಂಧಿತನಿಂದ 12,07,500 ರೂ. ಬೆಲೆಬಾಳುವ 345 ಗ್ರಾಂ ಬಂಗಾರ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಓದಿ: 'ಬಾಂಬೆ ತಂಡ'ದ ಸದಸ್ಯರ ಕ್ಷೇತ್ರಗಳು ಅಭಿವೃದ್ಧಿಯಾದವೇ?; ಎಚ್ಡಿಕೆ ವಾಗ್ದಾಳಿ