ETV Bharat / city

ಮೂರನೇ ಅಲೆ ಎದುರಿಸಲು ಪದ್ಮನಾಭನಗರ ಕ್ಷೇತ್ರದಲ್ಲಿ ಎರಡು ಮಕ್ಕಳ ಆಸ್ಪತ್ರೆ: ಸಚಿವ ಆರ್.ಅಶೋಕ್

ತಜ್ಞರು ಎಚ್ಚರಿಸಿದಂತೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಎರಡು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಿದ್ದೇವೆ. ಒಂದು ಪೆಟ್ರೋಲ್ ಪಂಪ್ ಬಳಿ ಮತ್ತು ಇನ್ನೊಂದು ಹೊಸಕೆರೆಹಳ್ಳಿ ಬಳಿ ಎಂದು ಸಚಿವ ಆರ್.ಅಶೋಕ್​ ತಿಳಿಸಿದರು.

Revenue Minister R. Ashok
ಸಚಿವ ಆರ್.ಅಶೋಕ್
author img

By

Published : Jul 13, 2021, 7:23 AM IST

ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಿಸಲು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಮಕ್ಕಳ ಆಸ್ಪತ್ರೆ ಸ್ಥಾಪಿಸಿದ್ದೇವೆ. ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಪ್ರಮುಖ ಪಾಠವೆಂದರೆ ನಾವೆಲ್ಲರೂ ಒಂದೇ ಕುಟುಂಬದ ಭಾಗವಾಗಿದ್ದೇವೆ ಮತ್ತು ಬಿಕ್ಕಟ್ಟಿನ ಈ ಸಮಯದಲ್ಲಿ ಪರಸ್ಪರ ಸಹಕಾರ ನೀಡುವ ಅವಶ್ಯಕತೆಯಿದೆ ಎಂದು ಕಂದಾಯ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಆರ್. ಅಶೋಕ್​ ಹೇಳಿದರು.

Revenue Minister R. Ashok
ಪದ್ಮನಾಭನಗರ ಕ್ಷೇತ್ರದಲ್ಲಿ ಆಹಾರ ಕಿಟ್‍ ವಿತರಣೆ ಮಾಡಿದ ಸಚಿವ ಆರ್.ಅಶೋಕ್

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳಿಗೆ ಆಹಾರ ಕಿಟ್‍ ವಿತರಿಸಿ ಮಾತನಾಡಿದ ಅವರು, ನಾವು ಕಳೆದ ಎರಡು ತಿಂಗಳಿಂದ ಆಹಾರ ಕಿಟ್‍ಗಳನ್ನು ಒದಗಿಸುತ್ತಿದ್ದೇವೆ ಮತ್ತು ಇನ್ನೂ 15 ದಿನಗಳವರೆಗೆ ಅದನ್ನು ಮುಂದುವರಿಸುತ್ತೇವೆ. ಎಲ್ಲಾ ಸಮುದಾಯಗಳು ಮತ್ತು ಕ್ಷೇತ್ರಗಳ ಜನರಿಗೆ ನಾವು ಕಿಟ್‍ಗಳನ್ನು ಒದಗಿಸಿದ್ದೇವೆ ಎಂದು ತಿಳಿಸಿದರು.

ಕೆಲವರು ಹೆತ್ತವರ ಶವಗಳನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ ಕ್ಷಣಗಳನ್ನು ನಾವು ನೋಡಿದ್ದೇವೆ. ಅನೇಕರು ಚಿತಾಭಸ್ಮವನ್ನು ಪಡೆಯಲು ನಿರಾಕರಿಸಿದರು. ನಾವು ಆ ಅಸ್ಥಿಗಳನ್ನು ಕಾವೇರಿ ಸಂಗಮದಲ್ಲಿ ಬಿಡುವ ಕಾರ್ಯವನ್ನು ಮಾಡಿದ್ದೇವೆ. ಈಗ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅದನ್ನು ನಿಭಾಯಿಸಲು ನಾವು ಈಗಲೇ ಸಜ್ಜಾಗುತ್ತಿದ್ದೇವೆ. ಮೊದಲನೇಯದಾಗಿ, ನಾವು ಡಿಸೆಂಬರ್ ವೇಳೆಗೆ ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ. ಎರಡನೇಯದಾಗಿ, ತಜ್ಞರು ಎಚ್ಚರಿಸಿದಂತೆ ಈಗಾಗಲೇ ಎರಡು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಿದ್ದೇವೆ. ಒಂದು ಪೆಟ್ರೋಲ್ ಪಂಪ್ ಬಳಿ ಮತ್ತು ಇನ್ನೊಂದು ಹೊಸಕೆರೆಹಳ್ಳಿ ಬಳಿ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ಅಭಯ ನೀಡಿದರು.‌

Revenue Minister R. Ashok
ಮೂರನೇ ಅಲೆ ಎದುರಿಸಲು ಪದ್ಮನಾಭನಗರ ಕ್ಷೇತ್ರದಲ್ಲಿ ಎರಡು ಮಕ್ಕಳ ಆಸ್ಪತ್ರೆ: ಸಚಿವ ಅಶೋಕ್

ನಂತರ ಕರ್ನಾಟಕ ಅರಣ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಹಾಗೂ ನಟಿ ಎಂ.ಎಸ್. ತಾರಾ ಮಾತನಾಡಿ, ಈ ಬಿಕ್ಕಟ್ಟಿನ ಸಮಯದಲ್ಲಿ ಸಚಿವ ಅಶೋಕ್​ ತಮ್ಮ ಜನರೊಂದಿಗೆ ನಿಂತಿದ್ದಾರೆ ಮತ್ತು ಜನರಿಗೆ ಆಹಾರ ಕಿಟ್ ನೀಡುವ ಮೂಲಕ ಅದ್ಭುತ ಸೇವೆ ಮಾಡುತ್ತಿದ್ದಾರೆ ಎಂದು ತಿಳಿದಾಗ ನನಗೆ ಸಂತೋಷವಾಗಿದೆ. ಅವರು ನನ್ನ ಹಿರಿಯ ಸಹೋದರನಂತೆ ಮತ್ತು ಬಡವರಿಗೆ ಅವರು ಮಾಡಿದ ಸೇವೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಇದನ್ನೂ ಓದಿ: ಓರ್ವ ಯುವತಿಗೋಸ್ಕರ ಇಬ್ಬರು ಆತ್ಮಹತ್ಯೆ, ಆಸ್ಪತ್ರೆ ಸೇರಿದ ಮತ್ತಿಬ್ಬರು... ಏನಿದು ಲವ್​ ಕಹಾನಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.