ETV Bharat / city

ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನು ಖುದ್ದು ಪ್ಯಾಕ್​ ಮಾಡಿದ ಇನ್ಫಿ ಸುಧಾಮೂರ್ತಿ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬೇಕಾದ ತುರ್ತು ಅಗತ್ಯ ಸಾಮಗ್ರಿಗಳನ್ನು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೇತೃತ್ವದಲ್ಲಿ ರವಾನೆ ಮಾಡಲಾಯಿತು.

Infosys foundation
author img

By

Published : Aug 11, 2019, 3:05 AM IST

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೇತೃತ್ವದಲ್ಲಿ ಶನಿವಾರ ಪ್ರವಾಹ ಸಂತ್ರಸ್ತರಿಗೆ ತುರ್ತು ಅಗತ್ಯ ಹಾಗೂ ಬಳಕೆಗೆ ಅನುಕೂಲವಾಗುವ ಸಾಮಗ್ರಿಗಳ ರವಾನೆ ಮಾಡಲಾಯಿತು.

ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ತಂಗಿರುವ ನಾಗರಿಕರಿಗೆ ಈ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯವನ್ನು ಇನ್ಫೋಸಿಸ್ ಫೌಂಡೇಶನ್ ನೇರವಾಗಿ ಮಾಡುತ್ತಿದೆ. ಶನಿವಾರ ಬೆಳಗ್ಗೆ ಹುಬ್ಬಳ್ಳಿ ಹಾಗೂ ಬಾಗಲಕೋಟೆಗೆ ಅಗತ್ಯ ವಸ್ತುಗಳನ್ನು ಹೊತ್ತು ತೆರಳಿದ ವಾಹನಗಳು ಸಂಜೆ ಧಾರವಾಡಕ್ಕೆ ತಲುಪಿವೆ.

ಇನ್ಫೋಸಿಸ್​ ಫೌಂಡೇಶನ್​​ನಿಂದ ಅಗತ್ಯ ಪರಿಹಾರ ಸಾಮಗ್ರಿ ರವಾನೆ

ಫೌಂಡೇಶನ್​ನ ಸದಸ್ಯರಿಂದಲೂ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಖುದ್ದು ಸುಧಾಮೂರ್ತಿ ಅವರೇ ಈ ಸಂಗ್ರಹ ಕಾರ್ಯದ ಮೇಲ್ವಿಚಾರಣೆ ಹಾಗೂ ವಾಹನಕ್ಕೆ ತುಂಬಿಸುವ ಸಂದರ್ಭ ಸ್ಥಳದಲ್ಲಿದ್ದು ಪರಿಶೀಲಿಸಿದರು. ಎರಡು ದಿನಗಳಿಂದ ನಿರಂತರವಾಗಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈಗಾಗಲೇ ಅವರು ನೆರೆ ಸಂತ್ರಸ್ತರ ನೆರವಿಗೆ ₹ 10 ಕೋಟಿ ನೀಡಿದ್ದಾರೆ.

ಕಳೆದ ವರ್ಷ ಭಾರಿ ಮಳೆಯಿಂದಾಗಿ ಮಡಿಕೇರಿ ಹಾಗೂ ಕೇರಳದಲ್ಲಿ ಉಂಟಾದ ಪ್ರವಾಹ ಸಂದರ್ಭ ಮನೆ ಕಳೆದುಕೊಂಡವರಿಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸುಧಾಮೂರ್ತಿ ಅವರು ಸಹಾಯಹಸ್ತ ಚಾಚಿ ಸೂರು ಕಲ್ಪಿಸಿದ್ದರು. ಈ ಬಾರಿಯೂ ಅದೇ ರೀತಿ ಒಳ್ಳೆಯ ಕಾರ್ಯವನ್ನು ಮುಂದುವರಿಸಿದ್ದಾರೆ.

Intro:newsBody:ಇನ್ಫೋಸಿಸ್ ಫೌಂಡೇಶನ್ ನಿಂದ ಅಗತ್ಯ ಪರಿಹಾರ ಸಾಮಗ್ರಿ ರವಾನೆ

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೇತೃತ್ವದಲ್ಲಿ ಇಂದು ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಅಗತ್ಯ ಸಾಮಗ್ರಿಗಳ ರವಾನೆ ಮಾಡಲಾಯಿತು.
ಪ್ರವಾಹದಿಂದ ಸಂತ್ರಸ್ತರಾಗಿರುವ ನಾಗರಿಕರ ತುರ್ತು ಅಗತ್ಯ ಹಾಗೂ ಬಳಕೆಗೆ ಅನುಕೂಲವಾಗುವ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ವಾಹನಗಳಲ್ಲಿ ತುಂಬಿಸಿ ಕಳಿಸಿ ಕೊಡಲಾಯಿತು. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಅಗತ್ಯ ಸಾಮಗ್ರಿಗಳನ್ನು ಹೊತ್ತ ವಾಹನಗಳು ತೆರಳಿದವು.
ಇಂದು ಬೆಳಿಗ್ಗೆ ಹುಬ್ಬಳ್ಳಿ ಹಾಗೂ ಬಾಗಲಕೋಟೆಗೆ ಅಗತ್ಯ ವಸ್ತುಗಳನ್ನು ಹೊತ್ತ ವಾಹನಗಳು ತೆರಳಿದರೆ ಸಂಜೆ ಧಾರವಾಡಕ್ಕೆ ವಾಹನ ತೆರಳಿವೆ. ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡು, ನಿರಾಶ್ರಿತರ ಕೇಂದ್ರದಲ್ಲಿ ತಂಗಿರುವ ನಾಗರಿಕರಿಗೆ ಈ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯವನ್ನು ಇನ್ಫೋಸಿಸ್ ಫೌಂಡೇಶನ್ ನೇರವಾಗಿ ಮಾಡುತ್ತಿದೆ. ಫೌಂಡೇಶನ್ ಸದಸ್ಯರಿಂದ ಸಂಗ್ರಹಿಸಲಾದ ವಸ್ತುಗಳನ್ನು ರವಾನೆ ಮಾಡಲಾಗಿದ್ದು ಕಳೆದ ಎರಡು ಮೂರು ದಿನಗಳಿಂದ ಇವನ ಸಂಗ್ರಹಿಸುವ ಕಾರ್ಯ ನಡೆದಿತ್ತು.
ಖುದ್ದು ಸುಧಾಮೂರ್ತಿ ಅವರೇ ಈ ಸಂಗ್ರಹ ಕಾರ್ಯದ ಮೇಲ್ವಿಚಾರಣೆ ಹಾಗೂ ವಾಹನಕ್ಕೆ ತುಂಬಿಸುವ ಸಂದರ್ಭ ಸ್ಥಳದಲ್ಲಿದ್ದು ಪರಿಶೀಲಿಸಿದ್ದರು. ಕಳೆದ ಎರಡು ದಿನಗಳಿಂದ ಇವರು ನಿರಂತರವಾಗಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಕಳೆದ ವರ್ಷ ಭಾರಿ ಮಳೆಯಿಂದಾಗಿ ಮಡಿಕೇರಿ ಹಾಗೂ ಕೇರಳದಲ್ಲಿ ಉಂಟಾದ ಪ್ರವಾಹ ಸಂದರ್ಭ ಮನೆ ಕಳೆದುಕೊಂಡವರಿಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸುಧಾಮೂರ್ತಿ ಅವರು ಸಹಾಯಹಸ್ತ ಚಾಚಿದರು. ಈ ಸಾರಿಯು ಅದನ್ನು ಮುಂದುವರಿಸಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.