ETV Bharat / city

ನಾಳೆ ಎಸ್​​.ಎಂ.ಕೃಷ್ಣಾರನ್ನು ಭೇಟಿ ಮಾಡಲಿರುವ ಸುಮಲತಾ: ಸಿಗುತ್ತಾ ಬೆಂಬಲ!?

ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿರುವ ನಟಿ ಸುಮಲತಾ ಅಂಬರೀಶ್ ನಾಳೆ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಆಗಮಿಸಿ ರಾಜಕೀಯ ಪ್ರವೇಶದ ಕುರಿತು ಚರ್ಚೆ ನಡೆಸಲಿದ್ದಾರೆ.

author img

By

Published : Mar 13, 2019, 9:06 PM IST

ಸಂಗ್ರಹ ಚಿತ್ರ-ಸುಮಲತಾ, ಎಸ್.ಎಂ.ಕೃಷ್ಣ

ಬೆಂಗಳೂರು: ಮಂಡ್ಯದಿಂದ ಕಣಕ್ಕಿಳಿಯಲು ತಯಾರಿ ಆರಂಭಿಸಿರುವ ನಟಿ ಸುಮಲತಾ ಅಂಬರೀಶ್ ನಾಳೆ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ ಎನ್ನಲಾಗಿದೆ.

ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಆಗಮಿಸಲಿರುವ ಸುಮಲತಾ, ರಾಜಕೀಯ ಪ್ರವೇಶ, ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿರುವ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಮಂಡ್ಯದಲ್ಲಿ ಎಸ್.ಎಂ.ಕೃಷ್ಣ ತಮ್ಮದೇ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಜೊತೆಗೆ ಬಹು ನಿರ್ಣಾಯಕರು ಒಕ್ಕಲಿಗ ಸಮುದಾಯದ ಮತದಾರರಾಗಿದ್ದು, ಎಸ್​.ಎಂ.ಕೃಷ್ಣ ಕೂಡ ಒಕ್ಕಲಿಗ ಸಮುದಾಯದ ನಾಯಕರು. ಹಾಗಾಗಿ ಚುನಾವಣೆಯಲ್ಲಿ ಕೃಷ್ಣ ಬೆಂಬಲ ಸಿಕ್ಕರೆ ಗೆಲ್ಲಲು ಸಹಕಾರವಾಗಲಿದೆ ಎನ್ನುವುದು ಸುಮಲತಾ‌ ಲೆಕ್ಕಾಚಾರವಾಗಿದೆ.

ಸದ್ಯ ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ನಿರ್ಧಾರದ ನಂತರವೇ ಬಿಜೆಪಿ ಅಭ್ಯರ್ಥಿ ಅಂತಿಮಗೊಳಿಸಲು ನಿರ್ಧರಿಸಿದ್ದು, ಬಹುತೇಕವಾಗಿ ಸುಮಲತಾ ಪಕ್ಷೇತರ ಅಭ್ಯರ್ಥಿ ಆಗಿ ನಿಂತರೆ ಬೆಂಬಲ ನೀಡಬೇಕು ಎನ್ನುವ ತಂತ್ರ ಅನುಸರಿಸುತ್ತಿದೆ. ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದು, ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಳೆ ಸುಮಲತಾ ಅಂಬರೀಶ್, ಎಸ್.ಎಂ.ಕೃಷ್ಣ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.