ETV Bharat / city

ಕಟ್ಟಡ ಮಾಲೀಕರಿಗೆ ಹಣ ಕೊಡದೆ ಸತಾಯಿಸುತ್ತಿದ್ದ ಪಿಜಿ ಸುಂದರಿಯ ಬಂಧನ

ಮೊದಲು ಅಮಿತ್ ಜೊತೆ ಮದುವೆಯಾಗಿದ್ದ ಆರೋಪಿತ ಮಹಿಳೆ ಭುವನಾ ಗಂಡನಿಂದ ದೂರವಾಗಿದ್ದಳು. ಬಳಿಕ ವಿಶಾಲ್ ಪರಿಚಯವಾಗಿದ್ದರಿಂದ ಇಬ್ಬರು ಲೀವಿಂಗ್ ಟುಗೆದರ್ ಇದ್ದರು. ಈ ವಿಷಯ ಗಂಡನಿಗೆ ಗೊತ್ತಾದಾಗ ಪತ್ನಿಗೆ ಡೈವರ್ಸ್ ಕೊಟ್ಟಿದ್ದಾನೆ‌. ‌ನಂತರ ಅಮೆರಿಕಾದ ಕ್ಲಾಡ್ ಅಲೋಕ್ ಎಂಬುವನೊಂದಿಗೆ ಮದುವೆಯಾಗಿದ್ದಳು..

women-arrested-for-not-paying-pg-building-rent
ಪಿಜಿ ಸುಂದರಿಯ ಬಂಧನ
author img

By

Published : Feb 7, 2021, 4:42 PM IST

ಬೆಂಗಳೂರು : ರಾಜಧಾನಿಯಲ್ಲಿ ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರು ಯೋಚಿಸಲೇಬೇಕಾದ ಸ್ಟೋರಿ ಇದು‌. ಬಾಡಿಗೆ ಪಡೆಯುವಾಗ ನಯವಾಗಿ ಮಾಲೀಕರೊಂದಿಗೆ ಮಾತನಾಡಿ ಅನಂತರ ಬಾಡಿಗೆ ಕೇಳಲು ಹೋದ ಮಾಲೀಕನ ಮೇಲೆಯೇ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಹೆಚ್​​ಎಎಲ್ ಪೊಲೀಸರು ಬಂಧಿಸಿದ್ದಾರೆ‌.

ಕುಂದಲಹಳ್ಳಿ ನಿವಾಸಿ ಮನೆ ಮಾಲೀಕ ವೆಂಕಟರೆಡ್ಡಿ ನೀಡಿದ ದೂರಿನ ಮೇರೆಗೆ ಭುವನಾ ಹಾಗೂ ವಿಶಾಲ್ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಜಸ್ಥಾನ ಮೂಲದ ಭುವನಾ ಎಂಬಾಕೆ ಕಳೆದ ಎಂಟು ವರ್ಷಗಳ ಹಿಂದೆ ಮಾರತ್‌ಹಳ್ಳಿ‌ಯಲ್ಲಿ ವೆಂಕಟರೆಡ್ಡಿ ಸೇರಿದ ಮನೆಯನ್ನು ಪೇಯಿಂಗ್ ಗೆಸ್ಟ್ (ಪಿಜಿ) ನಡೆಸುವುದಾಗಿ ತಿಂಗಳಿಗೆ 6 ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಬಾಡಿಗೆ ಪಡೆದಿದ್ದಳು‌.

ಪಿಜಿಯಲ್ಲಿ ಸುಮಾರು 300 ಜನರು ವಾಸವಾಗಿದ್ದರು‌‌‌. ಪ್ರಾರಂಭದಲ್ಲಿ ಬಾಡಿಗೆ ನೀಡುತ್ತಿದ್ದ ಭುವನಾ ನಂತರ ಸ್ನೇಹಿತ ವಿಶಾಲ್ ಜೊತೆಗೂಡಿ ಬಾಡಿಗೆ ಕೊಡದೆ ಮಾಲೀಕರಿಗೆ ಸತಾಯಿಸಿದ್ದಾರೆ. ಬಾಡಿಗೆ ಪಡೆದಾಗಿನಿಂದ ಈವರೆಗೂ ವಿದ್ಯುತ್, ವಾಟರ್ ಬಿಲ್ ಯಾವುದೂ ಕಟ್ಟಿಲ್ಲ. 2019ರ ಡಿಸೆಂಬರ್‌ನಿಂದ 2021ರ ಫೆಬ್ರವರಿವರೆಗೆ ಸುಮಾರು ಒಂದೂವರೆ ಕೋಟಿ ಬಾಡಿಗೆ ಹಣ ನೀಡಿಲ್ಲ.

ಹಣ ಕೇಳಲು ಹೋದ್ರೆ ಅತ್ಯಾಚಾರ ಕೇಸ್ ಹಾಕುವುದಾಗಿ ಮಾಲೀಕರಿಗೆ ಭುವನಾ ಹೆದರಿಸಿದ್ದಾಳೆ. ಇದರಿಂದ ರೋಸಿ ಹೋದ ಮನೆ ಮಾಲೀಕ ಬಾಡಿಗೆ ಕೊಡಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ಬಳಿಕ ವಿಚಾರಣೆ ನಡೆಸಿ ಹೆಚ್​ಎಎಲ್ ಪೊಲೀಸರಿಗೆ ಹಣ ಕೊಡಿಸುವಂತೆ ಕೋರ್ಟ್ ಆದೇಶಿಸಿತ್ತು. ಇದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಮ್​​ ತರ ಗಂಡನನ್ನು ಬದಲಿಸುತ್ತಿದ್ದ ಯುವತಿ : ಮೊದಲು ಅಮಿತ್ ಜೊತೆ ಮದುವೆಯಾಗಿದ್ದ ಆರೋಪಿತ ಮಹಿಳೆ ಭುವನಾ ಗಂಡನಿಂದ ದೂರವಾಗಿದ್ದಳು. ಬಳಿಕ ವಿಶಾಲ್ ಪರಿಚಯವಾಗಿದ್ದರಿಂದ ಇಬ್ಬರು ಲೀವಿಂಗ್ ಟುಗೆದರ್ ಇದ್ದರು. ಈ ವಿಷಯ ಗಂಡನಿಗೆ ಗೊತ್ತಾದಾಗ ಪತ್ನಿಗೆ ಡೈವರ್ಸ್ ಕೊಟ್ಟಿದ್ದಾನೆ‌. ‌ನಂತರ ಅಮೆರಿಕಾದ ಕ್ಲಾಡ್ ಅಲೋಕ್ ಎಂಬುವನೊಂದಿಗೆ ಮದುವೆಯಾಗಿದ್ದಳು.

ಇದಾದ ಮೂರು ತಿಂಗಳ ಅಂತರದೊಳಗೆ ಅಲೋಕ್ ಹಾಗೂ ಕುಟುಂಬಸ್ಥರಿಗೆ ಕಿರುಕುಳ, ಬೆದರಿಕೆ ನೀಡಿದ್ದಳಂತೆ‌. ಅವನನ್ನು ಬಿಟ್ಟು ದೆಹಲಿ ಮೂಲದ ವಿಶಾಲ್ ಜೊತೆ ಸಂಬಂಧ ಬೆಳೆಸಿಕೊಂಡಿದ್ದಳು. ದೆಹಲಿ ಮೂಲದ ರೌಡಿಶೀಟರ್ ಆಗಿದ್ದ ವಿಶಾಲ್ ಜೊತೆ ವಾಸವಾಗಿದ್ದಳು‌ ಎಂದು ಪೊಲೀಸರು ತಿಳಿಸಿದ್ದಾರೆ‌‌.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.