ETV Bharat / city

ಬೀದಿಬದಿ ಆಹಾರ ಪದಾರ್ಥ ಮಾರಾಟ ವ್ಯಾಪಾರಿಗಳಿಗೆ ತರಬೇತಿ, ಪ್ರಮಾಣ ಪತ್ರ : ಬಿಬಿಎಂಪಿ - ಬೀಬಿಬದಿ ಆಹಾರ ಪದಾರ್ಥ ಮಾರಾಟಗಾರರಿಗೆ ತರಬೇತಿ

ಫೆಬ್ರವರಿ 19ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳದಿದ್ದರೆ ಮತ್ತು ಪ್ರಮಾಣ ಪತ್ರವಿಲ್ಲದೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಸಹ ಬಿಬಿಎಂಪಿ ಎಚ್ಚರಿಸಿದೆ..

street-vendors
ಬಿಬಿಎಂಪಿ
author img

By

Published : Jan 31, 2022, 5:18 PM IST

ಬೆಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿಬದಿಗಳಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳು ಸುರಕ್ಷತೆ, ಸ್ವಚ್ಛತೆ ಮತ್ತು ಗುಣಮಟ್ಟದಿಂದ ಕೂಡಿರಬೇಕು. ಇದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅತ್ಯವಶ್ಯಕವಾಗಿರುತ್ತದೆ ಎಂದು ಪಾಲಿಕೆ ಅಭಿಪ್ರಾಯಪಟ್ಟಿದೆ.

ಇದರಿಂದ ಪಶ್ಚಿಮ ವಲಯದ ಗಾಂಧಿನಗರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಬಡಾವಣೆ, ಗೋವಿಂದರಾಜನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್ಎ​ಸ್​ಎಐ) ಸಂಸ್ಥೆಯಿಂದ ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ಗುಣಮಟ್ಟದ ವಿಷಯಗಳ ಬಗ್ಗೆ ತರಬೇತಿ ನೀಡಿ ಪ್ರಮಾಣಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಿಬಿಎಂಪಿ ಹೊರಡಿಸಿದ ಆದೇಶ
ಬಿಬಿಎಂಪಿ ಹೊರಡಿಸಿದ ಆದೇಶ

ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಬೀದಿಬದಿಯ ವ್ಯಾಪಾರಿಗಳು ತರಬೇತಿ ಮತ್ತು ಪ್ರಮಾಣಪತ್ರ ಪಡೆಯಲು ತಮ್ಮ ವಿವರಗಳೊಂದಿಗೆ ಪಾಲಿಕೆ ಪಶ್ಚಿಮ ವಲಯದ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಂಪರ್ಕಿಸಬೇಕು ಎಂದು ಸೂಚಿಸಿದೆ.

ಫೆಬ್ರವರಿ 19ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳದಿದ್ದರೆ ಮತ್ತು ಪ್ರಮಾಣ ಪತ್ರವಿಲ್ಲದೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಸಹ ಬಿಬಿಎಂಪಿ ಎಚ್ಚರಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.