ETV Bharat / city

ರಾಜಕೀಯ ದುರುದ್ದೇಶದಿಂದ ಕಿಡಿಗೇಡಿಗಳು ಗಲಭೆ ನಡೆಸಿದ್ದಾರೆ: ಸದಾನಂದ ಗೌಡ - Bangalore News

ಗಲಭೆಯು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎಂಬುದು ಗೊತ್ತಾಗಿದೆ‌‌. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ನಾವು ಶತಸಿದ್ಧ. ಗೂಂಡಾವರ್ತನೆ ತೋರಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಎಚ್ಚರಿಸಿದರು.

Union Minister Sadananda Gowda Statement
ರಾಜಕೀಯ ದುರುದ್ದೇಶದಿಂದ ಕಿಡಿಗೇಡಿಗಳು ಗಲಭೆ ನಡೆಸಿದ್ದಾರೆ: ಕೇಂದ್ರ ಸಚಿವ ಸದಾನಂದಗೌಡ
author img

By

Published : Aug 12, 2020, 9:36 PM IST

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ಕಿಡಿಗೇಡಿಗಳು ಗಲಭೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ರಾಜಕೀಯ ದುರುದ್ದೇಶದಿಂದ ಕಿಡಿಗೇಡಿಗಳು ಗಲಭೆ ನಡೆಸಿದ್ದಾರೆ: ಕೇಂದ್ರ ಸಚಿವ ಸದಾನಂದ ಗೌಡ

ಗಲಭೆ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ‌ ನಡೆದ ಗಲಭೆಯು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎಂಬುದು ಗೊತ್ತಾಗಿದೆ‌‌. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ನಾವು ಶತಸಿದ್ಧ. ಗೂಂಡಾವರ್ತನೆ ತೋರಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಒಂದು ವಾರ ಆಗಲಿ, ತಿಂಗಳಾಗಲಿ, ವರ್ಷವೇ ಆಗಲಿ ಯಾರನ್ನೂ ಬಿಡುವ ಮಾತಿಲ್ಲ. ತಾಳ್ಮೆ ಪ್ರದರ್ಶನ ತೋರಿ ಪರಿಸ್ಥಿತಿ ಹತೋಟಿಗೆ ತಂದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ವಾಹನಗಳನ್ನು ಹೊಡೆದಿರುವುದು ನಿಜಕ್ಕೂ ಆತಂಕಕಾರಿ. ರಾಜ್ಯದ ಯಾವುದೇ ಮೂಲೆಯಲ್ಲಿಯೂ ಇಂತಹ ಘಟನೆ ಮರುಕಳಿಸೋದಕ್ಕೆ ಬಿಡುವುದಿಲ್ಲ. ಯಾವುದೇ ಪಕ್ಷ ಅಥವಾ ಸಂಘಟನೆಯನ್ನು ಬ್ಯಾನ್ ಮಾಡಬೇಕಾದರೆ ಸಾಕಷ್ಟು ಪುರಾವೆಗಳು ಇರಬೇಕಾಗುತ್ತದೆ. ಅಂತಹ ಪುರಾವೆಗಳು ಸರ್ಕಾರದ ಬಳಿ ಇವೆ. ತನಿಖೆ ಪೂರ್ಣಗೊಂಡ ಬಳಿಕ ಎಸ್​ಡಿಪಿಐ ಬ್ಯಾನ್ ಮಾಡುವ ಕುರಿತು ಮುನ್ನೆಲೆಗೆ ಬರಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.