ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು 45 ಹೊಸ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,032ಕ್ಕೆ ಏರಿಕೆ ಆಗಿದೆ.
1,032 ಸೋಂಕಿತರ ಪೈಕಿ ಈವರೆಗೆ 476 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಉಳಿದ 520 ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಉಡುಪಿಯಲ್ಲಿ -5, ಬೆಂಗಳೂರು-13, ಬೀದರ್-3, ಕೋಲಾರ-1, ಚಿತ್ರದುರ್ಗ-2, ಬಾಗಲಕೋಟೆ-1, ಶಿವಮೊಗ್ಗ-1, ಹಾಸನ-3, ದಕ್ಷಿಣ ಕನ್ನಡ-16 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.
ದುಬೈನಿಂದ ವಾಪಸ್ ಆಗಿರುವವರು ಹಾಗೂ ಮಹಾರಾಷ್ಟ್ರ, ತಮಿಳುನಾಡಿಗೆ ಪ್ರಯಾಣ ಮಾಡಿರುವ ವ್ಯಕ್ತಿಗಳಿಗೆ ಸೋಂಕು ತಗಲಿರುವುದಾಗಿ ತಿಳಿದು ಬಂದಿದೆ.