ETV Bharat / city

ರಾಜ್ಯಾದ್ಯಂತ ನಾಲ್ಕು ಸಾರಿಗೆ ನಿಗಮಗಳ ಬಸ್​​ ಸ್ಥಗಿತ: ನಾಳೆ ನಿಲ್ದಾಣಕ್ಕೆ ಬರೋ ಮುನ್ನ ಎಚ್ಚರ.. ಎಚ್ಚರ!

author img

By

Published : Apr 6, 2021, 10:41 PM IST

Updated : Apr 6, 2021, 11:07 PM IST

ಈಗಾಗಲೇ 8 ಬೇಡಿಕೆ ಈಡೇರಿಸಿರುವ ಸರ್ಕಾರ, ಆರನೇ ವೇತನ ಆಯೋಗ ಜಾರಿ ಮಾಡುವ ಭರವಸೆ ನೀಡಿತ್ತು. ಅದನ್ನ ಪರಿಗಣಿಸಲು ಕಾಲಾವಕಾಶ ಕೇಳಿತ್ತು, ಆದರೆ, ಅವಧಿ ಮುಗಿದ ಬಳಿಕವೂ ಬೇಡಿಕೆ ಈಡೇರದ ಕಾರಣ ನಾಳೆ ಸಾರಿಗೆ ನೌಕರರು ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಹೀಗಾಗಿ ನಾಳೆ ಬೆಳಗ್ಗೆ 6 ಗಂಟೆಗೆ ಎಲ್ಲ ನಾಲ್ಕು ನಿಗಮದ ಬಸ್​ಗಳ ಸಂಚಾರ ಸ್ಥಬ್ದವಾಗಲಿದೆ.

tomorrow strike all buses will be stop
ರಾಜ್ಯಾದ್ಯಂತ ನಾಲ್ಕು ಸಾರಿಗೆ ನಿಗಮಗಳ ಬಸ್​​ ಸ್ಥಗಿತ: ನಾಳೆ ನಿಲ್ದಾಣಕ್ಕೆ ಬರೋ ಮುನ್ನ ಎಚ್ಚರ

ಬೆಂಗಳೂರು: ಸರ್ಕಾರಿ ನೌಕರರು ಪಡೆಯುತ್ತಿರುವ ಎಲ್ಲ ಸವಲತ್ತುಗಳನ್ನು ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೂ ಸಹ ವಿಸ್ತರಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕಳೆದ 6 ದಿನಗಳಿಂದ ಮುಷ್ಕರ ನಡೆಸುತ್ತಿದೆ. ನಾಳೆಯಿಂದ ಕೆಲಸಕ್ಕೆ ಗೈರಾಗಿ ಬಸ್​​​ಗಳನ್ನ ರೋಡಿಗಿಳಿಸದೇ ಪ್ರತಿಭಟಿಸಲು ಸಜ್ಜಾಗಿದ್ದು, ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಕೊರೊನಾ ಏರಿಕೆಯ ತಲೆಬಿಸಿಯಲ್ಲಿ ಇರುವ ಸರ್ಕಾರಕ್ಕೆ ಇದೀಗ ಮತ್ತೊಮ್ಮೆ ಸಾರಿಗೆ ನೌಕರರ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.‌

ಸಾರಿಗೆ ಸಿಬ್ಬಂದಿಗಳ ಮುಷ್ಕರದ ಹಿಂದಿನ ದಾರಿ
ಈ ಹಿಂದೆ ಡಿಸೆಂಬರ್ 11 ರಿಂದ 14ರ ವರೆಗೆ ದಿಢೀರ್ ಬಸ್​ ಸ್ಥಗಿತಗೊಳ್ಳಿಸಲಾಗಿತ್ತು.. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನೌಕರರ ಕೂಟದ ಪದಾಧಿಕಾರಿಗಳೊಂದಿಗೆ ಡಿಸೆಂಬರ್ 13ರಂದು ಸಭೆ ನಡೆಸಿತ್ತು. ಆಗ ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿತ್ತು. ಇದಕ್ಕೆ ಪ್ರತಿಯಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ತಂಡದವರು ರಾಜ್ಯ ಸರ್ಕಾರದ 6ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ರಸ್ತೆ ಸಾರಿಗೆ ನಿಗಮಗಳಲ್ಲಿ ಸಹ ಅಳವಡಿಸಿಕೊಳ್ಳಬೇಕು ಎಂಬ ಬೇಡಿಕೆಯೂ ಸೇರಿದಂತೆ 9 ಹೊಸ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಿತ್ತು.

8 ಬೇಡಿಕೆಗಳಿಗೆ ಸ್ಪಂದಿಸಿರುವ ಸರ್ಕಾರ
ಆ ಪೈಕಿ, ಈಗಾಗಲೇ 8 ಬೇಡಿಕೆಗಳಿಗೆ ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಪರಿಗಣಿಸಿ ಸೂಕ್ತ ಆದೇಶಗಳನ್ನು ಹೊರಡಿಸಿತು. ಇನ್ನು 9 ನೇ ಬೇಡಿಕೆಯಾದ 6ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವ ಸಂಬಂಧ, ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವ ನಿಟ್ಟಿನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಈ ಪ್ರಸ್ತಾವನೆಯ ಆಡಳಿತಾತ್ಮಕ, ಕಾನೂನಾತ್ಮಕ ಮತ್ತು ಆರ್ಥಿಕ ಅಂಶಗಳನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ಕಳುಹಿಸಬೇಕಿದೆ. ಇದಕ್ಕೆ ಸಮಯಾವಕಾಶ ಬೇಕಾಗುತ್ತದೆ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದವರೊಂದಿಗೆ ನಾಲ್ಕು ನಿಗಮಗಳ ಆಡಳಿತ ವರ್ಗವು ಮಾರ್ಚ್ ಮಾರ್ಚ್ 06 ಮತ್ತು 20ರಂದು ಸಭೆ ನಡೆಸಿ, ಕೂಲಂಕಷವಾಗಿ ಚರ್ಚಿಸಲಾಗಿದೆ. ಆದಾಗ್ಯೂ, ಸರ್ಕಾರದ ಆರನೇ ವೇತನ ಆಯೋಗದ ಶಿಫಾರಸುಗಳನ್ನು ರಸ್ತೆ ಸಾರಿಗೆ ನಿಗಮಗಳಲ್ಲಿ ಯಥಾವತ್ತಾಗಿ
ಅಳವಡಿಸಿಕೊಳ್ಳುವ ಈ ಬೇಡಿಕೆಯನ್ನು ಈಡೇರಿಸಿರುವುದಿಲ್ಲವೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಒಕ್ಕೂಟ ನಾಳೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.‌

ಸಾರಿಗೆ ನೌಕರರ ಬೇಡಿಕೆ ಈಡೇರಿಸಿದ್ದು ಯಾವುದು? ಬಾಕಿ ಬೇಡಿಕೆ ಏನು?

1) ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ
2) ಕೋವಿಡ್ 19 ನಿಂದ ಸಾವಿಗೀಡಾದ್ರೆ 30 ಲಕ್ಷ ಪರಿಹಾರ
3) ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ
4) ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
5) ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು
6) ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ
7) ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ
8) ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ
9) ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ

ಈಗಾಗಲೇ 8 ಬೇಡಿಕೆ ಈಡೇರಿಸಿರುವ ಸರ್ಕಾರ, ಆರನೇ ವೇತನ ಆಯೋಗ ಜಾರಿ ಮಾಡುವ ಭರವಸೆ ನೀಡಿತ್ತು..ಅದನ್ನ ಪರಿಗಣಿಸಲು ಕಾಲಾವಕಾಶ ಕೇಳಿತ್ತು, ಆದರೆ, ಅವಧಿ ಮುಗಿದ ಬಳಿಕವೂ ಬೇಡಿಕೆ ಈಡೇರದ ಕಾರಣ ನಾಳೆ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ‌ನಾಳೆ ಬೆಳಗ್ಗೆ 6 ಗಂಟೆಗೆ ಎಲ್ಲ ನಾಲ್ಕು ನಿಗಮದ ಬಸ್​ಗಳ ಸಂಚಾರ ಸ್ಥಬ್ದವಾಗಲಿದೆ.

ವಾಹನ ತೆರಿಗೆ ವಿನಾಯಿತಿ ನೀಡಿ ಖಾಸಗಿ ವಾಹನಗಳ ಚಾಲನೆಗೆ ಅವಕಾಶ
ಇತ್ತ ಸಾರಿಗೆ ಸಂಸ್ಕಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ತೊಂದರೆಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರಿಗೆ ಸುಗಮ ಸಾರಿಗೆ ವ್ಯವಸ್ಥೆಯನ್ನು ಖಾಸಗಿ ವಾಹನಗಳ ನಿಯೋಜನೆ ಮಾಡಲು ಹೊರಟಿದೆ.. ಇದಕ್ಕಾಗಿ ಖಾಸಗಿ ವಾಹನಗಳ ಮುಖಾಂತರ ಪರ್ಯಾಯವಾಗಿ ಕಲಿಸುವ ಸಂಬಂಧ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 16(1)ರ ಅನ್ವಯ ಮಾರ್ಚ್ 29 ರಂದು ಅನುಪಯುಕ್ತ (Surrender) ದಲ್ಲಿರುವ ಖಾಸಗಿ ನೋಂದಾಯಿತ ಪ್ರಯಾಣಿಕ ವರ್ಗದ ವಾಹನಗಳಿಗೆ ಏಪ್ರಿಲ್ ಗೆ ಅನ್ವಯಿಸುವಂತೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸರ್ಕಾರ ಆದೇಶಿಸಿದೆ.‌ ಹಾಗೇ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಲು ಮೆಟ್ರೋ ಸಂಚಾರದ ಅವಧಿಯನ್ನೂ ವಿಸ್ತಿರಿಸಿದೆ.‌ ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್​, ಖಾಸಗಿ ಶಾಲಾ ಬಸ್​​ಗಳ ಮುಖಾಂತರ ಬಸ್​ ಓಡಿಸಲು ಸಜ್ಜಾಗಿದೆ. ಹಾಗೇ ಬಿಎಂಟಿಸಿಯ ನಿವೃತ್ತ ನೌಕರರು , ತರಬೇತಿ ನೌಕರರು, ಬಿಎಂಟಿಸಿ ಮೆಕ್ಯಾನಿಕ್ಸ್ ಮೂಲಕ‌ವೂ ಬಸ್​ ಓಡಿಸಲು ಸರ್ಕಾರ ಪ್ಲಾನ್ ಮಾಡಿದೆ.

ಕೆಲಸಕ್ಕೆ ಹಾಜರು ಆಗಲಿಲ್ಲ ಅಂದರೆ ಎಸ್ಮಾ ಏರಿಕೆಯ ಎಚ್ಚರಿಕೆ
ಇತ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ಮಾ ಜಾರಿ ಮಾಡುವ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಸೇವೆ ಅಡಿಯಲ್ಲಿ ಸಾರಿಗೆ ಸೇವೆ ಬರುವ ಹಿನ್ನೆಲೆ ಸರ್ಕಾರಕ್ಕೆ ಎಸ್ಮಾ ಜಾರಿ ಮಾಡುವ ಅಧಿಕಾರವಿದೆ. ಹೀಗಾಗಿ, ಈ‌ಮೊದಲೇ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದು ಕೆಲಸಕ್ಕೆ ಹಾಜರು ಆಗದೇ ಇದ್ದರೆ ಅಂತಹವರ ಮೇಲೆ ಎಸ್ಮಾ ಜಾರಿ ಮಾಡಲಿದ್ದಾರೆ.

Last Updated : Apr 6, 2021, 11:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.