ETV Bharat / city

ಬೆಂಗಳೂರಲ್ಲಿ 'ವೈಫ್​ ಗಿವಿಂಗ್​' ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ LIVE ವಿಡಿಯೋ ಮಾಡಿ ಶೇರ್​ ಮಾಡ್ತಿದ್ದ ಪತಿ! - ಬೆಂಗಳೂರಲ್ಲಿ ವೈಫ್ ಸ್ವಾಪಿಂಗ್

ಬೆಂಗಳೂರಲ್ಲಿ 'ವೈಫ್ ಗಿವಿಂಗ್​' ಕರಾಳ ದಂಧೆ ಬೆಳಕಿಗೆ ಬಂದಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆಂಡತಿಯನ್ನೇ ಪರ ಪುರುಷರ ಜೊತೆ ಸಮ್ಮಿಲನ ಮಾಡಿಸದ ಗಂಡ

author img

By

Published : Feb 4, 2022, 5:56 AM IST

Updated : Feb 4, 2022, 5:01 PM IST

ಬೆಂಗಳೂರು: ಆತನಿಗೆ ವಿಚಿತ್ರ ಬಯಕೆಯೊಂದಿತ್ತು. ಅದು ತನ್ನ ಹೆಂಡತಿಯನ್ನೇ ಪರ ಪುರುಷರ ಜೊತೆ ಸಮ್ಮಿಲನ ಮಾಡಿಸಿ ಅದನ್ನು ಮೊಬೈಲ್​​ನಲ್ಲಿ ಲೈವ್ ವಿಡಿಯೋ ಮಾಡಿ ನೋಡುವ ಹುಚ್ಚು ಬೆಳೆಸಿಕೊಂಡಿದ್ದ. ಜೊತೆಗೆ ಅದನ್ನೇ ದಂಧೆ ಮಾಡಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ವೈಫ್ ಗಿವಿಂಗ್​ಗೆ ಆಹ್ವಾನ ನೀಡುತ್ತಿದ್ದ ವ್ಯಕ್ತಿಯು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ‌.

ಈ ಮೂಲಕ‌ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಾಗೂ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ವೈಫ್ ಗಿವಿಂಗ್ ದಂಧೆ‌ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಂತಾಗಿದೆ‌. ಆಶ್ಚರ್ಯಕರ ವಿಷಯವೆಂದರೆ ಪತಿಯ ದಂಧೆಗೆ ಪತ್ನಿ ಸಹ ಗ್ರೀನ್ ಸಿಗ್ನಲ್ ‌ನೀಡಿದ್ದಳಂತೆ.‌ ಈ ವಿಲಕ್ಷಣ ದಂಪತಿ ಹೈಟೆಕ್ ಮಾದರಿಯಲ್ಲಿ ದಂಧೆ ನಡೆಸಿ ಹಣ ಸಂಪಾದನೆ ಮಾಡುವ ಪ್ಲಾನ್​​​ ರೂಪಿಸಿಕೊಂಡಿದ್ದರು ಎಂಬುದು ಬೆಳಕಿಗೆ ಬಂದಿದೆ.

ನಕಲಿ ಖಾತೆ ತೆರೆದು ಹೆಂಡತಿಯ ಫೋಟೋ ಶೇರ್​ ಮಾಡುತ್ತಿದ್ದ ಗಂಡ

ನಗರದಲ್ಲಿ ಹೈಟೆಕ್ ವೈಫ್ ಗಿವಿಂಗ್ ನಡೆಯುತ್ತಿರುವ ಬಗ್ಗೆ ಟ್ವಿಟರ್​​ನಲ್ಲಿ ಆರೋಪಿಯೇ ಹಂಚಿಕೊಂಡಿದ್ದ.‌ ಇದನ್ನು ಸಾರ್ವಜನಿಕರೊಬ್ಬರು ನಗರ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಂಡ್ಯ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಲವು ತಿಂಗಳಿಂದ ಫ್ಯಾಂಟಸಿಗಾಗಿ ದಂಧೆ ನಡೆಸುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾನಂತೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಈತನನ್ನು 14 ದಿನಗಳ ಕಾಲ‌ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ‌.

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಮಾಹಿತಿ

ಫ್ಯಾಂಟಸಿ ಸೆಕ್ಸ್​ಗೆ ಪತ್ನಿಯನ್ನು ಒಪ್ಪಿಸಿದ್ದ ಪತಿ: ಮಂಡ್ಯ ಮೂಲದ ಯುವಕ, ಮಾಗಡಿಯ ಯುವತಿ ಇಬ್ಬರು ಎಲೆಕ್ಟ್ರಾನಿಕ್ ಶಾಪ್​​ವೊಂದರಲ್ಲಿ ಸೇಲ್ಸ್ ಮ್ಯಾನ್​​ಗಳಾಗಿ ಕೆಲಸ ಮಾಡುವಾಗ ಒಬ್ಬರಿಗೊಬ್ಬರ ಪರಿಚಯವಾಗಿತ್ತು. ಕ್ರಮೇಣ ಪ್ರೀತಿಗೆ ತಿರುಗಿದ ಪರಿಣಾಮ 2019ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದರು. ದಂಪತಿಗೆ ಒಂದೂವರೆ ವರ್ಷದ ಮುದ್ದಾದ ಮಗುವಿದೆ‌‌. ಪರಪ್ಪನ ಅಗ್ರಹಾರ ಬಳಿಯ ಸಿಂಗಸಂದ್ರದಲ್ಲಿ ವಾಸವಾಗಿದ್ದಾರೆ.

ಆರೋಪಿ ವಿನಯ್ ಪೋರ್ನ್ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದ. ಕೆಲ ಫನ್ನಿ ಪೋರ್ನ್ ವಿಡಿಯೋ ನೋಡಿ ಪ್ರೇರಣೆಗೊಂಡು ಪತ್ನಿಗೊಪ್ಪಿಸಿ ಮುಖ ಚಹರೆ ಬರದ ಹಾಗೇ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ಹಂತದಲ್ಲಿ ಪತ್ನಿಯನ್ನು ಫ್ಯಾಂಟಸಿ ಸೆಕ್ಸ್​​ಗೆ ಒಳಪಡಿಸುವ ಇಂಗಿತ ವ್ಯಕ್ತಪಡಿಸಿದ್ದನಂತೆ. ಇದಕ್ಕೆ ಪತ್ನಿ ಹೈಟೆಕ್ ಮಾದರಿಯಲ್ಲಿ ವೈಫ್ ಗಿವಿಂಗ್​ಗೆ ಸಮ್ಮತಿ ನೀಡಿದ್ದಳಂತೆ. ಟೆಲಿಗ್ರಾಂ ಮೂಲಕ ದಂಧೆಯ ಬಗ್ಗೆ ಮಾಹಿತಿ ನೀಡುತ್ತಿದ್ದನಂತೆ. ಆದರೆ ಸ್ನೇಹಿತನ ಸೂಚನೆ ಮೇರೆಗೆ ಇತ್ತೀಚೆಗೆ ಟ್ವಿಟರ್​​ನಲ್ಲಿ ಜಾಹ್ನವಿ ಹೆಸರಿನಲ್ಲಿ ವೈಫ್ ಗಿವಿಂಗ್ ಬಗ್ಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದ.

wife-swapping-in-bengaluru-accuse-husband-arrest
ದಂಧೆಗೆ ಬಳಸಿದ ವಸ್ತುಗಳು

ಪರ ಪುರುಷನ ಜೊತೆ ಪತ್ನಿ ಹಾಸಿಗೆ ಹಂಚಿಕೊಂಡಾಗ ಲೈವ್ ವಿಡಿಯೋ ಮಾಡ್ತಿದ್ದ ಗಂಡ: ಟ್ವಿಟರ್​​ನಲ್ಲಿ ಹಾಕಿರುವ ಮಾಹಿತಿ ಕಂಡು ಗ್ರಾಹಕರು ಆರೋಪಿಯನ್ನು ಸಂಪರ್ಕಿಸುತ್ತಿದ್ದರು. ಬಳಿಕ ಸಿಂಗಸಂದ್ರದ ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಿದ್ದ. ಹೆಂಡ್ತಿ ಜೊತೆ ಸೆಕ್ಸ್ ಮಾಡುವಾಗ ಅಲ್ಲೇ ಇದ್ದು, ಲೈವ್ ವಿಡಿಯೋ ಮಾಡುವುದಾಗಿ ಹೇಳುತ್ತಿದ್ದ. ಗ್ರಾಹಕರು ಒಪ್ಪಿಕೊಂಡ್ರೆ ಮೊಬೈಲ್​ನಲ್ಲಿ ವಿಡಿಯೋ ಮಾಡಿ ತನ್ನ ವಿಕೃತ ಬಯಕೆ ಈಡೇರಿಸಿಕೊಳ್ಳುತ್ತಿದ್ದನಂತೆ. ಇನ್ನೂ ವಿಚಿತ್ರ ಅಂದ್ರೆ ಹಣಕ್ಕಾಗಿ ಈತ ಡಿಮ್ಯಾಂಡ್ ಮಾಡದೇ ಗ್ರಾಹಕರು ಕೊಟ್ಟಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Last Updated : Feb 4, 2022, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.