ETV Bharat / city

ಮಕ್ಕಳೇ ಟಾರ್ಗೆಟ್: ಚಾಕೊಲೇಟ್ ಮಾದರಿ ಡ್ರಗ್ಸ್​ ಮಾರುತ್ತಿದ್ದ ಇಬ್ಬರು ಪೆಡ್ಲರ್ಸ್​ ಅರೆಸ್ಟ್​

author img

By

Published : Sep 18, 2020, 9:51 AM IST

Updated : Sep 18, 2020, 10:04 AM IST

ಎಂಜಿ ರಸ್ತೆಯ ಆರ್.ಎಸ್.ನ ಕಾಂಪೌಂಡ್ ಬಳಿ ಇಬ್ಬರು ಆರೋಪಿಗಳು ಡಸ್ಟರ್ ಕಾರಿನಲ್ಲಿ ಮಾದಕ ವಸ್ತುಗಳನ್ನ ಮಾರಾಟ ಮಾಡ್ತಿರುವ ಮಾಹಿತಿ ಬಂದಿತ್ತು. ಈ ಮಾಹಿತಿ ತಿಳಿದು ದಾಳಿ ‌ಮಾಡಿದ ಪೊಲೀಸರು ಒಟ್ಟು 4 ಲಕ್ಷ‌ ಮೌಲ್ಯದ 50 ಜೆಲ್ಲಿಗಳು, 34 ಪಿಲ್ಸ್, 27 ಸ್ಟ್ರೀಪ್, 2 ಮೊಬೈಲ್ ಫೋನ್, ಕಾರನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

two-peddler-arrested-for-selling-jelly-chocolate-sample-drug
ಮಕ್ಕಳೇ ಟಾರ್ಗೇಟ್: ಜೆಲ್ಲಿ ಚಾಕಲೇಟ್ ಮಾದರಿ ಮಾದಕ ವಸ್ತು ಮಾರಾಟ ಇಬ್ಬರು ಪೆಡ್ಲರ್ ಬಂಧನ

ಬೆಂಗಳೂರು: ಡ್ರಗ್ಸ್ ಜಾಲದ ಬೆನ್ನತ್ತಿರುವ ಸಿಸಿಬಿ‌ ಪೊಲೀಸರು ವಿಭಿನ್ನವಾದ ಡ್ರಗ್ಸ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳನ್ನ ಸೆಳೆಯಲು ಜೆಲ್ಲಿ ಮಾದರಿಯಲ್ಲಿ ಪೇಪರ್, ಮಾತ್ರೆಗಳು, ಜೆಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಪೆಡ್ಲರ್​​ಗಳನ್ನ ಬಂಧಿಸಿದ್ದಾರೆ.

ಜಾನ್ ನಿಖೋಲಸ್ ಮತ್ತು ಇರ್ಫಾನ್ ಶೇಖ್ ಬಂಧಿತ ಆರೋಪಿಗಳು. ಸ್ಯಾಂಡಲ್ ವುಡ್ ಡ್ರಗ್ಸ್ ‌ಮಾಫಿಯಾ ಆರೋಪ ಪ್ರಕರಣ ಬೆಳಕಿಗೆ ಬರ್ತಿದ್ದ ಹಾಗೆ ‌ಮಾದಕ ದ್ರವ್ಯದ ಜಾಲ ಬೆನ್ನತ್ತಿರುವ ಸಿಸಿಬಿ ಪೊಲೀಸರಿಗೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ. ಎಂಜಿ ರಸ್ತೆಯ ಆರ್.ಎಸ್.ನ ಕಾಂಪೌಂಡ್ ಬಳಿ ಇಬ್ಬರು ಆರೋಪಿಗಳು ಕಾರಿನಲ್ಲಿ ಮಾದಕ ವಸ್ತುಗಳನ್ನ ಸಾರ್ವಜನಿಕರಿಗೆ ಮಾರಾಟ ಮಾಡ್ತಿರುವ ಮಾಹಿತಿ ತಿಳಿದಿತ್ತು. ಈ ಮಾಹಿತಿ ತಿಳಿದು ದಾಳಿ ‌ಮಾಡಿ ಒಟ್ಟು 4 ಲಕ್ಷ‌ ಮೌಲ್ಯದ 50 ಜೆಲ್ಲಿಗಳು, 34 ಪಿಲ್ಸ್, 27 ಸ್ಟ್ರೀಪ್, 2 ಮೊಬೈಲ್ ಫೋನ್, ಕಾರನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

two-peddler-arrested-for-selling-jelly-chocolate-sample-drug
ಡ್ರಗ್ಸ್​ ಮಾರುತ್ತಿದ್ದ ಪೆಡ್ಲರ್ಸ್

ಇನ್ನು ಆರೋಪಿಗಳನ್ಮ ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ವಿಚಾರ ಬಯಲಾಗಿದೆ. ಅದೇನೆಂದರೆ ಮಕ್ಕಳು, ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಬಣ್ಣ ಬಣ್ಣದ ಜೆಲ್ಲಿ ಚಾಕೊಲೇಟ್ ಮಾದರಿಯ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಹಾಗೆ ಆರೋಪಿಗಳು ಈ ಮಾದಕ ವಸ್ತುಗಳನ್ನ ತಮ್ಮ ಸಹಚರನಾದ ಅಶ್ವಿನ್ ಎಂಬುವನೊಂದಿಗೆ ಸಂಪರ್ಕ ಇಟ್ಟುಕೊಂಡು ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿ‌ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಸದ್ಯ ಅಶ್ವಿನ್ ಗಾಗಿ ಪೊಲೀಸರು ಬಲೆಬೀಸಿದ್ದು, ಆತ ಎಲ್ಲಿಂದ ಡ್ರಗ್ಸ್ ತರುತ್ತಿದ್ದ ಅನ್ನೋದರ ತನಿಖೆ ಮುಂದುವರೆಸಿದ್ದಾರೆ.

Last Updated : Sep 18, 2020, 10:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.