ETV Bharat / city

ಎಂಟು ವರ್ಷದಲ್ಲಿ ವೇಗದ ಅರ್ಥ ವ್ಯವಸ್ಥೆ ನಿರ್ಮಿಸಿದ್ದೇವೆ: ಕೇಂದ್ರ ಗೃಹ ಸಚಿವ ಅಮಿತ್ ಶಾ..! - ಭಾರತ್​ ಆಜಾದಿ ಕಾ ಅಮೃತ ಮಹೋತ್ಸವ

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆ ನಿರ್ಮಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ಹೇಳಿದರು.

fast growing economy in eight years  Union home minister Amit shah  Bengaluru news  Union home minister Amit shah news  ವೇಗವಾಗಿ ಬೆಳೆಯುವ ಅರ್ಥ ವ್ಯವಸ್ಥೆ ನಿರ್ಮಿಸಿದ್ದೇವೆ  ಕೇಂದ್ರ ಗೃಹ ಸಚಿವ ಅಮಿತ್ ಶಾ  ಬೆಂಗಳೂರು ಸುದ್ದಿ  ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿ  ಮೋದಿ ನೇತೃತ್ವದ ಸರ್ಕಾರದ ಯೋಜನೆ  ಭಾರತ್​ ಆಜಾದಿ ಕಾ ಅಮೃತ ಮಹೋತ್ಸವ  ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮ
ಕೇಂದ್ರ ಗೃಹ ಸಚಿವ ಅಮಿತ್ ಶಾ
author img

By

Published : Aug 4, 2022, 2:08 PM IST

Updated : Aug 4, 2022, 2:44 PM IST

ಬೆಂಗಳೂರು: ನಮ್ಮ ಎಂಟು ವರ್ಷಗಳ ಆಡಳಿತವನ್ನು ಒಮ್ಮೆ ತಿರುಗಿ ನೋಡಿದಾಗ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯನ್ನು ದೇಶದಲ್ಲಿ ನಾವು ನಿರ್ಮಾಣ ಮಾಡಿದ್ದೇವೆ ಎನ್ನುವುದು ಸ್ಪಷ್ಟವಾಗಿ ಕಾಣಿಸಲಿದೆ ಅಂತಾ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡರು.

ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ್​ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದೆ.

ಇದರ ಹಿಂದೆ ಮೂರು ಉದ್ದೇಶವಿದೆ, ಯುವ ಪೀಳಿಗೆಗೆ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಿ ಮನವರಿಕೆ ಮಾಡುವುದು. ದೇಶದ ವಿಕಾಸದಲ್ಲಿ ಯುವ ಪೀಳಿಗೆ ಪಾತ್ರ ಅನಿವಾರ್ಯವಾಗಿದ್ದು, 75ನೇ ವರ್ಷದ ದೇಶದ‌ ಸಾಧನೆಗಳನ್ನು ಜನತೆಗೆ ತಲುಪಿಸುವುದು ಎರಡನೇ ಉದ್ದೇಶವಾಗಿದೆ‌. ಈಗ ಸ್ವಾತಂತ್ರ್ಯದ ಅಮೃತಮಹೋತ್ಸವ ಮಾಡುತ್ತಿದ್ದೇವೆ. ಮುಂದೆ ಶತಮಾನೋತ್ಸವವನ್ನು ಕೂಡ ಆಚರಿಸುತ್ತೇವೆ.

ಈ ಮುಂದಿನ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿರಬೇಕು. ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿರಬೇಕು. ಇದನ್ನು ಸಾಕಾರಗೊಳಿಸಲು ಎಲ್ಲರೂ ಉಳಿದ 25 ವರ್ಷದಲ್ಲಿ ಶ್ರಮಿಸಬೇಕು. ವಿಕಾಸದಲ್ಲಿ ಭಾರತ ಎಲ್ಲ ದೇಶಗಳಿಗೆ ಮಾದರಿಯಾಗಿದೆ. ಎಲ್ಲ ರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ಭಾರತ ಈಗಾಗಲೇ ತನ್ನ ಚಾಪು ಮೂಡಿಸಿದೆ. ಈ ವಿಕಾಸದ ಹಾದಿಯಲ್ಲಿ ಜನವರ್ಗವನ್ನೂ ಒಳಗೊಳ್ಳುವಂತೆ ಮಾಡಿಕೊಳ್ಳಬೇಕು ಎನ್ನುವುದು ಮೂರನೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ

ಹಿಂದಿನ ಸರ್ಕಾರದ ಭ್ರಷ್ಟಾಚಾರದ ಹೆಡ್ ಲೈನ್​ಗಳು ಈಗಿಲ್ಲ: ಹಿಂದಿನ ಸರ್ಕಾರಗಳು ಇದ್ದಾಗ ಹಲವು ಅಕ್ರಮಗಳು ಬಯಲಿಗೆ ಬಂದಿದ್ದವು. ನಿತ್ಯ ಪತ್ರಿಕೆಯ ಮುಖಪುಟದಲ್ಲಿ ಭ್ರಷ್ಟಾಚಾರದ ಹೆಡ್‌ಲೈನ್‌ಗಳೇ ರಾರಾಜಿಸುತ್ತಿತ್ತು. ಎಲ್ಲ ದೇಶಗಳು ಭಾರತವನ್ನು ಬೇರೆ ದೃಷ್ಟಿಯಲ್ಲಿ ನೋಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿದೆ. ಬಹಳ ಕಾಲದ ನಂತರ ಕೇಂದ್ರದಲ್ಲಿ ಪೂರ್ಣ ಬಹುಮತದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಜನರೇ ಆಯ್ಕೆ ಮಾಡಿರುವ ಪೂರ್ಣಬಹುಮತದ ಸರ್ಕಾರಕ್ಕೆ ಈಗ ಎಂಟು ವರ್ಷ ತುಂಬಿದೆ ಎಂದರು.

ಜಿಎಸ್‌ಟಿಯ ಜಾರಿ ಸಫಲತೆ ಕಂಡಿದೆ. ದುರ್ಬಲಗೊಂಡಿದ್ದ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸುವ ಕಾರ್ಯದಲ್ಲಿ ಪ್ರಧಾನಿ‌ ಮೋದಿಯವರ ಕಾರ್ಯ ಹೆಚ್ಚಾಗಿದೆ. ಆತ್ಮ ನಿರ್ಭರತೆ ಮತ್ತು ಮೇಕ್ ಇನ್ ಇಂಡಿಯಾ ಜೊತೆಗೆ ಭಾರತದ ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದೇವೆ. ಭಾರತದ ಅರ್ಥವ್ಯವಸ್ಥೆಯನ್ನು ಲಘುವಾಗಿ ನೋಡುತ್ತಿದ್ದವರು ಈಗ ಆ ಧೈರ್ಯ ಮಾಡಲಾರರು ಎಂದರು.

ಕೋವಿಡ್ ಮೆಟ್ಟಿನಿಂತ ಭಾರತ: ಪ್ರಧಾನಿ ಮೋದಿ ಕಾಲದ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದ್ದು ಜಗತ್ತಿಗೆ ಮಾದರಿಯಾಗಿದೆ. ಕೋವಿಡ್, ಲಾಕ್‌ಡೌನ್‌ನಿಂದ ಬೇರೆ ದೇಶಗಳು ಆರ್ಥಿಕವಾಗಿ ಕಂಗೆಟ್ಟಿದ್ದವು. ಆದರೆ, ಭಾರತ ಹೊಸ ಮಾದರಿಯಲ್ಲಿ ಪರಿಹಾರ ಕಂಡಕೊಂಡು ಕೋವಿಡ್ ಮೆಟ್ಟಿನಿಂತು ಆರ್ಥಿಕತೆ ಸುಧಾರಣೆಯನ್ನು ಕೂಡ ಮಾಡಿತು ಎನ್ನುವುದನ್ನು ಉಲ್ಲೇಖಿಸಿ ಕೇಂದ್ರದ ಯೋಜನೆಗಳ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದರು.

ಓದಿ: ರಾಜ್ಯ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಶಮನಗೊಳಿಸಿ ಚುನಾವಣೆಗೆ ಪಕ್ಷ ಸಜ್ಜುಗೊಳಿಸಿ: ಅಮಿತ್ ಶಾ ಸೂಚನೆ

Last Updated : Aug 4, 2022, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.