ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ 7 ವರ್ಷದ ಅವಧಿಯ ಆಡಳಿತದಲ್ಲಿ, ದೇಶದ ಜನ ನಿರುದ್ಯೋಗ ಹಾಗೂ ಕೊರೊನಾದಿಂದ ನರಳುತ್ತಿದ್ದು, ಕೇವಲ ಪ್ರಚಾರಕ್ಕಾಗಿ ಸರ್ಕಾರ ಸೀಮಿತವಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಓದಿ: ಎದುರಾಳಿ ಗುಂಪಿನ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರು ಅರೆಸ್ಟ್!
ಯುವ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಂಸದರಾದ ನಳಿನ್ ಕುಮಾರ್ ಕಟೀಲು ಹಾಗೂ ತೇಜಸ್ವಿ ಸೂರ್ಯ ಮುಖವಾಡ ಧರಿಸಿದ ಕಾರ್ಯಕರ್ತರು. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಪ್ಯಾಕೇಜ್‌ಗಳನ್ನು ಅಣಕಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೂಲಸೌಕರ್ಯ ಅಭಿವೃದ್ಧಿಗೆ ಬಿಹಾರ್ ಪ್ಯಾಕೇಜ್ ಸೇರಿದಂತೆ ಹಲವು ಪ್ಯಾಕೇಜುಗಳ ಘೋಷಣೆ ಭೋಗಸ್ ಎಂದು ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್. ಮನೋಹರ್, ಪ್ರಧಾನಿ ನರೇಂದ್ರ ಮೋದಿ ಆಡಳಿತ ಇಂದಿಗೆ ಏಳು ವರ್ಷ ಪೂರ್ಣಗೊಳಿಸಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಮೊದಲ 5 ವರ್ಷ ಘೋಷಿಸಿದ ಪ್ಯಾಕೇಜ್‌ಗಳಲ್ಲಿ ಎಷ್ಟು ಈಡೇರಿಸಿದ್ದಾರೆ ಎನ್ನುವುದು ದೇಶಕ್ಕೆ ಹಾಗೂ ವಿಶ್ವಕ್ಕೆ ತಿಳಿದಿದೆ.
ದೇಶಾದ್ಯಂತ ಕೊರೊನಾ ಎರಡನೇ ಅಲೆಯ ಮಹಾಮಾರಿ ಆತಂಕ ಸೃಷ್ಟಿಸುತ್ತಿದೆ. ಚುನಾವಣೆ ಉದ್ದೇಶದಿಂದ ಕೇವಲ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಕ್ಕೆ ಪ್ಯಾಕೇಜ್ ನೀಡಲು ಸೀಮಿತವಾಗಿಸಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.
ಆದರೆ,ಬಿಜೆಪಿಯ ಅಂದ ಭಕ್ತರು ಮೋದಿ ಬಂದ ನಂತರ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಇಂದು ದೇಶದಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರು ನಿರ್ನಾಮವಾಗಿದ್ದಾರೆ, ಕೇವಲ ಅದಾನಿ, ಅಂಬಾನಿ ಅಂತವರು ಮಾತ್ರ ಈ ದೇಶದಲ್ಲಿ ಬದುಕಲು ಪ್ರಧಾನಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ಬಡ ಜನರು ಹಾಗೂ ಹಿಂದುಳಿದ ವರ್ಗದವರ ಬಗ್ಗೆ ಪ್ರಧಾನಿಗೆ ಕಾಳಜಿ ಇಲ್ಲ, ಬಿಜೆಪಿ ಕೇವಲ ಪ್ರಚಾರಕ್ಕೆ ಸೀಮಿತವಾದದ್ದು. ನರೇಂದ್ರ ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಆದರೆ, 15 ಪೈಸೆಯನ್ನೂ ಹಾಕಿಲ್ಲ. 50 ರೂಪಾಯಿ ಬೆಲೆಯ ಪೆಟ್ರೋಲ್ ಹಾಗೂ ಡೀಸೆಲ್ 100 ರೂಪಾಯಿಗೆ ಏರಿಸಿದ್ದಾರೆ.
ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಈ ಮೊತ್ತವನ್ನು ಇಂಧನ ಬೆಲೆ ತಲುಪಿದೆ. ಇದು ನರೇಂದ್ರ ಮೋದಿ ದೇಶಕ್ಕೆ ನೀಡಿದ ಕೊಡುಗೆ. ಎಲ್ಪಿಜಿ ದರ ಸಹ ಏರಿಕೆ ಮಾಡಲಾಗಿದ್ದು, ಮೋದಿ ನೀಡಿದ ಸುಳ್ಳು ಭರವಸೆಯಿಂದ ಇಂದು ಜನ ದಾರಿ ತಪ್ಪಿದ್ದಾರೆ.
ದೇಶವನ್ನ ದಾರಿ ತಪ್ಪಿಸಿದ ಕೀರ್ತಿ ಇಂದು ನರೇಂದ್ರ ಮೋದಿಗೆ ಸಲ್ಲುತ್ತದೆ. ಆದರೆ, ಬಿಜೆಪಿಯವರಿಗೆ ಮಾನ- ಮರ್ಯಾದೆ ಇಲ್ಲದೆ ಮಂಡಲ ಮಟ್ಟದವರೆಗೆ ಸಾಧನೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಮೋದಿ ಮಾಡಿದ ಸಾಧನೆಯನ್ನು ಜನರಿಗೆ ಇವರು ತಿಳಿಸಬೇಕು.
ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಹಾಗೂ ಅಚ್ಚೆದಿನ್ ಇವೆಲ್ಲವೂ ಬೋಗಸ್. ನರೇಂದ್ರ ಮೋದಿ ಒಬ್ಬ ಬೋಗಸ್ ನಾಯಕ ಎನ್ನುವುದನ್ನು ಬಿಜೆಪಿಯವರು ಒಪ್ಪಿಕೊಂಡು ಜನರ ಮುಂದೆ ಶರಣಾಗಬೇಕು ಎಂದು ಈ ಪ್ರತಿಭಟನೆ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು.