ETV Bharat / city

ಬಿಜೆಪಿ ಏನೇ ಟಫ್ ರೂಲ್ಸ್ ತಂದರೂ ಪಾದಯಾತ್ರೆ ಮಾಡೇ ಮಾಡ್ತೇವೆ ; ಡಿ ಕೆ ಶಿವಕುಮಾರ್‌

ಮೇಕೆದಾಟು ಪಾದಯಾತ್ರೆ ಹೆಸರು ಬದಲಾವಣೆ ಮಾಡಿಕೊಂಡು ನೀರಿಗಾಗಿ ನಡಿಗೆ ಮಾಡುತ್ತೇವೆ. ವಾಕ್ ಫಾರ್ ವಾಟರ್ ನಮ್ಮ ಕಾರ್ಯಕ್ರಮ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ..

Whatever the BJP brings tough rules, we will do padayatra: DK Shivakumar
ಬಿಜೆಪಿ ಏನೇ ಟಫ್ ರೂಲ್ಸ್ ತಂದರೂ ಮೇಕೆದಾಟುಗಾಗಿ ಪಾದಯಾತ್ರೆ ಮಾಡ್ತೇವೆ; ಡಿಕೆ ಶಿವಕುಮಾರ್‌
author img

By

Published : Jan 5, 2022, 4:47 PM IST

ಬೆಂಗಳೂರು : ಇದು ಕೋವಿಡ್ ಲಾಕ್‌ಡೌನ್ ಅಲ್ಲ, ಬಿಜೆಪಿ ಲಾಕ್‌ಡೌನ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಏನೇ ಟಫ್ ರೂಲ್ಸ್ ತಂದರೂ ಮೇಕೆದಾಟುಗಾಗಿ ಪಾದಯಾತ್ರೆ ಮಾಡ್ತೇವೆ ಎಂದಿರುವ ಡಿ ಕೆ ಶಿವಕುಮಾರ್‌..

ಸದಾಶಿವನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ರಾತ್ರಿ ನಾನು ಟಿವಿಯಲ್ಲಿ ಬಿಜೆಪಿ ಕರ್ಫ್ಯು, ಬಿಜೆಪಿ ಲಾಕ್‌ಡೌನ್ ವಿಚಾರ ನೋಡಿದೆ. ಯಾವ ಕರ್ಫ್ಯು ಇಲ್ಲ, ರಾಜಕೀಯ ಟಫ್ ರೂಲ್ಸ್ ತರ್ತಿದ್ದಾರೆ. ಅದಕ್ಕೆ ಅವರು ಆಫೀಸ್‌ಗಳ ಕೈನಲ್ಲಿ ಬರೆಸಿದ್ದಾರೆ ಎಂದರು.

ನಾವು ರ‍್ಯಾಲಿ ಮಾಡುತ್ತಿರುವುದು ಕುಡಿಯುವ ನೀರಿಗಾಗಿ. ಬೆಂಗಳೂರಿನ ಜನ, ರೈತರಿಗೆ ಪ್ರಾರ್ಥನೆ ಮಾಡುತ್ತಿದ್ದೇವೆ. ಕೋವಿಡ್ ಪಾಸಿಟಿವ್ ಯಾರ್ ಯಾರಿಗೆ ಆಯ್ತು ಅಂತಾ ತಿಳಿಸಿದ್ರೆ ನಾವು ಆ ಪೇಶೆಂಟ್ ಮೀಟ್ ಮಾಡುತ್ತೇವೆ. ನಮ್ಮ ಶಾಸಕಾಂಗ ಪಕ್ಷದ ನಾಯಕರೊಂದಿಗೆ ಮಾತನಾಡಲಾಗಿದೆ. ಬೆಂಗಳೂರು ಶಾಸಕರ ಜೊತೆಗೆ ಮಾತಾಡುತ್ತೇನೆ ಎಂದರು.

ವರ್ತಕರು, ಡ್ರೈವರ್, ಬೀದಿ ವ್ಯಾಪಾರ ಮಾಡುವವರ ಕೊಲೆ ಮಾಡುತ್ತಿದ್ದಾರೆ. ನನ್ನ ಮೇಲೆ, ಸಿಎಲ್‌ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕೇಸ್ ಹಾಕಿದ್ದಾರೆ. ಇವರಿಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್. ಮೋದಿ ಅವರು ರ‍್ಯಾಲಿ ಮಾಡಿದ್ರು ಅದಕ್ಕೇನು? ನಾವು ರ‍್ಯಾಲಿ ಮಾಡುವುದಿಲ್ಲ, ಧರಣಿ ಮಾಡಿಸುವುದಿಲ್ಲ. ನೀರಿಗಾಗಿ ನಡಿಗೆ ಮಾಡುತ್ತೇವೆ ಅಷ್ಟೇ.. ಎಂದು ಡಿ ಕೆ ಶಿವಕುಮಾರ್‌ ಸ್ಪಷ್ಟನೆ ನೀಡಿದರು.

ಮೇಕೆದಾಟು ಪಾದಯಾತ್ರೆ ಹೆಸರು ಬದಲಾವಣೆ ಮಾಡಿಕೊಂಡು ನೀರಿಗಾಗಿ ನಡಿಗೆ ಮಾಡುತ್ತೇವೆ. ವಾಕ್ ಫಾರ್ ವಾಟರ್ ನಮ್ಮ ಕಾರ್ಯಕ್ರಮ. ಇದೇ 9ರಂದು ಪಾದಯಾತ್ರೆ ಮಾಡ್ತೀರಾ ಎಂಬ ಪ್ರಶ್ನೆಗೆ, ಇಡೀ ರಾಜ್ಯದಲ್ಲಿ ಯಾರು ಓಡಾಡಲ್ವಾ? ಇವರು ಯಾರು ಓಡಾಡಲ್ವಾ, ಇವರ ಕಡೆಯವರು ಓಡಾಡಲ್ವಾ? ನಾವು ನಡೆಯುತ್ತೇವೆ. ಪಾದಯಾತ್ರೆ ಅಂತಾ ಯಾಕೆ ಎನ್ನುತ್ತೀರಾ ನೀರಿಗಾಗಿ ನಡಿಗೆ.. ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಕೋರ್ಟ್‌ನಿಂದ ನೋಟಿಸ್ ಕೊಟ್ಟಿದ್ದಾರೆ ಎಂದು ಹೇಳಿದರು.

ಮೊದಲು ನನ್ನ ಬ್ರದರ್ ಸುಧಾಕರ ಸ್ವಿಮಿಂಗ್ ಪೂಲ್‌ನಲ್ಲಿ ಸ್ವಿಮ್ ಮಾಡಿದ್ರಲ್ಲ ಅವರ ಮೇಲೆ ಕೇಸ್ ಹಾಕಿ. ಪಾಪ ಮಕ್ಕಳ ಮೇಲೆ ಬೇಡ. ಬೊಮ್ಮಾಯಿ ಕಾರ್ಯಕ್ರಮ ಮಾಡಿದ್ರಲ್ಲ ಅವರ ಮೇಲೆ ಹಾಕಿ. ಯಡಿಯೂರಪ್ಪ ಅಷ್ಟೊಂದು ಮದುವೆ ಅಟೆಂಡ್ ಮಾಡಿದ್ರಲ್ಲ ಅವರ ಮೇಲೆ ಕೇಸ್ ಹಾಕಿ. ಶ್ರೀರಾಮುಲು ಮೇಲೆ ಹಾಕಿ ಎಂದು ಡಿ ಕೆ ಶಿವಕುಮಾರ್‌ ಒತ್ತಾಯಿಸಿದರು.

'ನಾವು ಪಾದಯಾತ್ರೆ ಮಾಡುತ್ತೇವೆ': ಪ್ರತಿಪಕ್ಷ ನಾಯಕ‌ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಮಾತನಾಡಿ, ಕೊರೊನಾ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ನಾವು ಪಾದಯಾತ್ರೆ ಮಾಡಿಯೇ ಮಾಡ್ತೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ. ನಾವು ಜನರನ್ನ ಉಳಿಸುವ ಕೆಲಸವನ್ನೂ‌ ಮಾಡ್ತೇವೆ. ಪಾದಯಾತ್ರೆಯಿಂದ ಯಾರಿಗೂ ತೊಂದರೆಯಾಗಲ್ಲ. ಪಾದಯಾತ್ರೆ ನಿಲ್ಲಿಸಲು ಟಫ್ ರೂಲ್ಸ್ ತಂದ್ರಾ ಎಂಬ ಪ್ರಶ್ನೆಗೆ, ಅದೆಲ್ಲ ನನಗೆ ಗೊತ್ತಿಲ್ಲ. ಆದರೆ, ಪಾದಯಾತ್ರೆ ಮಾಡಿಯೇ ಮಾಡ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಎಫೆಕ್ಟ್ : ನಂದಿಬೆಟ್ಟದಲ್ಲಿ ಶನಿವಾರ ನಡೆಯಬೇಕಿದ್ದ ಬಿಜೆಪಿ ಚಿಂತನಾ ಸಭೆ ಸೋಮವಾರಕ್ಕೆ ಮುಂದೂಡಿಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.