ETV Bharat / city

ವರ್ಷದ ಬಳಿಕ ತಾಯಿ ಮಡಿಸಲು ಸೇರಿದ ಬಾಲಕ: ತನ್ನವರ ಹುಡುಕಿಕೊಟ್ಟ ಫೇಸ್‌ಬುಕ್‌ ಮೆಸೆಂಜರ್ - Boy reached his parents with the help of social network

ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಪಶ್ಚಿಮ ಬಂಗಾಳ ಮೂಲದ ಬಾಲಕ ಗೂಡ್ಸ್ ಟ್ರೈನ್ ಹತ್ತಿದ್ದಾನೆ. ನಂತರ ರಾಜ್ಯಗಳನ್ನು ದಾಟಿ ಕೊನೆಗೆ ಬೆಂಗಳೂರು ಸೇರಿದ್ದ. ಒಂದು ವರ್ಷದಿಂದ ಕಾಣೆಯಾಗಿದ್ದ ಮಗನನ್ನು ಕಾಣುತ್ತಲೇ ಭಾವುಕರಾದ ತಾಯಿ, ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು.

West bengal Boy reached his parents
ಫೇಸ್‌ಬುಕ್‌ ಮೆಸೆಂಜರ್ ಮೂಲಕ ಪೋಷಕರ ಮಡಿಲು ಸೇರಿದ ಬಾಲಕ
author img

By

Published : Jun 25, 2022, 11:26 AM IST

Updated : Jun 25, 2022, 1:29 PM IST

ಬೆಂಗಳೂರು: ಪೋಷಕರಿಂದ ದೂರವಾಗಿ ಅಲೆಯುತ್ತಿದ್ದ ಬಾಲಕನನ್ನ ಪುನಃ ಪೋಷಕರ ಮಡಿಲಿಗೆ ಸೇರಿಸುವ ಮೂಲಕ ಬೆಂಗಳೂರಿನ ಯುವಕರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಎರಡು ವಾರಗಳ ಹಿಂದೆ ನಗರದ ಬಿಟಿಎಂ ಲೇಔಟ್ ಬಳಿ ಹಸಿವಿನಿಂದ ಓಡಾಡುತ್ತಿದ್ದ ಉತ್ತರ ಭಾರತ ಮೂಲದ ಸುಹಾಸ್ ಎಂಬ ಬಾಲಕನನ್ನ ಸ್ಥಳೀಯ ಬೇಕರಿ ಮಾಲೀಕ ರಾಜಣ್ಣ, ಯುವಕರಾದ ನಿತಿನ್ ಮತ್ತು ಶ್ರೀಧರ್ ಗಮನಿಸಿ ವಿಚಾರಿಸಿದ್ದಾರೆ‌.

ಫೇಸ್‌ಬುಕ್‌ ಮೆಸೆಂಜರ್ ಮೂಲಕ ಪೋಷಕರ ಮಡಿಲು ಸೇರಿದ ಬಾಲಕ

ಹಿಂದಿ ಭಾಷೆ ಮಾತನಾಡುತ್ತಿದ್ದ 16-17 ವರ್ಷದ ಬಾಲಕನಿಗೆ ಊರಿನ ಹೆಸರು ಮರೆತಿತ್ತು ಮತ್ತು ತಿಳುವಳಿಕೆ ಇಲ್ಲದ ಕಾರಣ ತನ್ನ ಪೋಷಕರ ಮಾಹಿತಿ ಕೊಡಲು ಆಗಿರಲಿಲ್ಲ. ಆದರೆ, ಬಾಲಕ ಸುಹಾಸ್ ಹೇಳಿದ್ದ ಅಣ್ಣನ ಹೆಸರನ್ನ ಫೇಸ್ ಬುಕ್​​ನಲ್ಲಿ ಹುಡುಕಾಡಿದಾಗ ಪಶ್ಚಿಮ ಬಂಗಾಳದಲ್ಲಿರುವ ತನ್ನ ಅಣ್ಣನ ಫೋಟೋವನ್ನ ಗುರುತಿಸಿದ್ದ. ಕೂಡಲೇ ಮೆಸೆಂಜರ್ ಮೂಲಕ ಆತನ ಅಣ್ಣನನ್ನ ಸಂಪರ್ಕಿಸಿದ್ದಾರೆ.

West bengal Boy reached his parents
ಸುಹಾಸ್

ನಿತಿನ್ ಹಾಗೂ ಶ್ರೀಧರ್ ಆತನ ಪೋಷಕರು ಬರುವವರೆಗೂ ಬೇಕರಿಯಲ್ಲೇ ಮಲಗಲು ಜಾಗ ಕೊಟ್ಟು, ಹೇರ್ ಕಟಿಂಗ್ ಮಾಡಿಸಿ, ಊಟ ಬಟ್ಟೆ ಕೊಟ್ಟು ನೋಡಿಕೊಂಡಿದ್ದಾರೆ. ಒಂದು ವಾರದ ಬಳಿಕ ಸುಹಾಸ್ ಪೋಷಕರು ಬೆಂಗಳೂರಿಗೆ ಬಂದಿದ್ದು ಮಗನನ್ನ ಕಂಡು ತಾಯಿ ಕಣ್ಣೀರು ಹಾಕಿದ್ದಾರೆ. ಒಂದು ವರ್ಷದ ಹಿಂದೆ ಊರಿನ ಬಳಿ ಕಣ್ಣಾ ಮುಚ್ಚಾಲೆ ಆಟವಾಡುವಾಗ ಗೂಡ್ಸ್ ರೈಲು ಹತ್ತಿದ್ದ ಬಾಲಕ ದಿಕ್ಕು ತೋಚದೇ ಊರೂರು ಅಲೆದು ಕೊನೆಗೆ ನಗರಕ್ಕೆ ಬಂದು ಸೇರಿದ್ದ. ವರ್ಷದ ಬಳಿಕ ಯುವಕರ ಸಹಾಯದಿಂದ ತಾಯಿಯ ಮಡಿಲು ಸೇರಿದ್ದಾನೆ.

ಇದನ್ನೂ ಓದಿ: ದಾವಣಗೆರೆ: ಮನೆಯಲ್ಲಿ ಒಬ್ಬರೇ ಕಾಲ ಕಳೆಯುತ್ತಿದ್ದ ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕೊಲೆ!

Last Updated : Jun 25, 2022, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.