ETV Bharat / city

ಎಸಿಬಿ ದಾಳಿಗೆ ಒಳಗಾಗಿದ್ದ ಕೆಎಎಸ್​ ಅಧಿಕಾರಿ ನಾಗರಾಜ್ ಪತ್ನಿ ನಿಧನ - ಬೆಂಗಳೂರಿನಲ್ಲಿ ಎಸಿಬಿ ಅಧಿಕಾರಿಗಳ ದಾಳಿ

ಬುಧವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾದ ನಾಗರತ್ನಮ್ಮ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂಬ ಮಾಹಿತಿ ದೊರೆತಿದೆ.

wife-of-government-officer-who-raided-by-acb-dies-heart-attack-in-benglauru
ಎಸಿಬಿ ದಾಳಿಗೆ ಒಳಗಾಗಿದ್ದ ಕೆಎಎಸ್​ ಅಧಿಕಾರಿ ನಾಗರಾಜ್ ಪತ್ನಿ ತೀವ್ರ ಹೃದಯಾಘಾತದಿಂದ ಮೃತ
author img

By

Published : Dec 2, 2021, 10:02 AM IST

Updated : Dec 2, 2021, 11:41 AM IST

ನೆಲಮಂಗಲ: ಇತ್ತೀಚೆಗೆ ಎಸಿಬಿ ದಾಳಿಗೊಳಗಾಗಿದ್ದ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಅವರ ಪತ್ನಿ ನಾಗರತ್ನಮ್ಮ (53) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ನೆಲಮಂಗಲದ ಪರಮಣ್ಣ ಬಡಾವಣೆಯ ನಿವಾಸಿ ಎಲ್.ಸಿ.ನಾಗರಾಜ್ ಮೇಲೆ ಆದಾಯಕ್ಕೂ ಮೀರಿ ಆಸ್ತಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಬುಧವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾದ ನಾಗರತ್ನಮ್ಮ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂಬ ಮಾಹಿತಿ ದೊರೆತಿದೆ.

'ವಿಶೇಷ ಭೂಸ್ವಾಧೀನ ಅಧಿಕಾರಿಯಾಗಬೇಕಿದ್ದ ನನ್ನನ್ನು ಹಿರಿಯ ಅಧಿಕಾರಿಯೊಬ್ಬರು ಟಾರ್ಗೆಟ್ ಮಾಡಿದ್ದು, ಕಳೆದ ಮೂರು ವರ್ಷದಲ್ಲಿ 5 ಬಾರಿ ರೇಡ್ ಮಾಡಲಾಗಿದೆ. ನಿಜವಾದ ಕಳ್ಳರನ್ನು ಬಿಟ್ಟು ನಮ್ಮಂಥವರನ್ನ ಟಾರ್ಗೆಟ್ ಮಾಡಲಾಗಿದೆ' ಎಂದು ರೇಡ್ ವೇಳೆ ನಾಗರಾಜ್ ದೂರಿದ್ದರು. ಈ ಘಟನೆಗಳಿಂದ ಪತ್ನಿ ನೊಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಪೊಲೀಸರ ಹೊಡೆತಕ್ಕೆ ಬಲಗೈ ಕಳೆದುಕೊಂಡ ಯುವಕ... ಪೋಷಕರಿಂದ ಗಂಭೀರ ಆರೋಪ

Last Updated : Dec 2, 2021, 11:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.