ETV Bharat / city

ಬೆಂಗಳೂರು ಗಲಭೆ ಪ್ರಕರಣ: ಅಮಾಯಕರ ಬಿಡುಗಡೆಗೆ ಸದಾನಂದ ಗೌಡರ ನೆರವು ಕೋರಿದ ಉಲೇಮಾ ನಿಯೋಗ - ಉಲೇಮಾ ಸಂಘಟನೆ ನಿಯೋಗ

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಗೃಹ ಕಚೇರಿಗೆ ಇಂದು ಉಲೇಮಾ ನಿಯೋಗ ಭೇಟಿ ನೀಡಿ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತು ಮಾತುಕತೆ ನಡೆಸಿತು. ಈ ವೇಳೆ ಅಮಾಯಕರ ಬಿಡುಗಡೆಗೆ ನಿಯೋಗವು ಸದಾನಂದ ಗೌಡರ ನೆರವು ಕೋರಿತು.

ಉಲೇಮಾ ನಿಯೋಗ
ಉಲೇಮಾ ನಿಯೋಗ
author img

By

Published : Jan 20, 2021, 3:00 PM IST

Updated : Jan 20, 2021, 3:13 PM IST

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಅಮಾಯಕರ‌ ಬಿಡುಗಡೆಗೆ ಸಹಕಾರ ನೀಡುವಂತೆ ಉಲೇಮಾ ಸಂಘಟನೆ ನಿಯೋಗ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮನವಿ ಮಾಡಿದೆ.

ಸದಾನಂದ ಗೌಡರನ್ನು ಭೇಟಿ ಮಾಡಿದ ಉಲೇಮಾ ನಿಯೋಗ

ಸದಾನಂದ ಗೌಡರ ಗೃಹ ಕಚೇರಿಗೆ ಇಂದು ಉಲೇಮಾ ನಿಯೋಗ ಭೇಟಿ ನೀಡಿ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತು ಮಾತುಕತೆ ನಡೆಸಿತು. ಗಲಭೆ ಖಂಡನೀಯ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಆದರೆ ಕೆಲ ಅಮಾಯಕರನ್ನು ಬಂಧಿಸಲಾಗಿದ್ದು, ಅವರಿಗೂ ಗಲಭೆಗೂ ಸಂಬಂಧವೇ ಇಲ್ಲ. ಅಂತವರ ಬಿಡುಗಡೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸಾದಿಕ್ ಪಾಷಾ, ಅಮಾಯಕರು ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಪಟ್ಟಿ ಮಾಡಿ, ಅಗತ್ಯ ವಿವರಗಳೊಂದಿಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ನಂತರ ಅವರು ಮುಖ್ಯಮಂತ್ರಿಗಳ ಜೊತೆ ಮತ್ತು ನಗರ ಪೊಲೀಸ್ ಆಯುಕ್ತರ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ, ಸದಾನಂದ ಗೌಡರು ಅಮಾಯಕರನ್ನು ಬಿಡುಗಡೆ ಮಾಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೌಲಾನಾ ಅಬ್ದುಲ್ ಲತೀಫ್ ಮಾತನಾಡಿ, ಬಂಧಿಸಲ್ಪಟ್ಟ ಅಮಾಯಕರು ಗಲಭೆ ನಡೆದ ವೇಳೆ ಸ್ಥಳದಲ್ಲಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷ್ಯ ಒದಗಿಸುವಂತೆ ಸೂಚಿಸಿದ್ದಾರೆ. ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಅವರು ಇದ್ದ ದಾಖಲೆ ಒದಗಿಸಲು ಸೂಚಿಸಿದ್ದಾರೆ. ನಾವು ಆ ದಾಖಲೆ ಕೊಡಲಿದ್ದೇವೆ, ಆದಷ್ಟು ಬೇಗ ಅಮಾಯಕರು ಜೈಲಿನಿಂದ ಹೊರಗೆ ಬರಬೇಕು. ಅದಕ್ಕಾಗಿ ನಾವು ಸರ್ಕಾರದ ಮೊರೆ ಹೋಗಿದ್ದೇವೆ. ನಮಗೆ ಸಹಕಾರ ನೀಡುವುದಾಗಿ ಸದಾನಂದ ಗೌಡರು ಭರವಸೆ ನೀಡಿದ್ದಾರೆ ಎಂದರು.

Last Updated : Jan 20, 2021, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.