ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಹಾಗೂ ರಾತ್ರಿ ವೇಳೆ ಒಟ್ಟು 15 ಮಿ.ಮೀ ಮಳೆಯಾಗಿದೆ. ಇಂದು ಮತ್ತು ನಾಳೆಯೂ ಮೋಡಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗಲಿದೆ. ನಿನ್ನೆ ಸುರಿದ ಮಳೆ -ಗಾಳಿಗೆ ನಗರದ ಹಲವೆಡೆ ಮರಗಳು ನೆಲಕ್ಕುರುಳಿವೆ.
ಯಶವಂತಪುರ ಮೈಸೂರು ಲ್ಯಾಂಪ್ಸ್ ರಸ್ತೆಯಲ್ಲಿ ಬೆಳಗ್ಗೆ 6:30ರ ಸುಮಾರಿಗೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಸಂಪೂರ್ಣ ಎರಡೂ ರಸ್ತೆಗಳಿಗೂ ಅಡ್ಡವಾಗಿ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಪೂರ್ವ ವಲಯ: ಸಾಧಾರಣ ಮಳೆಯಾಗಿದ್ದು, ಹಲವೆಡೆ ಮರಗಳು ಬಿದ್ದಿರುವ ದೂರುಗಳು ಪಾಲಿಕೆಗೆ ಬಂದಿವೆ. ಸದ್ಯ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಓಂಬರ್ ಲೇಔಟ್ನ, ಸಿಎಮ್ಆರ್ ಲಾ ಕಾಲೇಜ್ ಬಳಿ ಮೊದಲನೇ ಕ್ರಾಸ್ನಲ್ಲಿ ಮರ ಬಿದ್ದಿದ್ದು ತೆರವು ಮಾಡಲಾಗಿದೆ. ಹೈಗ್ರೌಂಡ್ ಹಾಗೂ ಕೆ.ಆರ್ ಗಾರ್ಡನ್ ಮೊದಲನೇ ಹಂತದಲ್ಲೂ ಬಿದ್ದ ಮರವನ್ನು ತೆರವು ಮಾಡಲಾಗಿದೆ.
ಪಶ್ಚಿಮ ವಲಯ- ಕಡಿಮೆ ಪ್ರಮಾಣದ ಮಳೆಯಾಗಿದ್ದು, ಯಾವುದೇ ಸಮಸ್ಯೆ ಆಗಿಲ್ಲ.
ದಕ್ಷಿಣ ವಲಯ- ಈ ವಲಯದಲ್ಲಿ ಅತ್ಯಧಿಕ ಮಳೆಯಾಗಿದೆ. ಕುಮಾರಸ್ವಾಮಿ ಲೇಔಟ್ನ ಇಸ್ರೋ ಲೇಔಟ್ ಬಸ್ ನಿಲ್ದಾಣದಲ್ಲಿ ಮರಗಳು ಧರೆಗುರುಳಿದ್ದು, ತೆರವು ಮಾಡಲಾಗಿದೆ.
ಆರ್ಆರ್ ನಗರ- ಸಾಧಾರಣ ಮಳೆಯಾಗಿದ್ದು, ನಾಗದೇವನಹಳ್ಳಿಯಲ್ಲಿ ಕಟ್ಟಡದ ಸೆಲ್ಲಾರ್ ಒಳಗೆ ನೀರು ತುಂಬಿದೆ. ಈ ಬಗ್ಗೆ ಪಾಲಿಕೆಗೆ ದೂರು ಬಂದಿದ್ದು, ಸ್ಥಳೀಯ ಇಂಜಿನಿಯರ್ ಗಮನಕ್ಕೆ ತರಲಾಗಿದೆ.
ಮಹದೇವಪುರ- ಸಾಧಾರಣ ಮಳೆಯಾಗಿದ್ದು, ಪೈ ಲೇಔಟ್ ಗೆ ನೀರು ನುಗ್ಗಿದೆ.
ಇದನ್ನೂ ಓದಿ: ಮಂಗಳೂರಲ್ಲಿ ದಸರಾ ಪಾರ್ಟಿ ವೇಳೆ ಜಗಳ: ಸ್ನೇಹಿತನಿಗೆ ಚೂರಿ ಇರಿದು ಕೊಂದ ಕಿರಾತಕ
ದಾಸರಹಳ್ಳಿ, ಯಲಹಂಕ ಹಾಗೂ ಬೊಮ್ಮನಹಳ್ಳಿಯಲ್ಲಿ ಯಾವುದೇ ಮಳೆ ಸಮಸ್ಯೆಗಳು ವರದಿಯಾಗಿಲ್ಲ.