ETV Bharat / city

ಏಷ್ಯನ್ ಎಂಎಎ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಗರಿ.. ಕಿಶೋರ್​​ಗೆ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದ ಕಿಶೋರ್​ ಕಿರ್ಗಿಸ್ಥಾನದಲ್ಲಿ ನಡೆದ ಏಷ್ಯನ್ ಎಂಎಎ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ

Asian Mixed Martial Arts winner Kishor
ಚಿನ್ನ ಗೆದ್ದ ಕಿಶೋರ್
author img

By

Published : Sep 6, 2021, 6:24 AM IST

Updated : Sep 6, 2021, 6:51 AM IST

ಹೊಸಕೋಟೆ: ಸಣ್ಣ ವಯಸ್ಸಿನಲ್ಲಿಯೇ ಮಿಕ್ಸ​ಡ್ ಮಾರ್ಷಲ್ ಆರ್ಟ್ಸ್​ನಲ್ಲಿ ಆಸಕ್ತಿ ಹೊಂದಿದ್ದ ಯುವಕ ದೇಶ ವಿದೇಶಗಳಲ್ಲಿ ಸಾಕಷ್ಟು ಪದಕಗಳನ್ನ ಮುಡಿಗೇರಿಸಿಕೊಂಡಿದ್ದರು. ಇದೀಗ ಏಷ್ಯನ್ ಮಿಕ್ಸ್​ಡ್ ಮಾರ್ಷಲ್ ಆರ್ಟ್ಸ್ ಫೈಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದ ಕಿಶೋರ್​ಗೆ ಗ್ರಾಮಸ್ಥರು ಅದ್ಧೂರಿಯಾಗಿ ಸನ್ಮಾನ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದ ಕಿಶೋರ್​ ಕಿರ್ಗಿಸ್ಥಾನದಲ್ಲಿ ನಡೆದ ಏಷ್ಯನ್ ಎಂಎಎ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಫೈನಲ್​ನಲ್ಲಿ ಕಜಕಿಸ್ಥಾನ್​ನ ಸ್ಪರ್ಧಿ ವಿರುದ್ದ ಗೆಲ್ಲುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಈ ಸಾಧನೆ ಬಳಿಕ ಗ್ರಾಮಕ್ಕೆ ಆಗಮಿಸಿದ ಕಿಶೋರ್​ಗೆ ಗ್ರಾಮಸ್ಥರು ಅದ್ಧೂರಿ ಮೆರವಣಿಗೆ ಮೂಲಕ ಸನ್ಮಾನ ಮಾಡಿದ್ದಾರೆ.

ಚಿನ್ನ ಗೆದ್ದ ಕಿಶೋರ್​​ಗೆ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ

ಮಿಕ್ಸ​ಡ್ ಮಾರ್ಷಲ್ ಆರ್ಟ್ಸ್, ಬಾಕ್ಸಿಂಗ್, ಟೆಕ್ವೊಂಡೋದಲ್ಲಿ ಪರಿಣಿತಿ ಹೊಂದಿರುವ ಕಿಶೋರ್ ಈ ಸಾಧನೆ ಮಾಡಿರುವುದು ಸಂತಸದ ಸಂಗತಿ. ಅಷ್ಟೇ ಅಲ್ಲದೆ ತನ್ನ ಸಾಧನೆ ಮೂಲಕ ರಾಜ್ಯ, ದೇಶಕ್ಕೆ ಕೀರ್ತಿ ತಂದಿದ್ದಾರೆ.

Last Updated : Sep 6, 2021, 6:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.