ETV Bharat / city

ವಕೀಲನ ‌‌ಮೇಲೆ ಮಹಿಳಾ ಎಎಸ್​​ಐ ಹಲ್ಲೆ ಆರೋಪ: ಶಿಸ್ತು ಕ್ರಮಕ್ಕೆ ವಕೀಲರ ಆಗ್ರಹ - ತಿಲಕನಗರ ಎಎಸ್​​ಐ ಹಲ್ಲೆ ಸುದ್ದಿ

ಮಹಿಳಾ ಎಎಸ್​​ಐ ಲಂಚ ಸ್ವೀಕರಿಸುತ್ತಿದ್ದದ್ದನ್ನ ನೋಡಿದ ವಕೀಲನ ಮೇಲೆ ಹಲ್ಲೆ ಮಾಡಿ, ಹಣೆಗೆ ಗನ್​ ಪಾಯಿಂಟ್​​ ಇಟ್ಟು ಬೆದರಿಸಿದ ಆರೋಪ ಪ್ರಕರಣ ಬೆಂಗಳೂರಿನ ತಿಲಕ್​​ನಗರದಲ್ಲಿ ನಡೆದಿದೆ. ಹಲ್ಲೆ ಮಾಡಿದ ಸಬ್​​ ಇನ್ಸ್​ಪೆಕ್ಟರ್​​ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ವಕೀಲರು ಆಗ್ರಹಿಸಿದ್ದಾರೆ.

tilknagar-woman-asi-assaulted-lawyer
ವಕೀಲನ ‌‌ಮೇಲೆ ಹಲ್ಲೆ
author img

By

Published : Aug 3, 2020, 3:59 PM IST

ಬೆಂಗಳೂರು: ತಿಲಕ್​​ನಗರ ಸಬ್​​ ಇನ್ಸ್​ಪೆಕ್ಟರ್​​ ಲಂಚ ಸ್ವೀಕರಿಸುತ್ತಿದ್ದ ದೃಶ್ಯವನ್ನ ನೋಡಿದ ವಕೀಲನ ಮೇಲೆ ಮಹಿಳಾ ಎಎಸ್​ಐ ಹಲ್ಲೆ ಮಾಡಿರುವ ಆರೋಪ ಪ್ರಕರಣ ತಿಲಕ್ ನಗರದಲ್ಲಿ ನಡೆದಿದೆ.

ವಕೀಲ ಅನಿಲ್ ಕುಮಾರ್ ಕೇಸ್ ವಿಚಾರವಾಗಿ ಮಾತನಾಡಲು ತಿಲಕ್ ನಗರ ಠಾಣೆಯ ಬರುತ್ತಿರುವಾಗ, ಸಬ್​​ ಇನ್ಸ್​ಪೆಕ್ಟರ್​​ ಅನೂಸೂಯ ಠಾಣಾ ವ್ಯಾಪ್ತಿಯಲ್ಲಿ ಬೇರೆಯವರಿಂದ ಹಣ ವಸೂಲಿ ‌ಮಾಡುತ್ತಿದ್ದನ್ನು ನೋಡಿದ್ದಾರೆ. ಈ ವೇಳೆ ವಕೀಲ ಮೊಬೈಲ್​ನಲ್ಲಿ ವಿಡಿಯೋ ಸೆರೆಹಿಡಿದಿದ್ದಾನೆ ಎಂದು ಆರೋಪಿಸಿ ಎಎಸ್​​ಐ, ಅನಿಲ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ‌ತಲೆಗೆ ಗನ್ ಪಾಯಿಂಟ್ ಇಟ್ಟು ಎನ್​ಕೌಂಟರ್ ಮಾಡುವುದಾಗಿ ಬೆದರಿಕೆಯೂ ಹಾಕಿದ್ದಾರೆ. ಮೊಬೈಲ್ ಕಸಿದು ವಿಡಿಯೋ ಹಾಗೂ ಫೋಟೋ ಡಿಲೀಟ್ ಮಾಡಿದ್ದಾರೆ ಎಂದು ವಕೀಲರು ದೂರಿದ್ದಾರೆ.

ವಕೀಲನ ‌‌ಮೇಲೆ ಮಹಿಳಾ ಎಎಸ್​​ಐ ಹಲ್ಲೆ ಆರೋಪ

ಹಲ್ಲೆ ಮಾಡಿದ ಸಬ್​​ ಇನ್ಪೆಕ್ಟರ್​​ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ‌ ನಗರ ಹೆಚ್ಚುವರಿ ಆಯುಕ್ತ ಮುರುಗನ್ ಅವರಿಗೆ ವಕೀಲರು ದೂರು ನೀಡಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.