ETV Bharat / city

ವಿಜಯಭಾಸ್ಕರ್​​ಗೆ ಬೀಳ್ಕೊಡುಗೆ; ನೂತನ ಸಿಎಸ್​ಗೆ ಅಭಿನಂದನೆ - ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಟಿ.ಎಂ.ವಿಜಯ ಭಾಸ್ಕರ್

ಸಚಿವಾಲಯದ ನೌಕರರಿಗೂ ಅನೇಕ ಸಣ್ಣ ಪುಟ್ಟ ತೊಂದರೆಗಳಿವೆ. ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಜೊತೆ ಹೇಳಿಕೊಳ್ಳಿ. ಮುಂದೆ ನಿಮ್ಮನ್ನೆಲ್ಲಾ ಆಗಾಗ್ಗೆ ಭೇಟಿ ಮಾಡುತ್ತೇನೆ ಎಂದು ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದರು.

vijayabhaskars-farewell-ceremony
ವಿಜಯಭಾಸ್ಕರ್​​ಗೆ ಬೀಳ್ಕೊಡುಗೆ; ನೂತನ ಸಿಎಸ್​ಗೆ ಅಭಿನಂದನೆ
author img

By

Published : Jan 2, 2021, 9:49 PM IST

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಸಚಿವಾಲಯ ನೌಕರರ ಸಂಘದಿಂದ ಬೀಳ್ಕೊಡುಗೆ ನೀಡಲಾಯಿತು. ನೂತನ ಮುಖ್ಯ ಕಾರ್ಯದರ್ಶಿ ಪಿ‌.ರವಿಕುಮಾರ್ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಇದೇ ವೇಳೆ ವಿಜಯ ಭಾಸ್ಕರ್ ಮಾತನಾಡಿ, ಸಚಿವಾಲಯದ ನೌಕರರು ಆಡಳಿತದ ಶಿಖರ ಭಾಗದಲ್ಲಿ ಕೆಲಸ ಮಾಡುತ್ತಿರುವವರು. ಹಾಗಾಗಿ, ಅವರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ. ನಾವು ಕೆಲಸದಲ್ಲಿ ವಿಳಂಬ ಮಾಡಿದರೆ ಅದು ಜನಸಾಮಾನ್ಯರಿಗೆ ತೊಂದರೆ ಆದಂತೆ ಎಂದರು.

ಓದಿ: ಆದಾಯ ಖೋತಾ: WFH ನಿಲ್ಲಿಸಲು ಪ್ರಧಾನಿಗೆ ಪತ್ರ ಬರೆಯಲು ನಿರ್ಧರಿಸಿದ ಅಬಕಾರಿ ಇಲಾಖೆ

ಸಚಿವಾಲಯದಲ್ಲಿ ಸೀಮಿತ ಪರಿಮಿತಿಯಲ್ಲಿ ಕೆಲಸ ಮಾಡುವುದರಿಂದ ಅನುಕೂಲಗಳು ಹೆಚ್ಚಿರುತ್ತದೆ. ಬೇರೆ ಭಾಗಗಳಲ್ಲಿ ಕಾರ್ಯ ನಿರ್ವಹಿಸುವವವರಿಗೆ ಈ ಉಪಯೋಗಗಳು ಕಡಿಮೆ. ಹಾಗಾಗಿ, ಸಚಿವಾಲಯದ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬಳಿಕ‌ ಮಾತನಾಡಿದ ನೂತನ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ವಿಜಯಭಾಸ್ಕರ್ ಅವರ ಬೀಳ್ಕೊಡುಗೆ ಸಮಾರಂಭಕ್ಕೆ ರಾಜ್ಯದ ಬೇರೆ ಭಾಗಗಳಿಂದಲೂ ಜನ ಬರಬೇಕಿತ್ತು ಎಂದು ಕೇಳಿದ್ದೆ. ಆದರೆ, ಕೋವಿಡ್ ಕಾರಣದಿಂದ ನಿರ್ಬಂಧ ಹಾಕಿದ್ದೇವೆ ಎಂದು ಸಂಘದ ಅಧ್ಯಕ್ಷರು ಹೇಳಿದರು. ನಾನು ನಿವೃತ್ತಿಯಾದಾಗ ಇಷ್ಟು ಜನ ಸೇರುತ್ತಿರೋ ಇಲ್ಲವೋ ನೋಡೋಣ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇದೇ ವೇಳೆ ಮಾತನಾಡಿದ ಸಚಿವಾಲಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ, ಸಚಿವಾಲಯದಲ್ಲಿ ಹೊರ ಗುತ್ತಿಗೆ ನೌಕರರ ನೇಮಕಾತಿ ಹೆಚ್ಚಾಗಿದ್ದು, ಇದನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿದರು. ಸಚಿವಾಲಯದಲ್ಲಿ ಅನೇಕರನ್ನು ನಿವೃತ್ತಿಯಾದರೂ ಸೇವೆಯಲ್ಲಿ ಮುಂದುವರಿಸಲಾಗುತ್ತಿದೆ. ಇದರಿಂದ ಹೊಸಬರು ಅವಕಾಶ ವಂಚಿತರಾಗುತ್ತಿದ್ದಾರೆ. ಈ ಪದ್ಧತಿಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.