ಬೆಂಗಳೂರು: ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯೇ ದರ ಹೆಚ್ಚಳಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಬಂಗಾನಪಲ್ಲಿ ಮಾವಿನಹಣ್ಣು 69 ರೂ., ಸಿಂಧೂರ 66 ರೂ., ರಸಪುರಿ 85 ರೂ., ಮಲ್ಲಿಕಾ 95 ರೂ., ತೋತಾಪುರಿ ಮಾವಿನಹಣ್ಣಿಗೆ 25 ರೂ ಇದೆ. ಸೇಬು 229 ರೂ. ಗೆ ದೊರೆಯುತ್ತಿದ್ದು, ಕೆಂಪು ಸೇಬು 199 ರೂ., ಶಿಮ್ಲಾ ಸೇಬು 159 ರೂ., ಮೂಸಂಬಿ 75 ರೂ., ಸಪೋಟ 72 ರೂ., ದಾಳಿಂಬೆ 230 ರೂ., ಸೀಬೆ ಹಣ್ಣು 72 ರೂ., ಅನಾನಸ್ 67 ರೂ., ಪಪ್ಪಾಯಿ 37 ರೂ., ಪಚ್ಚೆ ಬಾಳೆಹಣ್ಣು 31 ರೂ., ಏಲಕ್ಕಿ ಬಾಳೆಹಣ್ಣು 78 ರೂ., ಕಲ್ಲಂಗಡಿ 17 ರೂ., ಕಲ್ಲಂಗಡಿ (ಕಿರಣ್) 10 ರೂ., ಕರ್ಬೂಜ 25 ರೂ. ಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿಗೆ): ಬೆಟ್ಟದ ನೆಲ್ಲಿಕಾಯಿ 80 ರೂ, ಮಾವಿನಕಾಯಿ 30 ರೂ, ತೊಂಡೆಕಾಯಿ 46 ರೂ, ಮೂಲಂಗಿ 30 ರೂ, ಬೀಟ್ ರೂಟ್ 37 ರೂ, ಹಾಗಲಕಾಯಿ 40 ರೂ, ಸೌತೆಕಾಯಿ 44 ರೂ, ಬದನೆಕಾಯಿ 40 ರೂ, ಚಪ್ಪರದ ಅವರೆಕಾಯಿ 73 ರೂ, ನಾಗಪುರ ಬದನೆ 36 ರೂ, ದೊಡ್ಡ ಬದನೆ 29 ರೂ, ಬಜ್ಜಿ ಮೆಣಸಿನಕಾಯಿ 45 ರೂ, ಮೆಣಸಿನಕಾಯಿ 39 ರೂ, ಹುರುಳಿಕಾಯಿ 118 ರೂ, ದೊಡ್ಡ ಮೆಣಸಿನಕಾಯಿ 59 ರೂ, ಹೀರೇಕಾಯಿ 58 ರೂ, ಬೆಂಡೆಕಾಯಿ 36 ರೂ, ಕ್ಯಾರೆಟ್ 43 ರೂ, ಬೆಳ್ಳುಳ್ಳಿ 78 ರೂ, ಶುಂಠಿ 35 ರೂ, ನಿಂಬೆಹಣ್ಣು 130 ರೂ, ಕುಂಬಳಕಾಯಿ 28 ರೂ, ಬೆಂಗಳೂರು ಸೌತೆ 32 ರೂ, ಸ್ವೀಟ್ ಪೊಟ್ಯಾಟೋ 40 ರೂ, ಟೊಮೆಟೋ 95 ರೂ, ಈರುಳ್ಳಿ 20 ರೂ, ಆಲೂಗಡ್ಡೆ 30 ರೂ, ನಾಟಿ ಟೊಮೆಟೋ 90 ರೂ. ಗೆ ಸಿಗುತ್ತಿದೆ. ನುಗ್ಗೆಕಾಯಿ (ಒಂದಕ್ಕೆ) 09 ರೂ ಇದ್ದು , 1 ಬಾಳೆಕಾಯಿಗೆ 14 ರೂ, ಹೂ ಕೋಸು 22 ರೂ, ಎಲೆ ಕೋಸು 26 ರೂ, ತೆಂಗಿನಕಾಯಿ 22 ರೂ, ಎಳೆ ನೀರು 38 ರೂ, ಮುಸುಕಿನ ಜೋಳ ಒಂದಕ್ಕೆ 12 ರೂ ಇದೆ.
ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 10 ರೂ, ದಂಟಿನ ಸೊಪ್ಪು ಕೆಂಪು 10 ರೂ, ಕರಿಬೇವು ಸೋಪ್ಪು 03 ರೂ, ಕೊತ್ತಂಬರಿ ಸೊಪ್ಪು 11 ರೂ, ಸಬ್ಬಸಿಗೆ ಸೊಪ್ಪು 11 ರೂ, ಮೆಂತೆ ಸೊಪ್ಪು 13 ರೂ, ಪುದೀನ ಸೊಪ್ಪು 05 ರೂ, ಪಾಲಕ್ ಸೊಪ್ಪು 06 ರೂ, ಈರುಳ್ಳಿ ಸೊಪ್ಪು 14 ರೂ, ಗೋಂಗುರ ಸೊಪ್ಪು 14 ರೂ, ಬಸಲೆ ಸೊಪ್ಪು 09 ರೂ.ಗೆ ಲಭ್ಯವಾಗುತ್ತಿದೆ.
ಶಿವಮೊಗ್ಗದ ತರಕಾರಿ ದರ: ಮೆಣಸಿನ ಕಾಯಿ-30, M.Z ಬಿನ್ಸ್- 80 ರೂ, ರಿಂಗ್ ಬಿನ್ಸ್-120 ರೂ., ಎಲೆಕೋಸು ಚೀಲಕ್ಕೆ-20 ರೂ., ಬಿಟ್ ರೂಟ್-20 ರೂ., ಹೀರೆಕಾಯಿ-30 ರೂ, ಬೆಂಡೆಕಾಯಿ-30 ರೂ., ಹಾಗಲಕಾಯಿ-40 ರೂ., ಎಳೆ ಸೌತೆ-30 ರೂ., ಬಣ್ಣದ ಸೌತೆ-26 ರೂ., ಜವಳಿಕಾಯಿ-35 ರೂ., ತೊಂಡೆಕಾಯಿ-60 ರೂ., ನವಿಲುಕೋಸು-40 ರೂ., ಮೂಲಂಗಿ-30 ರೂ., ದಪ್ಪಮೆಣಸು-50 ರೂ., ಕ್ಯಾರೇಟ್-40 ರೂ., ನುಗ್ಗೆಕಾಯಿ--80 ರೂ., ಹೂ ಕೋಸು-500 ರೂ (ಚೀಲಕ್ಕೆ). ಟೊಮೊಟೋ-60 ರೂ. ನಿಂಬೆಹಣ್ಣು 100 ಕ್ಕೆ 500 ರೂ. ಈರುಳ್ಳಿ12 ರಿಂದ16 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-30 ರೂ., ಬದನೆಕಾಯಿ-16 ರೂ., ಪಡುವಲಕಾಯಿ-24 ರೂ., ಕುಂಬಳಕಾಯಿ-14 ರೂ., ಹಸಿ ಶುಂಠಿ-24 ರೂ. ಕೊತ್ತಂಬರಿಸೊಪ್ಪು 100 ಕಟ್ಟಿಗೆ- 280 ರೂ. ಸಬ್ಬಸಿಗೆ ಸೊಪ್ಪು 100 ಕಟ್ಟಿಗೆ -260 ರೂ., ಮೆಂತೆಸೊಪ್ಪು100 ಕ್ಕೆ -300 ರೂ., ಪಾಲಕ್ ಸೂಪ್ಪು-100 ಕ್ಕೆ 240 ರೂ, ಪುದಿನಸೊಪ್ಪು100 ಕ್ಕೆ - 300 ರೂ.ಗೆ ಸಿಗುತ್ತಿದೆ.
ಮೈಸೂರಲ್ಲಿ ತರಕಾರಿ ದರ: ಬೀನ್ಸ್ - 70 ರೂ., ಪೆನ್ಸಿಲ್ ಬೀನ್ಸ್ - 80 ರೂ., ಟೊಮೆಟೋ - 52ರೂ., ಸೌತೆಕಾಯಿ - 27 ರೂ., ಗುಂಡು ಬದನೆ- 24 ರೂ., ಕುಂಬಳಕಾಯಿ - 8 ರೂ., ಹೀರೆಕಾಯಿ - 28 ರೂ., ಪಡವಲಕಾಯಿ - 25 ರೂ., ತೊಂಡೆಕಾಯಿ 45 ರೂ., ಕಾಲಿಫ್ಲವರ್ 30 ರೂ., ದಪ್ಪ ಮೆಣಸು - 56 ರೂ., ಸೋರೆಕಾಯಿ- 15 ರೂ., ಬದನೆಕಾಯಿ ವೈಟ್ - 18 ರೂ., ಕೋಸು- 15 ರೂ., ಸೀಮೆ ಬದನೆ ಬೆಂಡೆಕಾಯಿ - 23 ರೂ., ಮೆಣಸಿನಕಾಯಿ - 15 ರೂ. ಇದೆ.
ದಾವಣಗೆರೆ ತರಕಾರಿ ದರ (ಕೆ.ಜಿ) : ಟೊಮೊಟೋ- 55-60 ರೂ., ಬಿನ್ಸ್- 100 ರಿಂದ120 ರೂ., ದಪ್ಪ ಮೆಣಸಿನ ಕಾಯಿ-30., ಎಲೆಕೋಸು- 8 ರಿಂದ10 ರೂ., ಕಡ್ಡಿ ಮೆಣಸಿನಕಾಯಿ -40 ರೂ., ಬಿಟ್ ರೂಟ್-15 ರೂ., ಬೆಂಡೆಕಾಯಿ-30 ರೂ., ಹೀರೆಕಾಯಿ-35 ರೂ., ಹಾಗಲಕಾಯಿ- 30 ರಿಂದ 35 ರೂ., ಜವಳಿಕಾಯಿ-30 ರೂ., ಸೌತೆಕಾಯಿ- 25 ರಿಂದ 30 ರೂ. ಕ್ಯಾರೆಟ್-40 ರೂ., ಬಣ್ಣದ ಸೌತೆ-06 ರೂ., ನವಿಲುಕೋಸು-30 ರೂ., ಮೂಲಂಗಿ - 20 ರಿಂದ 25 ರೂ., ಈರುಳ್ಳಿ-17 ರೂ., ನುಗ್ಗೆಕಾಯಿ- 80 ರೂ., ನಿಂಬೆಹಣ್ಣು 100 ಕ್ಕೆ 500 ರೂ. ಬದನೆಕಾಯಿ-15 ರೂ., ಕುಂಬಳಕಾಯಿ-25 ರೂ., ಬೆಳ್ಳುಳ್ಳಿ-30 ರಿಂದ 40 ರೂ. ಸೀಮೆ ಬದನೆಕಾಯಿ-30 ರೂ., ಆಲೂಗೆಡ್ಡೆ-18ರಿಂದ 20 ರೂ., ಹೂ ಕೋಸು- 30 ರೂ. ಸೋರೆಕಾಯಿ-22 ರೂ., ಹಸಿ ಶುಂಠಿ-60 ರೂ. ಪಡುವಲಕಾಯಿ-24 ರೂ. ಇದೆ.
ಸೊಪ್ಪು ದರದಲ್ಲಿ ಏರಿಕೆ: ಮೆಂತೆಸೊಪ್ಪು100 ಕಟ್ಟಿಗೆ -320 ರೂ. ಕೊತ್ತಂಬರಿಸೊಪ್ಪು 100 ಕ್ಕೆ- 300 ರೂ. ಸಬ್ಬಸಿಗೆ ಸೊಪ್ಪು100 ಕ್ಕೆ -280 ರೂ., ಪುದಿನಸೊಪ್ಪು100 ಕ್ಕೆ - 280 ರೂ., ಪಾಲಕ್ ಸೊಪ್ಪು-100 ಕ್ಕೆ 260 ರೂ.ಗೆ ಸಿಗುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚಳ: 2,628 ಹೊಸ ಕೋವಿಡ್ ಕೇಸ್ ಪತ್ತೆ, 18 ಮಂದಿ ಸಾವು