ಬೆಂಗಳೂರು:ಇಂದಿನಿಂದ (ಸೆ.1) ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ಅನ್ವಯ ಹೊಸ ಸಂಚಾರಿ ನಿಯಮ ಜಾರಿಗೆ ಬಂದಿದೆ. ಆದರೆ, ರಾಜ್ಯ ಸಾರಿಗೆ ಇಲಾಖೆಗೆ ಆ ಅಧಿಸೂಚನೆ ಕೈ ತಲುಪದ ಕಾರಣ ಬೆಂಗಳೂರಿನಲ್ಲಿ ಪರಿಷ್ಕೃತ ದಂಡದ ನಿಯಮ ಜಾರಿಯಾಗಿಲ್ಲ.
ಅಧಿಸೂಚನೆ ತಲುಪಿದ ತಕ್ಷಣ ಈ ನಿಯಮ ಜಾರಿಗೆ ಬರಲಿದೆ. ಅಲ್ಲಿಯವರೆಗೂ ಬೆಂಗಳೂರು ವಾಹನ ಸವಾರರಿಗೆ ಪರಿಷ್ಕೃತ ದಂಡ ವಿಧಿಸಲು ಆಗುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಅದರ ಮರು ಅಧಿಸೂಚನೆ ಹೊರಡಿಸಬೇಕಿದ್ದ ಕರ್ನಾಟಕ ಸಾರಿಗೆ ಇಲಾಖೆಯು ಇನ್ನೂ ಹೊರಡಿಸಿಲ್ಲ. ಆದ್ದರಿಂದ ನೂತನ ನಿಯಮ ತಕ್ಷಣವೇ ಜಾರಿಯಾಗುವುದಿಲ್ಲ ಎಂದು ತಿಳಿಸಿದರು.
ಕಾಯ್ದೆಯನ್ವಯ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ಜುಲ್ಮಾನೆಯನ್ನು ಹೆಚ್ಚಿಸಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು.
ದಂಡದ ಮೊತ್ತ (₹ ಗಳಲ್ಲಿ)
ನಿಯಮಗಳು | ಮೊದಲಿದ್ದ ದಂಡ | ಪರಿಷ್ಕೃತ ದಂಡ |
ಹೆಲ್ಮೆಟ್ ಧರಿಸದೆ ಚಾಲನೆ | 100 | 1000 |
ಅತಿವೇಗದ ಚಾಲನೆ | 500 | 5,000 |
ಸೀಟ್ ಬೆಲ್ಟ್ ಇಲ್ಲದೇ ಚಾಲನೆ | 100 | 1,000 |
ಮದ್ಯಸೇವಿಸಿ ಚಾಲನೆ | 2,000 | 10,000 |
ಅಪ್ರಾಪ್ತರು ವಾಹನ ಚಾಲನೆ | - | 25,000 |