ETV Bharat / city

ವೈಟ್ ಟಾಪಿಂಗ್ ಕಾಮಗಾರಿ: ಏ. 15ರಿಂದ ಬೆಂಗಳೂರಿನ ಗೂಡ್‌ ಶೆಡ್‌ ರಸ್ತೆ ಸಂಪೂರ್ಣ ಬಂದ್ - White Tapping Works in Good Shed Road

ಬೇಲಿಮಠದ ರಸ್ತೆಯಿಂದ ಶಾಂತಲಾ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಗೂಡ್‌ಶೆಡ್ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ ಎಂದು ಪಾಲಿಕೆಯ ಅಭಿಯಂತರರು ಹೇಳಿದ್ದಾರೆ.

white-tapping-works-good-shed-roads-closed-for-one-month
ವೈಟ್ ಟಾಪಿಂಗ್ ಕಾಮಗಾರಿ: ಏಪ್ರಿಲ್ 15ರಿಂದ ಗೂಡ್‌ ಶೆಡ್‌ ರಸ್ತೆ ಸಂಪೂರ್ಣ ಬಂದ್
author img

By

Published : Apr 7, 2022, 7:24 AM IST

ಬೆಂಗಳೂರು : ಬೇಲಿಮಠದ ರಸ್ತೆಯಿಂದ ಶಾಂತಲಾ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಗೂಡ್‌ಶೆಡ್ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಮೈಸೂರು ರಸ್ತೆಯಿಂದ ಮೆಜಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಮುಚ್ಚಲಾಗುತ್ತದೆ ಎಂದು ಹೇಳಲಾಗಿದೆ.

ವೈಟ್ ಟಾಪಿಂಗ್ ಯೋಜನೆಯಡಿ ಗೂಡ್‌ಶೆಡ್ ರಸ್ತೆಯನ್ನು ಸುಮಾರು 11.88 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬಿಜಿಎಸ್ ಫ್ಲೈಓವರ್, ಅಂಬೇಡ್ಕರ್ ಡೌನ್ ಲ್ಯಾಂಪ್‌ನಿಂದ ಡಾ.ಟಿಸಿಎಂ ರಾಯನ್ ರಸ್ತೆ ಮಾರ್ಗವಾಗಿ ಶಾಂತಲಾ ಜಂಕ್ಷನ್ ವರೆಗೆ ಎರಡು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ: ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಮೊದಲ ಹಂತದ ಕಾಮಗಾರಿಯನ್ನು ಆರಂಭಿಸಲಾಗಿದೆ. ಮೂರು ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಏಳು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈಗ ಎರಡನೇ ಹಂತದ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಮುಗಿಸುವ ಬಗ್ಗೆ ಹೇಳಿದ್ದಾರೆ.

ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ ಏಪ್ರಿಲ್ 15ರಿಂದ ಗೂಡ್‌ ಶೆಡ್‌ ರಸ್ತೆ ಸಂಪೂರ್ಣ ಬಂದ್

ಓದಿ : ಜೆಜೆ ನಗರ ವ್ಯಾಪ್ತಿಯಲ್ಲಿ ಯುವಕನ ಹತ್ಯೆ: ಗೃಹ ಸಚಿವ, ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.